“ಮನೆದೊಡೆಯ ಮಹಾದೇವ ಮನವ ನೋಡಿಹನೆಂದು,
ಮನುಜರ ಕ್ಯೆಯಿಂದ ಒಂದೊಂದು ನುಡಿಸುವನು,
ಇದಕ್ಕೆ ಕಳವಳಿಸದಿರು ಮನವೆ, ಕಾತರಿಸಿದಿರು ತನುವೆ,
ನಿಜವ ಮರೆಯದಿರು ಕಂಡು, ನಿಶ್ಚಿಂತನಾಗಿರು ಮನವೆ,
ಬಸವನಪ್ರಿಯಸಂಗಯ್ಯನು ಬೆಟ್ಟದನಿಪರಾಧವನು
ಒಂದು ಬೊಟ್ಟಿನಲ್ಲಿ ತೊಡೆವನು”
ಜಗತ್ತಿನ ಇತಿಹಾಸದಲ್ಲಿ ನಡೆದಿರುವ ಕ್ರಾಂತಿಗಳು ದೇಶ, ಧರ್ಮ, ಭಾಷೆಗಾಗಿ ಹಾಗೂ ಇನ್ನಿತರ ಸಾಮಾಜಿಕ ಉದ್ದೇಶಗಳಿಗಾಗಿ ನಡೆದಿದೆ. ಕ್ರಾಂತಿಗಳ ಮೂಲ ಜೀವಾಳವಾದ ಸಾಹಿತ್ಯ ರಕ್ಷಣೆಗಾಗಿ ಕ್ರಾಂತಿ ಆಗಿದ್ದು. ಕೆಲವೊಮ್ಮೆ ಬಂಡಾಯ ನಡೆದಿವೆ. ಆದರೆ ವ್ಯಕ್ತಿಯ ಪ್ರಾಣಕ್ಕಿಂತ ಅವರ ವ್ಯಕ್ತಿತ್ವವನ್ನು ಶಾಶ್ವತವಾಗಿ ಉಳಿಸುವ ಸಾಹಿತ್ಯದ ರಕ್ಷಣಾ ಕಾರ್ಯ ಎಲ್ಲಿಯೂ ನಡೆದಿಲ್ಲ.ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ನೀಡಬಲ್ಲ; ಏಕ್ಯೆಕ ಸಾಹಿತ್ಯದ ರಕ್ಷಣೆ ಕ್ರಾಂತಿ ಮಾಡಿದ ಇತಿಹಾಸ ಜಗತ್ತಿನಲ್ಲಿ ಕಾಣಬಹುದಾದರೆ ಕಲ್ಯಾಣಕ್ರಾಂತಿಯಲ್ಲಿ ಮಾತ್ರ. ಕಲ್ಯಾಣ ಕ್ರಾಂತಿ ಅಂದರೆ ಅದು ಸಮಾನತೆಯ ಕ್ರಾಂತಿ ಅಷ್ಟೇ ಅಲ್ಲ. ಸಮಗ್ರ ಕ್ರಾಂತಿಯ ಸಂಗಮ. ಈ ಕ್ರಾಂತಿಯ ಮೂಲ ಪ್ರೇರಕವೇ ಬಸವಾದಿ ಶಿವಶರಣರು!
