ಆಕ್ರಮ, ಕಳಪೆ ಕಾಮಗಾರಿಕೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

ರಾಯಚೂರು: ಸರ್ಕಾರಿ ಕೆರೆ ಭೂ ಮಾಲೀಕರ ವಶದಲ್ಲಿ, ಇತ್ತ ಕಡೆ ಕಳಪೆ ಕಾಮಗಾರಿ ಮಾಡಿ ಲಕ್ಷಾಂತರ ರೂ, ಲೂಟಿಗೆ ಮುಂದಾದ ಗುತ್ತಿಗೆದಾರ ಮತ್ತು ಶಮೀಲಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳಲು ಎಸ್.ಎಫ್ ಸಂಘಟನೆ ಮುಖಂಡ ಶಿವಕುಮಾರ ಮ್ಯಾಗಳಮನಿ ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI) ಮತ್ತು ಕವಿತಾಳ ನವ ನಿರ್ಮಾಣ ವೇದಿಕೆ ವತಿಯಿಂದ ಕವಿತಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಶಿವಕುಮಾರ ಮ್ಯಾಗಳಮನಿ  ಹಲವು ದಶಕಗಳ ಹಿಂದೆ ಆಗಿನ ಸರಕಾರದ ( ನಿಜಾಮರ ಆಳ್ವಿಕೆಯಲ್ಲಿ) ಅಧೀನದಲ್ಲಿ ಇದ್ದ ಕವಿತಾಳ ಪಟ್ಟಣದ ಹೊರಭಾಗದಲ್ಲಿ ಇರುವ ಐತಿಹಾಸಿಕ ಕೆರೆ ಹಂತಹಂತವಾಗಿ ಭೂಮಾಲೀಕರ ಪಾಲಾಗಿದೆ ಎಂದು ಆರೋಪಿಸಿದರು.

ಈಗಿನ ಸರಕಾರಿ ದಾಖಲಾತಿಯ ಪ್ರಕಾರ 40 ಹೆಕ್ಟೇರ್ ಪ್ರದೇಶ ಅಂದರೆ ಸುಮಾರು ನೂರು ಎಕರೆಯ ಜಮೀನು ಸರಕಾರಕ್ಕೆ ಸೇರಿದ್ದು ಅಂತಾ ಸಣ್ಣ ನೀರಾವರಿ ಇಲಾಖೆಯೆ ತನ್ನ ದಾಖಲೆಗಳಲ್ಲಿ ಅಧಿಕೃತಗೊಳಿಸಿದ್ದನ್ನು ನಾವು ಈಗಲೂ ಕಾಣಬಹುದು. ಮುಂದುವರಿದು ಕೆರೆಯು ಸರಕಾರಕ್ಕೆ ಸೇರಿದ್ದು ಅಂತಾ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಮೀನುಗಾರಿಕೆ ಇಲಾಖೆ ಪ್ರತಿವರ್ಷ ಮೀನು ಸಾಗಾಣಿಕೆಗಾಗಿ ಟೆಂಡರ್ ( ಹರಾಜು ಪ್ರಕ್ರಿಯೆ) ಮಾಡುತ್ತಾ ಬರುತ್ತಿದೆ. ಆದರೆ ಇತ್ತ ಭೂಮಾಲೀಕರು ಈ ಕೆರೆಯು ನಮ್ಮಗೆ ಸೇರಿದ್ದು ನಮ್ಮ ಹೆಸರಿಗೆ ಪಟ್ಟಾ ಆಗಿದೆ ( ಕವಿತಾಳ ಹೋಬಳಿಯ ಸರ್ವೆ ನಂಬರ್ 81 ರಿಂದ 107 ರವರೆಗೆ) ಪಹಣಿ ಕೂಡ ಇವೆ. ಇದು ನಮ್ಮಗಳ  ಸ್ವಂತ ಜಮೀನು ಅಂತಾ ಉಳುಮೆ ಮಾಡುತ್ತಾ ಸರ್ಕಾರದ ಯಾವ ಆದೇಶವನ್ನು ಲೆಕ್ಕಿಸುತ್ತಿಲ್ಲ ಮತ್ತು ಮೀನು ಸಾಗಾಣಿಕೆಗಾಗಿ ಕೆರೆಯಲ್ಲಿ ನೀರು ಸಂಗ್ರಹಣೆ ಆಗಲೂ ಬಿಡದೆ, ಮಳೆಗಾಲದಲ್ಲಿ ಸಂಗ್ರಹವಾಗುತ್ತಿರುವ ಕೆರೆಯ ನೀರನ್ನು ನಿರಂತರವಾಗಿ ಹೊರ ಬಿಡುತ್ತಿದ್ದಾರೆ.

