ಬಿಸಿ ಬಿಸಿ ಸುದ್ದಿ

ಪರಿಸರ ಸ್ನೇಹಿ ಬೆಡ್ ತಲುಪಿಸಿ ಚಿತ್ತಾಪುರ ಮಾಡೆಲ್ ಪರಿಚಯಿಸಿದ್ದೇವೆ: ಶಾಸಕ ಖರ್ಗೆ

ಕಲಬುರಗಿ: ಕೊರೋನಾ ಸೋಂಕು ರಾಜ್ಯವ್ಯಾಪಿ ಹರಡಿ ಜನರನ್ನು ಸಂಕಟಕ್ಕೆ ದೂಡಿದೆ. ಸೋಂಕಿತರ ಸಂಖ್ಯೆ ಜಿಮ್ಸ್ ಹಾಗೂ ಇಎಸ್ ಐ ಸಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದು ಬೆಡ್ ಗಳ ಕೊರತೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳಿಗೆ 650 ಪರಿಸರ ಸ್ನೇಹಿ ಬೆಡ್ ಗಳನ್ನು ತಲುಪಿಸುವ ಮೂಲಕ ಚಿತ್ತಾಪುರ ಮಾಡೆಲ್ ನ್ನು ಪರಿಚಯಿಸಿದ್ದೇವೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರಿಗೆ ಅನುಕೂಲವಾಗುವಂತೆ  450 ಬೆಡ್ ಗಳನ್ನು ಹಾಗೂ ಚಿತ್ತಾಪುರಕ್ಕೆ 100 ಬೆಡ್ ಗಳನ್ನು ಹಾಗೂ ರಾಯಚೂರಿಗೆ 100 ಬೆಡ್ ಗಳನ್ನು ತಲುಪಿಸಲಾಗಿದೆ. ಜಿಲ್ಲಾಡಳಿತಗಳು ಬೆಡ್ ಗಳನ್ನು ಸಮರ್ಪಕ ಬಳೆಕೆ ಮಾಡಿಕೊಳ್ಳಬೇಕೆಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡು ಆಗ್ರಹಿಸಿದ್ದಾರೆ.

ಕೆಪಿಸಿಸಿ ಹಾಗೂ ಹಿರಿಯ ನಾಯಕರಾದ ಹಾಗೂ ರಾಜ್ಯ ಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರ ವತಿಯಿಂದ ಜಿಲ್ಲಾಡಳಿತಗಳಿಗೆ ತಲುಪಿಸಿರುವ ಈ ಬೆಡ್ ಗಳನ್ನು ಕೊವೀಡ್ ಸಂಕಟ ಸೇರಿದಂತೆ ಬೇರೆ ಯಾವುದೇ ಸಂದರ್ಭದಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಚಿತ್ತಾಪುರದಲ್ಲಿ ಕ್ಲಸ್ಟರ್ ಗಳನ್ನು ಸ್ಥಾಪಿಸಿ ಅಲ್ಲಿ ಬೆಡ್ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿನ ಒತ್ತಡ ಕಡಿಮೆ ಮಾಡುವ ಯೋಜನೆಯನ್ನು ರೂಪಿಸಲಾಗಿದ್ದೆ. ಬಹುಶಃ ದೇಶದಲ್ಲೇ ನಾವು ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿದ್ದೇವೆ ಎಂದು ಅವರು ಒತ್ತಿ ಹೇಳಿದ್ದಾರೆ..

emedialine

Recent Posts

ಫ.ಗು. ಹಳಕಟ್ಟಿ ವಚನ ತವನಿಧಿಯ ಸಂರಕ್ಷಕ: ಬಿ.ಆರ್. ಪಾಟೀಲ

ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ…

7 mins ago

ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು. ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ.…

10 mins ago

ಈಡಿಗ ನಿಗಮ ಅನುದಾನಕ್ಕೆ ವಿಧಾನಸಭೆಯಲ್ಲಿ ಧ್ವನಿಯಾಗುವೆ: ಶಾಸಕ ಗವಿಯಪ್ಪ

ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…

14 mins ago

ಕಲ್ಯಾಣ ಕರ್ನಾಟಕದ 18 ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಡಾ. ಅಜುಸಿಂಗ್

ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…

17 mins ago

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

4 hours ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

6 hours ago