ಏಕಕಾಲದಲ್ಲಿ ಬಸವಣ್ಣನವರು ಜಗತ್ತಿನ ಹಲವು ಭೇಧಗಳನ್ನು ನಿವಾರಿಸಿ ಎಲ್ಲಕ್ಕೂ ಶಾಶ್ವತ ಪರಿಹಾರವನ್ನು ಕೊಡುವ ತತ್ವವನ್ನು ಜಗತ್ತಿಗೆ ನೀಡಿದರು. ಹೀಗಾಗಿಯೇ ಒಂದು ಕ್ರಾಂತಿಯಲ್ಲಿ ಒಬ್ಬ ದಾರ್ಶನಿಕ ಜನ್ಮ ತಾಳಿದರೆ. ಬಸವ ಕ್ರಾಂತಿಯಲ್ಲಿಯೂ ಏಕಕಾಲದಲ್ಲಿ 770 ದಾರ್ಶನಿಕರು ಪ್ರಕಟಗೊಳಿಸುವುದರ ಮೂಲಕ ಜಗತ್ತಿನ ಇತಿಹಾಸ ಪುಟದಲ್ಲಿ ಅಜರಾಮರರಾಗಿದ್ದಾರೆ. 770 ದಾರ್ಶನಿಕರು ರಚಿಸಿದ ವಚನ ಸಾಹಿತ್ಯವನ್ನು ಮೂಲಭುತವಾದಿಗಳು ಸುಟ್ಟು ಹಾಕಬೇಕೆಂಬ ಷಡ್ಯಂತ್ರ ರಚಿಸಿದರು. ಈ ಸಂದರ್ಭದಲ್ಲಿ ಕಲ್ಯಾಣ ಕ್ರಾಂತಿ ಆಯಿತು. ಶರಣರ ಹತ್ಯಾಕಾಂಡವಾಯಿತು. ಲಕ್ಷಾಂತರ ಧರ್ಮಪ್ರಚಾರಕರು ಕಲ್ಯಾಣ ಬಿಟ್ಟು ಚದುರಿದರು. ಇಂಥ ಸಂದಿಗ್ದ ಸ್ಥಿತಿಯಲ್ಲಿ ಶರಣರ ಪ್ರಾಣ ಜೀವಾಳ ವಚನ ಸಾಹಿತ್ಯ ರಕ್ಷೀಸಬೇಕೆಂಬ ಪಣತೊಟ್ಟ “ಕ್ರಾಂತಿ ಮಾತೆ ಅಕ್ಕನಾಗಮ್ಮ.”
ವ್ಯಕ್ತಿಯು ಧಾರ್ಮೀಕ ಸಂಸ್ಕಾರ ಪಡೆದರೆ ಸಾಲದು. ಧರ್ಮಕ್ಕಾಗಿ ತಮ್ಮನ್ನು ತಾನು ಅರ್ಪಿಸಿಕೊಳ್ಳಬೇಕು. ಪ್ರಸಂಗ ಬಂದರೆ ಧರ್ಮರಕ್ಷಣೆಗಾಗಿ ಹೋರಾಡಬೇಕು. ದುಡಿಯಬೇಕು ಎಂಬ ಗಣಾಚಾರ ತತ್ವವನ್ನು ಅಳವಡಿಸಿಕೊಂಡಿದ್ದ ಅಕ್ಕನಾಗಲಾಂಬಿಕೆ ಶಾಸ್ತ್ರಾಭ್ಯಾಸ ಪ್ರೇಮಿಯಾಗಿದ್ದೂ ಇಡೀ ಶರಣ ಸಮೂಹಕ್ಕೆ ಮನವರಿಕೆ ಮಾಡಿಕೊಟ್ಟ ಮಹಾನ್ ತಾಯಿ. ಕಲ್ಯಾಣದಲ್ಲಿ ಶರಣ ವಿರೋಧಿ ದೊಂಬಿ, ಗಲಭೆಗಳು ಹುಟ್ಟಿಕೊಂಡು ಹಾಡುಹಗಲೇ ಶರಣಮಾರ್ಗಿಗಳ ಕೊಲೆಗಳು ನಡೆದವು. ಶರಣರ ರಚನೆಗಳಾದ ವಚನಗಳ ನಾಶ ರಾಜಾರೋಷವಾಗಿ ಸುಡಲು ಯತ್ನಿಸಿದಾಗ ವಚನ ಸಾಹಿತ್ಯದ ರಕ್ಷಣೆಗಾಗಿ ವೀರಗಚ್ಚೆಯನ್ನು ತೊಟ್ಟು. ರುದ್ರಾಕ್ಷಿ ಕಂಕಣವನ್ನು ಕಟ್ಟಿ. ಕ್ಯೆಯಲ್ಲಿ ಖಡ್ಗ ಹಿಡಿದು ಕುದರೆಯನ್ನು ಏರಿ. ಕ್ಯೆಯಲ್ಲಿ ಖಡ್ಗವನ್ನು ಹಿಡಿದು. “ಜ್ಯೆ ಗುರು ಬಸವೇಶ ಹರಹರ ಮಹಾದೇವ” ಎಂಬ ಮಂತ್ರವನ್ನು ಉದ್ಘರಿಸುತ್ತ. ತನ್ನ ಮಗನಾದ ಚೆನ್ನಬಸವಣ್ಣನವರೊಂದಿಗೆ ಮಡಿವಾಳ ಮಾಚಿದೇವರ ದಂಡನಾಯಕತ್ವದಲ್ಲಿ ಬವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಕಲ್ಯಾಣದಿಂದ ಬಹುದೂರದ ಉಳವಿಯವರೆಗೆ ಸಾಗಿ ವಚನ ಸಾಹಿತ್ಯ ರಕ್ಷಣೆಗಾಗಿ ಹೋರಾಟ ಗ್ಯೆದ ಸಂದರ್ಭ ಮರೆಯಲಾರದಂತಹ ಅಪ್ರತಿಮ ವಿರೋಚಿತವಾದದ್ದು.
