ಕಾಂಗ್ರೆಸ್ ಧೀಮಂತ ನಾಯಕನಿಗೆ 79ರ ಸಂಭ್ರಮ : ಶೈಕ್ಷಣಿಕ ಕ್ಷೇತ್ರಕ್ಕೆ ಖರ್ಗೆ ಕೊಡುಗೆ ಅಪಾರ

ಶೈಕ್ಷಣಿಕ ಕ್ಷೇತ್ರಕ್ಕೆ ಮಠಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಅಮೋಘವಾದ ಸೇವೆ ಸಲ್ಲಿಸಿವೆ, ಸಲ್ಲಿಸುತ್ತಿವೆ.
ಎಪ್ಪತ್ತರ ದಶಕದಲ್ಲಿ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಸಂಸ್ಥೆಗಳು ಸಹ ಉಳ್ಳವರ ಪಾಲಿಗೆ ವರವಾಗಿದ್ದವೇ ಹೊರತು ಬಡವರ ಪಾಲಿನ ಆಶಾ ಕಿರಣವಾಗಿರಲಿಲ್ಲ.

ಇದನ್ನು ಮನಗಂಡ ಹಿರಿಯ ರಾಜಕೀಯ ಮುತ್ಸದ್ದಿ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆಯವರು ಶೋಷಿತರಿಗೆ ಶಿಕ್ಷಣವೇ ಮಹಾ ಅಸ್ತ್ರ ಎಂದರಿತು ಕರ್ನಾಟಕ ಪೀಪಲ್ ಎಜ್ಯಕೇಷನ್ ಸೊಸಾಯಿಟಿ
ಹುಟ್ಟು ಹಾಕುವ ಮೂಲಕ ಅಕ್ಷರ ಕ್ರಾಂತಿಗೆ ನಾಂದಿ ಹಾಡಿದರು. ಇದಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಾರಾಷ್ಟ್ರದಲ್ಲಿ ನಡೆಸುತ್ತಿದ್ದ ಪೀಪಲ್ ಎಜ್ಯಕೇಷನ್ ಸೊಸಾಯಿಟಿ. ಆ ಸಂಸ್ಥೆಯನ್ನೇ ಮಾದರಿಯಾಗಿ ಇಟ್ಟುಕೊಂಡ ಖರ್ಗೆಯವರು ರಾಜ್ಯದಲ್ಲಿಯೂ ಕೆಪಿಇಎಸ್ ಸೊಸಾಯಿಟಿ ಪ್ರಾರಂಭಿಸಿದರು. ಈ ಸಂಸ್ಥೆ ಹುಟ್ಟಿಗೂ ಒಂದು ರೋಚಕ ಇತಿಹಾಸವೇ ಇದೆ.

ಕಲಬುರಗಿಯ ಜಗತ್ ಸರ್ಕಲ್ ನಲ್ಲಿ ಸ್ಥಾಪಿಸಲಾದ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ನಂತರ ಇನ್ನೂ ಸ್ವಲ್ಪ ಹಣ ಉಳಿಯಿತು. ಆ ಹಣವನ್ನು ಸಮಾಜಮುಖಿಯಾದ ಕೆಲಸಕ್ಕೆ ಬಳಕೆಯಾಗಬೇಕಾದರೆ ಏನು ಮಾಡಬಹುದು ಎಂದು ಯೋಚಿಸಿದಾಗ ಅವರಿಗೆ ಹೊಳೆದಿದ್ದೇ ಈ ಸಂಸ್ಥೆ ಹುಟ್ಟಿಗೆ ಕಾರಣ. ಕೆಪಿಇಎಸ್ ಸಂಸ್ಥೆಯಡಿಯಲ್ಲಿ ಸುಮಾರು 30ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ರಾಜ್ಯದ ವಿವಿಧ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಅವರು ಶಿಕ್ಷಣಕ್ಕೆ ಕೊಟ್ಟ ಮಹತ್ವ ತಿಳಿಸುತ್ತದೆ. ಇಂದು ಸಾವಿರಾರು ವಿದ್ಯಾರ್ಥಿಗಳಿಗೆ
ಬದುಕು ಕಟ್ಟಿಕೊಳ್ಳಲು ವೇದಿಕೆಯೂ ಆಗಿದೆ.

ಈ ಸಂಸ್ಥೆಗಳಲ್ಲಿ ಪುಟ್ಟ ಮಕ್ಕಳಿಗಾಗಿ ಪ್ಲೇಗ್ರೂಪ್‌, ಎಲ್‌ಕೆಜಿ, ಯುಕೆಜಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ, ಕಲಾ ಮತ್ತು ವಾಣಿಜ್ಯ ವಿಭಾಗಗಳನ್ನು ಒಳಗೊಂಡ ಪದವಿ ಪೂರ್ವ ಕಾಲೇಜು ವೃತ್ತಿ ಶಿಕ್ಷಣವನ್ನು ಪ್ರೋತ್ಸಾಹಿಸಲು ಡಿ.ಇಡಿ ಮತ್ತು ಬಿ.ಇಡಿ ಕಾಲೇಜು, ಹೀಗೆ ಒಂದೇ ಸೂರಿನಡಿ ಗ್ರಾಮೀಣ ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗಿದೆ.

ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಉಚಿತ ವಿದ್ಯಾರ್ಥಿನಿಲಯದ ವ್ಯವಸ್ಥೆ. ಪರಿಣತ ಶಿಕ್ಷಕರು, ಉತ್ತಮ ಪ್ರಯೋಗಾಲಯ, ಕಂಪ್ಯೂಟರ್‌ ಶಿಕ್ಷಣ , ಸ್ಪೋಕನ್‌ ಇಂಗ್ಲಿಷ್‌ ಶಿಕ್ಷಣ, ಸಂಗೀತ, ನಾಟಕ, ಕ್ರೀಡೆ, ಯೋಗ, ವ್ಯಕ್ತಿತ್ವ ವಿಕಸನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಸಾವಿರಾರು ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದು ನೆಮ್ಮದಿ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ತ್ಯಾಗಮಯಿ ಖರ್ಗೆಯವರ ಶ್ರಮವಿದೆ.

