ಸುರಪುರ: ಜಗತ್ತಿನ ಅನೇಕ ರಾಷ್ಟ್ರಗಳ ಲಿಖಿತ ಮತ್ತು ಅಲಿಖಿತ ಸಂವಿಧಾನವನ್ನು ಅಭ್ಯಾಸ ಮಾಡಿ ಸುಮಾರು ಎರಡು ವರ್ಷಗಳ ಸತತ ಪರಿಶ್ರಮದಿಂದ ಭಾರತಕ್ಕೆ ಜಗತ್ತು ಮೆಚ್ಚಿದ ಸಂವಿಧಾನ ಬರೆದು ಕೊಟ್ಟ ಡಾ: ಬಾಬಾ ಸಾಹೇಬ್ ಅಂಬೇಡ್ಕರ ಅವರ ದಾದರ್‌ನ ರಾಜಗೃದ ಮೇಲೆ ದಾಳಿ ಮಾಡಿರುವುದು ಅಕ್ಷ್ಯಮ್ಯ ಕೃತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ತಳವಾರ ಮಾತನಾಡಿದರು.
ನಗರದ ತಹಸೀಲ್ ಕಚೇರಿ ಮುಂದೆ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಅಂಬೇಡ್ಕರ ಅವರ ಮಹಾ ಪರಿವಾಣದ ಮನೆಯನ್ನು ಮಹಾರಾಷ್ಟ್ರ ಸರಕಾರ ಮ್ಯೂಸಿಯಂನ್ನಾಗಿ ಮಾಡಿದೆ.ಈ ಮನೆಗೆ ನಿತ್ಯವು ಸಾವಿರಾರು ಜನ ಅಂಬೇಡ್ಕರರ ಅನುಯಾಯಿಗಳು ಭೇಟಿ ನೀಡುತ್ತಾರೆ.ಇಂತಹ ಮಹಾ ಪುರುಷರ ಮನೆಯ ಮೇಲೆ ಅಲ್ಲಿನ ಕೆಲ ಗೂಂಡಾಗಳು ದಾಂಧಲೆ ನಡೆಸಿರುವುದು ಖಂಡನಿಯವಾಗಿದೆ.ಕೂಡಲೆ ಮನೆಯ ಮೇಲೆ ದಾಂಧಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ವಾಗಣಗೇರಾ ರಾಮಚಂದ್ರಪ್ಪ ವಾಗಣಗೇರಾ,ಅಪ್ಪಣ್ಣ ಗಾಯಕವಾಡ ಫಕೀರಪ್ಪ ವಾಗಣಗೇರಾ ಗೋವಿಂದರಾಯಗೌಡ ಶಖಾಪುರ ಬಸವರಾಜ ತಳವಾರ ಬಸವರಾಜ ಚಿಂಚೋಳಿ ಶಿವಶರಣ ನಾಗರೆಡ್ಡಿ ಮರೆಪ್ಪ ಕಾಂಗ್ರೆಸ್ ಬಸವರಾಜ ಕೆಂಭಾವಿಕರ್ ಚನ್ನಪ್ಪ ತೀರ್ಥ ಮರೆಪ್ಪ ಮಲ್ಲಾ ಚಂದ್ರಪ್ಪ ಯಾಳಗಿ ಮರೆಪ್ಪ ಕಟ್ಟಿಮನಿ ಮಂಜುನಾಥ ಕೊಂಬಿನ ಬಸವರಾಜ ಕಿರದಳ್ಳಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…