ಕಲ್ಯಾಣದ ಬಿಜ್ಜಳರಾಜನ ಸ್ಯೆಬನಿಕರು ಹಾಗೂ ಶರಣರ ನಡುವೆ ಯುದ್ದ ನಡೆದೇಹೋಯಿತು. ನಿರ್ದೋಶಿ ಶರಣರ ಹತ್ಯೆಯಿಂದ ಕಲ್ಯಾಣ ಭುವಿ ರಕ್ತದ ಕಾಲುವೆಯಾಗಿ ಹರಿಯಿತು. ಕಲ್ಯಾಣ ಎಂದರೆ ಸ್ವರ್ಗವೇ ಧರೆಗಿಳಿದು ಬಂದಂತಹ ಕಲ್ಯಾಣ ಸ್ಥಿತಿ ಬುದಿ ಮುಚ್ಚಿದ ಕೆಂಡದಂತೆ ಸ್ಮಶಾನವಾಗಿ ಪರಿಣಮಿಸಿತು. ಅಳಿದುಳಿದ ಶರಣರು ತಮ್ಮ ಪ್ರಾಣವನ್ನು ತ್ಯಜಿಸಿ ವಚನ ತಾಯಿಯನ್ನು ಉಳವಿಯಲ್ಲಿ ರಕ್ಷಿಸಲು ಹರಸಾಹಾಸ ಪಟ್ಟರು. ಬಹುಶಃ ಅಂದು ನಾಗಲಾಂಬಿಕೆ ನೇತ್ರತ್ವದಲ್ಲಿ ಕ್ರಾಂತಿ ಮಾಡದೆ ಹೋಗಿದ್ದರೆ. ಇಂದು ವಚನಗಳು ಹಾಗೂ ಬಸವಾದಿ ಶರಣರ ಪರಿಚಯ ಸಾಧ್ಯವಾಗುತ್ತಿರಲಿಲ್ಲ. ಧರ್ಮ ರಕ್ಷಣೆಗಾಗಿ, ವಚನ ಸಾಹಿತ್ಯದ ಉಳುವಿಗಾಗಿ ನಡೆದ ಮೊದಲ ಹೋರಾಟವೆ ಕ್ರಾಂತಿ ಮಾತೆ ಅಕ್ಕನಾಗಮ್ಮರ ಹೋರಾಟ. ಅಕ್ಕನಾಗಲಾಂಬಿಕೆಯವರ “ಬಸವಣ್ಣಪ್ರಿಯ ಚೆನ್ನಸಂಗಯ್ಯ” ಅಂಕಿತದಲ್ಲಿ 14 ವಚನಗಳನ್ನು ರಚಿಸಿದ್ದಾರೆ.
“ಶ್ರೀಗುರುವೆ ತಾಯಿತಂದೆಯಾಗಿ, ಲಿಂಗವೆ ಪತಿಯಾಗಿ,
ಜಂಗಮವೆ ಅತ್ತೆಮಾಂದಿರಾಗಿ, ಅವಭಕ್ತರೆ ಬಾಂಧವರಾಗಿ,
ಸತ್ಯಸದಾಚಾರವೆಂಬ ಮನೆಗೆ ಕಳುಹಿಸಿದಾಗಿ,
ಶರಣಸತಿ ಎಂಬ ನಾಮ ನಿಜವಾಯಿತ್ತು.
