ಕಲಬುರಗಿ: ಕೊರೋನಾ ಸೋಂಕು ರಾಜ್ಯವ್ಯಾಪಿ ಹರಡಿ ಜನರನ್ನು ಸಂಕಟಕ್ಕೆ ದೂಡಿದೆ. ಸೋಂಕಿತರ ಸಂಖ್ಯೆ ಜಿಮ್ಸ್ ಹಾಗೂ ಇಎಸ್ ಐ ಸಿ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದ್ದು ಬೆಡ್ ಗಳ ಕೊರತೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಹಾಗೂ ರಾಯಚೂರು ಜಿಲ್ಲೆಗಳಿಗೆ 650 ಪರಿಸರ ಸ್ನೇಹಿ ಬೆಡ್ ಗಳನ್ನು ತಲುಪಿಸುವ ಮೂಲಕ ಚಿತ್ತಾಪುರ ಮಾಡೆಲ್ ನ್ನು ಪರಿಚಯಿಸಿದ್ದೇವೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರಿಗೆ ಅನುಕೂಲವಾಗುವಂತೆ 450 ಬೆಡ್ ಗಳನ್ನು ಹಾಗೂ ಚಿತ್ತಾಪುರಕ್ಕೆ 100 ಬೆಡ್ ಗಳನ್ನು ಹಾಗೂ ರಾಯಚೂರಿಗೆ 100 ಬೆಡ್ ಗಳನ್ನು ತಲುಪಿಸಲಾಗಿದೆ. ಜಿಲ್ಲಾಡಳಿತಗಳು ಬೆಡ್ ಗಳನ್ನು ಸಮರ್ಪಕ ಬಳೆಕೆ ಮಾಡಿಕೊಳ್ಳಬೇಕೆಂದು ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡು ಆಗ್ರಹಿಸಿದ್ದಾರೆ.
ಕೆಪಿಸಿಸಿ ಹಾಗೂ ಹಿರಿಯ ನಾಯಕರಾದ ಹಾಗೂ ರಾಜ್ಯ ಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಅವರ ವತಿಯಿಂದ ಜಿಲ್ಲಾಡಳಿತಗಳಿಗೆ ತಲುಪಿಸಿರುವ ಈ ಬೆಡ್ ಗಳನ್ನು ಕೊವೀಡ್ ಸಂಕಟ ಸೇರಿದಂತೆ ಬೇರೆ ಯಾವುದೇ ಸಂದರ್ಭದಲ್ಲಿಯೂ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಚಿತ್ತಾಪುರದಲ್ಲಿ ಕ್ಲಸ್ಟರ್ ಗಳನ್ನು ಸ್ಥಾಪಿಸಿ ಅಲ್ಲಿ ಬೆಡ್ ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿನ ಒತ್ತಡ ಕಡಿಮೆ ಮಾಡುವ ಯೋಜನೆಯನ್ನು ರೂಪಿಸಲಾಗಿದ್ದೆ. ಬಹುಶಃ ದೇಶದಲ್ಲೇ ನಾವು ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿದ್ದೇವೆ ಎಂದು ಅವರು ಒತ್ತಿ ಹೇಳಿದ್ದಾರೆ..