ಇದನ್ನು ಗಮನಿಸಬೇಕಾದ ರಾಯಚೂರು ಜಿಲ್ಲಾಧಿಕಾರಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಶಿಲ್ದಾರ ಸೇರಿ ಸ್ಥಳೀಯ ಆಡಳಿತ  ತಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೆ ಆ ಭೂಮಾಲೀಕರಿಗೆ ಅನುವು ಮಾಡಿಕೊಡುತ್ತದೆ. ಊರಿನ ಸಾರ್ವಜನಿಕರು, ಹೋರಾಟಗಾರರು ಹಾಗೂ ಸಂಘಟನೆಯ ಮುಖಂಡರು ಕೆರೆಯನ್ನು ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಲ್ಲಿ ಅನೇಕ ಬಾರಿ ಮನವಿ ಮಾಡಿಕೊಂಡರು, ಹೋರಾಟ ಮಾಡಿದರು ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವ ನಿರ್ದಾಕ್ಷಿಣ್ಯವಾದ ಕ್ರಮಕ್ಕೆ ಮುಂದಾಗಿಲ್ಲ ಅದಕ್ಕೆ ಶೀಘ್ರವೇ ಜಿಲ್ಲಾಧಿಕಾರಿ ಗಳು ಇದರ ಬಗ್ಗೆ ವಿಶೇಷ ಗಮನ ಹರಿಸಿ ಈ ಮಳೆಗಾಲದಲ್ಲಾದರು ಕೆರೆಯಲ್ಲಿ ನೀರು ಸಂಗ್ರಹಣೆಗೆ ಮತ್ತು ಮೀನು ಸಾಗಾಣಿಕೆಗೆ ಅವಕಾಶ ಮಾಡಿಕೊಡಬೇಕು, ಜೊತೆಗೆ ಈಗ ಸುಮಾರು 84 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಕೆರೆಯ ಕಾಮಗಾರಿ ಯೂ ಅತ್ಯಂತ ಕಳಪೆಯಾಗಿ ನೆಡೆಯುತ್ತಿದೆ ಎಂದರು.

