ಸುರಪುರ: ಭಾರತಕ್ಕೆ ಮಾದರಿ ಸಂವಿಧಾನ ಬರೆದು ಕೊಟ್ಟ ಮಹಾಪುರುಷ ಡಾ:ಬಾಬಾ ಸಾಹೇಬ್ ಅಂಬೇಡ್ಕರ ಅವರು.ಅಂತಹ ಮಹಾ ಪುರುಷನನ್ನು ಅಪಮಾನಿಸುವ ದುಷ್ಟ ಶಕ್ತಿಗಳಿರುವುದು ಕೇವಲ ಭಾರತದಲ್ಲಿ ಎಂಬುದು ನೋವಿನ ಸಂಗತೊಯಾಗಿದೆ ಎಂದು ದಲಿತ ಸೇನೆ ತಾಲೂಕು ಸಂಚಾಲಕ ನಿಂಗಣ್ಣ ಗೋನಾಲ ಬೇಸರ ವ್ಯಕ್ತಪಡಿಸಿದರು.
ಮುಂಬೈನ ದಾದರನಲ್ಲಿರುವ ಡಾ: ಬಿ.ಆರ್.ಅಂಬೇಡ್ಕರ ಅವರ ಮನೆಯ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ದಲಿತ ಸೇನೆ ವತಿಯಿಂದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಮನೆಯ ಕಿಟಿಕಿ ಬಾಗಿಲು ಗಾಜು ಹೊಡೆದು,ಸಿಸಿ ಕ್ಯಾಮಾರ್ ದ್ವಂಸಗೊಳಿಸಿ ಮತ್ತು ಮನೆಯ ಹಿಂಬದಿಯಲ್ಲಿನ ಮುದ್ರಣಾಲಯವನ್ನು ದ್ವಂಸಗೊಳಿಸಿ ವಿಕೃತಿ ಮೆರೆದ ದುಷ್ಕರ್ಮಿಗಳನ್ನು ದೇಶದ್ರೋಹಿಗಳಡಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಮತ್ತು ಅಂಬೇಡ್ಕರರ ಮನೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು.ಒಂದು ವೇಳೆ ಈ ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ದೇಶಾದ್ಯಂತ ಇರುವ ಅಂಬೇಡ್ಕರರ ಅನುಯಾಯಿಗಳು ಮತ್ತು ಅಭಿಮಾನಿಗಳು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.
ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸುಭಾಷ ತೇಲ್ಕರ್ ಮಾನಪ್ಪ ಝಂಡದಕೇರಾ ತಾಯಪ್ಪ ಕನ್ನೆಳ್ಳಿ ಮೌನೇಶ ಹುಣಸಿಹೊಳೆ ನಾಗು ಗೋಗಿಕೆರಾ ಶಿವಣ್ಣ ನಾಗರಾಳ ಪ್ರಕಾಶ ಕೆಂಭಾವಿ ಶಿವಶಂಕರ ಗೋನಾಲ ಹುಲಗಪ್ಪ ದೇವತ್ಕಲ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…