ಸುರಪುರ: ಮಾದಿಗ ಯುವ ಸೇನೆಯ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ ತಮ್ಮ ೪೪ನೇ ಜನುಮ ದಿನದ ಅಂಗವಾಗಿ ನಗರದ ದೀವಳಗುಡ್ಡದಲ್ಲಿ ಜನ ಜಾಗೃತಿ ನಡೆಸುವ ಮೂಲಕ ಆಚರಿಸಿಕೊಂಡರು.
ನಂದಕುಮಾರ ಅವರ ಹಿತೈಸಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸದ್ಯ ಜಗತ್ತಿನಲ್ಲಿ ಕೊರೊನಾ ಬಾಧಿಸುತ್ತಿದೆ ಇಂತಹ ಸಂದರ್ಭದಲ್ಲಿ ನನ್ನ ಜನುಮ ದಿನ ಆಚರಿಸಿಕೊಳ್ಳಬಾರದೆಂದು ಈ ಮುಂಚೆಯೆ ಹೇಳಿದ್ದೆ,ಆದರೆ ನೀವೆಲ್ಲ ಆತ್ಮೀಯರು ನನಗೆ ಗೊತ್ತಿಲ್ಲದೆ ಕಾರ್ಯಕ್ರಮವನ್ನು ಆಯೋಜಿಸಿದ್ದಿರಿ ಅದಕ್ಕಾಗಿ ನಿಮಗೆಲ್ಲರಿಗು ಋಣಿಯಾಗಿರುವೆ ಎಂದರು.ಅಲ್ಲದೆ ನನಗೆ ಇಂದು ನನ್ನ ಜನುಮ ದಿನ ಆಚರಿಸಿಕೊಳ್ಳುವ ಬದಲು ನಮ್ಮ ಜನರ್ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.
ಈ ಕಾರ್ಯಕ್ರಮವನ್ನು ನಮ್ಮವರ ಜಾಗೃತಿ ಕಾರ್ಯಕ್ರಮವನ್ನಾಗಿ ಆಚರಿಸೋಣ ಎಂದು.ನಮ್ಮ ಜನರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಹಾಗು ಎಲ್ಲಾ ಜಾತಿ ಧರ್ಮಗಳ ಜನರೊಂದಿಗೆ ಸಹೋದರತೆಯೊಂದಿಗೆ ಬದುಕುವುದನ್ನು ಕಲಿಸಿ,ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ ಎಲ್ಲಾ ಸಮುದಾಯದೊಂದಿಗೆ ಬೆರೆತು ನಮಗೆ ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದರು.
ಇದೇ ಸಂದರ್ಭದಲ್ಲಿ ದೀವಳಗುಡ್ಡದಲ್ಲಿನ ಮಾದಾರ ಚನ್ನಯ್ಯ ಮತ್ತು ಬಾಬು ಜಗಜೀವನರಾಮ್ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ಯಲ್ಲಪ್ಪ ಹುಲಕಲ್,ಪಂಡೀತ ನಿಂಬೂರ,ನಿಂಗಣ್ಣ ಬುಡ್ಡಾ,ಬಸವರಾಜ ಮುಷ್ಠಳ್ಳಿ,ಚಂದ್ರಶೇಖರ ದೀವಳಗುಡ್ಡ,ಶರಣು ಸತ್ಯಂಪೇಟೆ,ಬಸವರಾಜ ಲಕ್ಷ್ಮೀಪುರ,ಹುಲಗಪ್ಪ ಶೆಳ್ಳಿಗಿ,ಸಿದ್ದು ಯಡಹಳ್ಳಿ,ಪರಶುರಾಮ ಬೈಲಾಪುರ ಹಾಗು ಎಮ್ ಸ್ಟಾರ್ ಬಾಯ್ಸ್ ತಂಡದ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…