ಬಿಸಿ ಬಿಸಿ ಸುದ್ದಿ

ಉದ್ದಿನಲಿ ಚಿಬ್ಬು, ತಾಮ್ರರೋಗ ನಿರ್ವಹಣೆ: ಕೃಷಿ ವಿಜ್ಞಾನಿ ರಾಜು ಜಿ. ತೆಗ್ಗಳ್ಳಿ

ಕಲಬುರಗಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೆಳೆದ ಉದ್ದು, ಹೆಸರು ಬೆಳೆಗಳಲ್ಲಿ ಮಳೆ ನಂತರ ಎಲೆಗಳಲ್ಲಿ ಚಿಬ್ಬು ಹಾಗೂ ಇಟ್ಟಂಗಿ ರೋಗಕಂಡು ಬಂದಿದ್ದು ಹೂ ಹಂತತಲುಪುತ್ತಿರುವ ವೇಳೆಯಲ್ಲಿ ಬೆಳೆಗಳ ಸಸ್ಯ ಸಂರಕ್ಷಣೆಯನ್ನು ಸೂರ್ಯನ ಬಿಸಿಲಿನ ಅವದಿಯಲ್ಲಿ ಕೈಗೊಳ್ಳಬೇಕು.ಮೋಡಕವಿದ ವಾತಾವರಣ ಹಾಗೂ ಜೂನ್ ೨೭ ರ ನಂತರ ಸುರಿದ ನಾಲ್ಕು ಉತ್ತಮ ಮಳೆ ದಿನಗಳು ಬೆಳೆದ ಉದ್ದು, ಹೆಸರು ಹೊಲಗಳಲ್ಲಿ ಈ ರೋಗಕಂಡು ಬಂದಿದೆ. ಬೇರು ವ್ಯಾಪ್ತಿ ಉಸಿರಾಡುವಂತೆ ಹಾಗೂ ಸಸ್ಯ ಬೆಳೆಯುವಂತೆ ಸಂರಕ್ಷಣಾ ಕ್ರಮಗಳನ್ನು ರೈತರು ಕೈಗೊಳ್ಳಬೇಕು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ ತಿಳಿಸಿದ್ದಾರೆ.

ಮುಂಗಾರುಆರಂಭದ ೩೦ ದಿನಗಳ ಬೆಳೆ ಇದ್ದಾಗಲೇಎರಡು  ಏಕ ಕಾಲಕ್ಕೆ ಸುರಿದ ಮಳೆಯಿಂದ ವಾತಾವರಣದ ಹಾಗೂ ಭೂಮಿಯಆರ್ದ್ರತೆ, ತೇವಾಂಶ ಹೆಚ್ಚಾಗಿದ್ದು, ದಟ್ಟ ಮೋಡದ ದಿನಗಳುಇಟ್ಟಂಗಿತಾಮ್ರರೋಗ ಹಾಗೂ ಚಿಬ್ಬುರೋಗ ಪ್ರಸಾರಕ್ಕೆ ಸೂಕ್ತ ಸನ್ನಿವೇಶ ವಾಗಿರುತ್ತದೆ. ಉದ್ದು ಮತ್ತು ಹೆಸರುಹೊಲಗಳಲ್ಲಿ ರೋಗ ಭಾದೆ ೫ ರಿಂದ ೧೦ ಶೇಕಡಇರುವಾಗಲೆ ಸೂಕ್ತ ಸಸ್ಯ ಸಂರಕ್ಷಣೆ ಕೈಗೊಳ್ಳಬೇಕು ಮುನ್ನೆಚ್ಚರಿಕಯಾಗಿಯೂ ಮೇಲ್ಕಂಡ ಸಸ್ಯ ಸಂರಕ್ಷಣಾಔಷದೀಯನ್ನು ಸಿಂಪಡಿಸಬೇಕು. -ಡಾ. ಜಹೀರ್‌ಅಹೆಮದ್, ವಿಜ್ಞಾನಿ (ಸಸ್ಯರೋಗಶಾಸ್ತ್ರ), ಕೃಷಿ ವಿಜ್ಞಾನಕೇಂದ್ರ, ಕಲಬುರಗಿ.

ಉದ್ದು ಮತ್ತು ಹೆಸರುಎರಡು ಬೆಳೆಗಳಲ್ಲಿ ಎಲೆಚುಕ್ಕಿ, ಚಿಬ್ಬುರೋಗ, ಇಟ್ಟಂಗಿರೋಗಕಂಡು ಬಂದಲ್ಲಿ ಹೆಕ್ಸಾಕೋನಾಜಾಲ್ ೧ ಮಿ.ಲಿ. ಅಥವಾಕಾರ್ಬಡೈಜಿಂ ೧ ಗ್ರಾ.ಅಥವಾ ಮ್ಯಾಂಕೋಜೆಬ್ ೨ ಗ್ರಾ.ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೃಷಿ ವಿಜ್ಞಾನಿಗಳ ಅಭಿಪ್ರಾಯ: ಬದಲಾಗುತ್ತಿರುವ ಹವಾಮಾನ ದಿನಗಳಲ್ಲಿ ಗಿಡದಆರೋಗ್ಯಕ್ಕೆಒತ್ತು ನೀಡಬೇಕು.  ಹೊಲಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.  ಸೂಕ್ತ ಬಸಿಗಾಲುವೆ ನಿರ್ಮಿಸಿ ದ್ವಿದಳ ಧಾನ್ಯ ಬೆಳೆಗಳಾದ ಉದ್ದು, ಹೆಸರುತೊಗರಿ ಬೆಳೆಗಳಿಗೆ ಪಲ್ಸ್ ಮ್ಯಾಜಿಕ್‌ಎಕರೆಗೆ ೨ ಕಿ.ಗ್ರಾ.೨೦೦ ಲೀಟರ್ ನೀರಿನೊಂದಿಗೆ ಬೆರೆಸಿ ಸಿಂಪಡಿಸಬೇಕು. ಉತ್ತಮ ಹೂ ಮತ್ತು ಕಾಯಿ ರಚನೆಯಿಂದ ಇಳುವರಿ ಪಡೆಯಬಹುದು. – ಡಾ.ರಾಜು ಜಿ. ತೆಗ್ಗಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

53 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

56 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

59 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago