ಬಿಸಿ ಬಿಸಿ ಸುದ್ದಿ

ಪ್ರತಿಯೊಬ್ಬರಿಗೂ ಯೋಜನೆಯ ಫಲ ದೊರಕಲಿ: ಶಾಸಕ ಗುತ್ತೇದಾರ

ಆಳಂದ: ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತಾಗಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಮಂಗಳವಾರ ಆಳಂದ ತಾಲೂಕಿನ ಧುತ್ತರಗಾಂವ ಗ್ರಾಮದಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ವಿವಿಧ ಸಾಧನ, ಸಲಕರಣೆಗಳನ್ನು ವಿತರಿಸಿ ಮಾತನಾಡಿದರು. ಜನರ ಜೀವನ ಮಟ್ಟ ಸುಧಾರಿಸಲು, ಅವರ ಆರ್ಥಿಕ ಸ್ಥಿತಿಯನ್ನು ಮೇಲಕ್ಕೆ ಎತ್ತಲು ಸರ್ಕಾರವು ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ ಅದರ ಫಲ ಜನತೆ ಪಡೆದಾಗ ಮಾತ್ರ ಸರ್ಕಾರದ ಕಾರ್ಯ ಸಾರ್ಥಕವಾಗುತ್ತದೆ ಎಂದು ನುಡಿದರು.

ಗ್ರಾಮೀಣ ಭಾಗದ ಯುವಕರು ಸ್ವಯಂ ಉದ್ಯೋಗಕ್ಕೆ ಒತ್ತು ನೀಡಬೇಕು ಅದಕ್ಕಾಗಿ ಬೇಕಾಗಿರುವ ಕೌಶಲ್ಯಗಳನ್ನು ಸಂಪಾದಿಸಬೇಕು ಜೊತೆಗೆ ಅರ್ಹ ವಿದ್ಯಾವಂತ ತರುಣರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿ ಹುಟ್ಟೂರಿಗೆ ಮತ್ತು ತಾಲೂಕಿಗೆ ಕೀರ್ತಿ ತರುವಂತಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ೨೮ ಅಂಗವಿಕಲ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಪಠ್ಯ ಸಾಮಗ್ರಿಗಳನ್ನು ಸುಮಾರು ೧.೨೫ ಲಕ್ಷ. ರೂ ವೆಚ್ಚದ ಸಲಕರಣೆಗಳನ್ನು ವಿತರಿಸಲಾಯಿತು.

ಮುಖಂಡರಾದ ವೀರಣ್ಣ ಮಂಗಾಣೆ, ಚಂದ್ರಕಾಂತ ಮಂಗಾಣೆ, ಶಿವಾನಂದ ಪಾಟೀಲ, ಪ್ರಭುಲಿಂಗ ಹುಲಿ ಸೇರಿದಂತೆ ಇತರರು ಇದ್ದರು.

emedialine

Recent Posts

ಫ.ಗು. ಹಳಕಟ್ಟಿ ವಚನ ತವನಿಧಿಯ ಸಂರಕ್ಷಕ: ಬಿ.ಆರ್. ಪಾಟೀಲ

ಕಲಬುರಗಿ: ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹೆಕ್ಕಿ ತೆಗೆದ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯದ ಪಿತಾಮಹ ಎಂದು ಮುಖ್ಯಮಂತ್ರಿಗಳ…

8 mins ago

ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

ಕಲಬುರಗಿ: ಸ್ಥಳೀಯ ಕೆಬಿಎನ್ ವಿವಿಯ ಕೆಬಿಎನ್ ಆಸ್ಪತ್ರೆಯಲ್ಲಿ ವೈದ್ಯರ ದಿನವನ್ನು ಆಚರಿಸಲಾಯಿತು. ರೇಡಿಯೋ ಡಿಗ್ನೋಸಿಸ ವಿಭಾಗದ ಮಾಜಿ ಮುಖಸ್ಥ ಡಾ.…

11 mins ago

ಈಡಿಗ ನಿಗಮ ಅನುದಾನಕ್ಕೆ ವಿಧಾನಸಭೆಯಲ್ಲಿ ಧ್ವನಿಯಾಗುವೆ: ಶಾಸಕ ಗವಿಯಪ್ಪ

ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…

15 mins ago

ಕಲ್ಯಾಣ ಕರ್ನಾಟಕದ 18 ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಡಾ. ಅಜುಸಿಂಗ್

ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…

18 mins ago

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

4 hours ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

6 hours ago