ಶಿಕ್ಷಣದಲ್ಲಿ ನೈತಿಕ‌ ಮೌಲ್ಯಗಳಿರಬೇಕು ಎಂದು ಪ್ರತಿಪಾದಿಸುತ್ತಿರುವ ಖರ್ಗೆಯವರು,
ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಅತ್ಯಂತ ಅಪಾಯಕಾರಿ. ಆದ್ದರಿಂದ ಉತ್ತಮ ನಡತೆಯ ಬೆಳವಣಿಗೆಯು ಶಿಕ್ಷಣದ ಗುರಿಯಾಗಬೇಕು ಎಂಬುದು ಅವರ ಅಶಯವಾಗಿದೆ. ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿಯೂ ಈ ಸಂಸ್ಥೆಯ ಶಾಖೆಗಳು ಪ್ರಾರಂಭಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಿ ಎಂಬುದು ನಮ್ಮೆಲ್ಲರ ಆಶಯ.

* ಕರ್ನಾಟಕ ಪೀಪಲ್ ಎಜ್ಯುಕೇಷನ್ ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ಶಾಲಾ ಕಾಲೇಜುಗಳು.
* ಡಾ. ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜ್ ಬೀದರ್
* ಸಿದ್ಧಾರ್ಥ ಸಂಯುಕ್ತ ಪದವಿ ಪೂರ್ವ ಕಾಲೇಜ್ ಬೀದರ್
* ಡಾ. ಬಿ.ಆರ್. ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಲಬುರಗಿ
* ಮಿಲಿಂದ್ ಪದವಿ ಪೂರ್ವ ಕಾಲೇಜ್ ಕಲಬುರಗಿ
* ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆ ಕಲಬುರಗಿ
* ಮಿಲಿಂದ್ ಪ್ರೌಢಶಾಲೆ ಕಲಬುರಗಿ
* ಮಾತೋಶ್ರೀ ರಮಾಬಾಯಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಲಬುರಗಿ
* ಪ್ರಿಯದರ್ಶಿನಿ ಪದವಿ ಪೂರ್ವ ಕಾಲೇಜ್ ಗುಲಬರ್ಗಾ
* ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಗುಲಬರ್ಗಾ
* ಬಿ. ಶ್ಯಾಮಸುಂದರ್ ಬಿಪಿಎಡ್ ಕಾಲೇಜ್ ಗುಲಬರ್ಗಾ
* ಕೆಪಿಇಎಸ್ ಡಿಎಡ್ ಕಾಲೇಜ್ ಗುಲಬರ್ಗಾ
* ಕನಿಷ್ಕ್ ಬಿಪಿಎಡ್ ಕಾಲೇಜ್ ರಾಯಚೂರು
* ಕನಿಷ್ಕ್ ಸಿಪಿಎಡ್ ಕಾಲೇಜ್ ರಾಯಚೂರು
* ಮಿಲಿಂದ ಬಿಎಡ್ ಕಾಲೇಜ್ ಬೆಂಗಳೂರು
* ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಬೆಂಗಳೂರು
* ಮಿಲಿಂದ್ ಫಾರ್ಮಸಿ ಕಾಲೇಜ್ ಬೆಂಗಳೂರು.
* ಬಾಲ್ಯ ಜೀವನ
* ಡಾ. ಮಲ್ಲಿಕಾರ್ಜುನ ಖರ್ಗೆಜಿಯವರು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವರವಟ್ಟಿಯಲ್ಲಿ ಮಾಪಣ್ಣ ಖರ್ಗೆ ಮತ್ತು ಸಾಬವ್ವ ದಂಪತಿಗಳ ಮಗನಾಗಿ ಜನಿಸಿದರು.

ಬಡತನದ ಬೇಗೆಯಲ್ಲಿ ಬೆಂದು ಹೋಗಿದ್ದ ಮಾಪಣ್ಣ ಖರ್ಗೆಯವರು ತುತ್ತಿನ ಚೀಲ ತುಂಬಿಸಿಕೊಳ್ಳವುದಕ್ಕಾಗಿ ಕಲಬುರಗಿಗೆ ಬಂದು ಎಂಎಸ್ ಕೆ ಮಿಲ್ ನಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದರು.

ಖರ್ಗೆಜಿಯವರು ಗುಲ್ಬರ್ಗಾದ ನೂತನ ವಿದ್ಯಾಲಯದಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಸರ್ಕಾರಿ ಪದವಿ ಕಾಲೇಜಿನಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ನಂತರ ಶೇಠ್ ಶಂಕರ ಲಾಲ್ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದು ತಮ್ಮ ವಕೀಲ ವೃತ್ತಿ ಆರಂಭಿಸಿದರು.

ಆರಂಭದಲ್ಲಿ ಕಾರ್ಮಿಕ ಸಂಘಗಳ ವ್ಯಾಜ್ಯಗಳ ಬಗ್ಗೆ ಹೋರಾಟ ‌ನಡೆಸಿ ಅದರಲ್ಲಿಯು ಸೈ ಎನಿಸಿಕೊಂಡರು.

ಶಿವು ಆಂದೋಲಾ ಶಿರವಾಳ
ಕಾಂಗ್ರೆಸ್ ಮುಖಂಡರು ಶಹಾಪುರ

emedialine

View Comments

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

50 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420