ಇಂದಿಗೂ ಕಾಮಗಾರಿಗೆ ಸಂಬಂಧಿಸಿದ ಸರಿಯಾದ ಮಾಹಿತಿಯನ್ನು ಕೊಡದೆ ನೆಪ ಮಾತ್ರಕ್ಕೆ ಕಾಮಗಾರಿ ಯನ್ನು ಮಾಡುತ್ತಾ ಲಕ್ಷಾಂತರ ಹಣವನ್ನು ಲೂಟಿ ಮಾಡುವ ಕಾರ್ಯದಲ್ಲಿ ಗುತ್ತಿಗೆದಾರ, ಸಂಬಂಧಿಸಿದ ಇಲಾಖೆ ಎಇಇ, ಜೆ.ಇ ಸೇರಿ ಇತರರು ನಿರತರಾಗಿದ್ದಾರೆ. ಮುಂದುವರಿದು ಕಾಮಗಾರಿಗೆ ಅಲ್ಲಿನ ಹಳೆಯ ಕಲ್ಲು, ಮಣ್ಣನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಕಳಪೆ ಮಟ್ಟದ ಮರಳು, ಕಲ್ಲು, ಕಾಂಕ್ರೀಟ್ ಸೇರಿ ಇತ್ಯಾದಿ ಸಾಮಾಗ್ರಿಗಳನ್ನು ಬಳಕೆ ಮಾಡಲಾಗುತ್ತದೆ,  ಕ್ರೀಯಾ ಯೋಜನೆ (ಅಂದಾಜು ಪ್ರತಿ), ವರ್ಕ್ ಆರ್ಡರ್‌, ಟೆಂಡರ್ ಪಡೆದ ಏಜೆನ್ಸಿಯ ಮಾಹಿತಿಯನ್ನು ಉದ್ಘಾಟನೆ ಮಾಡಿದ ಶಾಸಕರಿಗೂ ಸೇರಿ ಸಾರ್ವಜನಿಕರಿಗೂ, ಯಾರಿಗೂ ನೀಡಿಲ್ಲ ಒಂದುವೇಳೆ ನೀಡಿದರೆ ತಮ್ಮ ಬಣ್ಣ ಬಯಲಾಗುತ್ತದೆ ಮತ್ತು ಮೋಸದ ಲೂಟಿಗೆ ಅವಕಾಶ ಸಿಗುವುದಿಲ್ಲ ಎಂಬ ಕೆಟ್ಟ ಆಲೋಚನೆ ಯಿಂದ ಕಣ್ಣಾಮುಚ್ಚಾಲೆಯ ಆಟವನ್ನು ಆಡುತ್ತಾ ಹಗಲು ದರೋಡೆಗೆ ಮುಂದಾಗಿ ಸರಕಾರದ ಲಕ್ಷಾಂತರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಆದ್ದರಿಂದ ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಳಪೆ ಗುಣಮಟ್ಟದ ಕಾಮಗಾರಿಗೆ ಮುಂದಾದ ಗುತ್ತಿಗೆದಾರ ಲೈಸನ್ಸ್, ಏಜೆನ್ಸಿಯ ಲೈಸನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ IPCಯ ಸೆಕ್ಷನ್ 417, 420 ಸೇರಿ ಇತರ ಕಾನೂನು ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಾಮಗಾರಿಯ ಬಿಲ್ ನ್ನು ತಡೆ ಹಿಡಿದು ಇತರ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕು ನಿರ್ಲಕ್ಷ್ಯ ತೋರಿದರೆ ಭಾರತ ಪ್ರಜಾಸತ್ತಾತ್ಮಕ ಯುವಜನ‌ ಫೆಡರೇಷನ್ (DYFI) ಮತ್ತು ಕವಿತಾಳ ನವ ನಿರ್ಮಾಣ ವೇದಿಕೆ, ಜೈ ಭಾರತ ಸೇರಿ ಇತರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ನಾಗರಕರೊಂದಿಗೆ ಉಗ್ರವಾದ ಹೋರಾಟಕ್ಕೆ ಮುಂದಾಬೇಕಾಗುತ್ತದೆ ಎಂದು SFI ರಾಜ್ಯ ಉಪಾಧ್ಯಕ್ಷರಾದ  ಹಾಗೂ ಕವಿತಾಳ ನವ ನಿರ್ಮಾಣ ವೇದಿಕೆ ಅಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಈ ಪತ್ರಿಕಾ ಗೋಷ್ಠಿಯ ಮೂಲಕ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, DYFI ರಾಜ್ಯ ಸಮಿತಿ ಸದಸ್ಯರಾದ ಶಿವಪ್ಪ ಬ್ಯಾಗವಾಟ್, ನಗರ ಘಟಕದ ಅಧ್ಯಕ್ಷರಾದ ಮಹಮ್ಮದ್ ರಫೀ, ಮುಖಂಡರಾದ ವೆಂಕಟೇಶ, ಸೈಯದ್ ಮುನ್ನಾವರ್,  ಯಲ್ಲಪ್ಪ ಎಂ, ಜಹಾಂಗೀರ್ ಪಾಷ, ಸೇರಿ ಇತರರಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

58 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420