ಅದರಂತೆ ಇರುವೆ, ಹಿಂದುಮುಂದುವರಿಯದೆ ನಡೆವೆ,
ಮನಕ್ಕೆ ಮನಸಾಕ್ಷಿಯಾಗಿ ಮಾಡುವೆ ಬಸವಣ್ಣಪ್ರಿಯ ಚೆನ್ನಸಂಗಯ್ಯನಿಮ್ಮಡಿಗ್ಯೆಗೆ”
ಸತ್ಯ, ಪ್ರೀತಿ,ಕರುಣೆ, ಶಾಂತಿ, ಕ್ಷಮೆ, ತ್ಯಾಗ, ಭಕ್ತಿ, ಇವುಗಳ ಸಾಕಾರ ರೂಪವೆನಿಸಿದ ಮಹಾಮನೆಯ ಮಹಾತಾಯಿ ಎಂಬ ಹೆಸರಿಂದ ಕರೆಸಿಕೊಂಡ ಅಕ್ಕನಾಗಮ್ಮ ಸಾತ್ವಿಕ ಸ್ವಭಾವದವಳು. ಸೌಜನ್ಯಶೀಲ ವ್ಯಕ್ತಿತ್ವದ ಮಾನವೀಯ ಮೌಲ್ಯಗಳ ನಿಧಿ, ಸಹನೆಯ ತೇರು, ಇಂಥ ಮಹಾನ ತಾಯಿ ಜನ್ಮ ತಳೆದದ್ದು ಬಾಗೇವಾಡಿಯ ಇಂಗಳೇಶ್ವರ, ತಂದೆ ಮಾದರಸ. ತಾಯಿ ಮಾದಲಾಂಬಿಕೆ. ಮುಂದೆ ಶಿವಸ್ವಾಮಿ ಎಂಬುವರೊಂದಿಗೆ ನಾಗಮ್ಮನನ್ನು ವಿವಾಹ ಮಾಡಿಕೊಟ್ಟಿದ್ದರು. ನಾಗಮ್ಮಳ ಪತಿ ಶಿವಸ್ವಾಮಿ ಪರ್ಯಟನ ಗ್ಯೆಯುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ. ಹಾಗಾಗಿ ಸಂಸಾರ ನಡೆಸುವುದನ್ನು ಅರಿಯದ ಮಹಾಪುರುಷನಾಗಿದ್ದನು. ಆದಕಾರಣ ಅಕ್ಕ ನಾಗಲಾಂಬಿಕೆಯೇ ಕುಟುಂಬದ ಭಾರ ಹೊತ್ತು ಸಂಸಾರವನ್ನು ನಿಭಾಯಿಸುತ್ತಿದ್ದಳು.
ದಿನದಿನವೂ ಅನೇಕ ಹೊಸ ವಚನಗಳು ಓದುತ್ತ ಹೋದಂತೆ ನಾಗಲಾಂಬಿಕೆಯ ಮನಸ್ಸಿನಲ್ಲಿಯು ಸ್ಪಷ್ಟತೆಯುಂಟಾಯಿತು. ಹಗಲಿರಳು ತಮ್ಮನ ಪೋಷಣೆಯಲ್ಲಿ ತನ್ಮಯಳಾಗಿ “ಬಸವಣ್ಣ, ಬಸವಣ್ಣ,” ಎಂಬ ನಾಮವಷ್ಟೇ ಮಂತ್ರವಾಗಿಸಿಕೊಂಡಳು. ಕಾಲಕ್ರಮದಲ್ಲಿ ಅವಳಲ್ಲಿ ಕೆಲವು ದ್ಯೆಹಿಕ ಪರಿವರ್ತನೆಗಳು ಕಾಣಿಸಿಕೊಳ್ಳತೊಡಗಿದವು. ತತ್ಪರಿಣಾಮವಾಗಿ ನಾಗಲಾಂಬೆ ಮಾತಿಗಿಂತಲೂ ಮೌನವನ್ನೇ ಹೆಚ್ಚು ಬಯಸತೊಡಗಿದಳು. ಗುರುಲಿಂಗಜಂಗಮರ ಭಕ್ತಿಯಲ್ಲಿ, ಜ್ಞಾನಾರ್ಜನೆಯಲ್ಲಿ, ಬಸವಣ್ಣನ ವಿದ್ಯಾವ್ಯೆಭವದಲ್ಲಿ, ತಮ್ಮನ ಸೇವೆಯಲ್ಲಿ ಆಸಕ್ತಳಾಗಿ: ಸಮಯ ಸಿಕ್ಕಾಗಲೆಲ್ಲ ಬಸವಣ್ಣ ರಚಿಸಿದ ವಚನಗಳ ಅಧ್ಯಯನ, ಪತಿಯ ಸ್ಮರಣೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ದಿನಗಳೆಯಲಾರಂಭಿಸಿದಳು. ನವಮಾಸ ತುಂಬುತ್ತಿದ್ದಂತೆ ಅಕ್ಕಳ ಮುಖದಲ್ಲಿ ಒಂದು ಅಪೂರ್ವವಾದ ದಿವ್ಯ ತೇಜಸ್ಸು ಕಂಗೊಳಿಸತೊಡಗಿತ್ತು. ಒಂದು ದಿವಸ ಇದ್ದಕ್ಕಿದ್ದೆಂತೆ ಹೆರಿಗೆ ನೋವು ಕಾಣಿಸಿತು. ಸೂಲಗಿತ್ತಿ ಹೆರಿಗೆ ಮಾಡಲು ಎಲ್ಲಾ ಸಿದ್ದತೆಗಳು ಮಾಡಿಕೊಂಡಳು. ಆದರೂ ಹೆರಿಗೆ ಆಗಲಿಲ್ಲ. ಸೂಲಗಿತ್ತಿ ‘ನಿನಗೇನಾದರೂ ಬಯಕೆ ಉಂಟೆ?’ ಎಂದು ಕೇಳಿದಳು. ಆಕೆ ನಾಚುತ್ತಲೇ ಹೇಳಿದಳು. ‘ತಮ್ಮ ಬಸವಣ್ಣನ ಒಕ್ಕುಮಿಕ್ಕ ಪ್ರಸಾದದ ಸೇವನೆ’ ಇಚ್ಛಿಸಿದಳಂತೆ. ಕೂಡಲೇ ಒಕ್ಕುಮಿಕ್ಕ ಪ್ರಸಾದ ಮಾಡಿಸಲಾಯಿತು. ತಮ್ಮನ ಒಕ್ಕುಮಿಕ್ಕ ಪ್ರಸಾದ ಅಕ್ಕಳಿಗೆ ಅಮ್ರತಕ್ಕೆ ಸಮಾನವಾಯಿತು. ತಟ್ಟೆಯಲಿದ್ದ ಪ್ರಸಾದವ ಒಂದು ಅಗುಳು ಬಿಡದೆ ಉಂಡು ತ್ರಪ್ತಿಗೊಂಡಳು. ಪ್ರಸಾದ ಸ್ವೀಕರಿಸಿದ ನಾಗಲಾಂಬಿಕೆ ಸ್ವಲ್ಪ ಸ್ವಲ್ಪ ಹೆರಿಗೆಯ ನೋವು ಪ್ರಾರಂಭವಾಯಿತು. ಪ್ರಾತಃಕಾಲದ ಹೊತ್ತಿಗೆ ನಾಗಮ್ಮಳ ಉದರದಿಂದ ಬಾನಿನಲ್ಲಿ ಮೂಡಿಬಂದ ಸೂರ್ಯನಂತೆ ಗಂಡು ಮಗುವೊಂದರ ಜನನವಾಯಿತು.
ಮಗುವಿಗೆ ಚೆನ್ನಬಸವನೆಂದು ನಾಮಕರಣ ಮಾಡಲಾಯಿತು.
ಚೆನ್ನಬಸವಣ್ಣ ಹುಟ್ಟಿದಾಗ ಅಕ್ಕನಾಗಲಾಂಬಿಕೆಗೆ ಕೇವಲ 21 ವರ್ಷ. ಬರಬರುತ್ತ ಅಕ್ಕನ ಜವಬ್ದಾರಿ ಹೆಚ್ಚಾಗಿ ಪರಿಣಮಿಸಿತು. ಆದರೂ ಅವಳು ಯಾವುದೇ ಕಾರಣಕ್ಕೂ ಎದೆಗುಂದದೆ ಕಾರ್ಯಗಳಲ್ಲಿ ಸಹನೆ, ತಾಳ್ಮೆ, ಸಂಯಮದೊಂದಿಗೆ ತನ್ನ ಜವಬ್ದಾರಿ ನಿರ್ವಹಿಸುತ್ತಿದ್ದಳು. ಜೊತೆಗೆ ತಮ್ಮ ಬಸವಣ್ಣನ ಅಧ್ಯಯನ, ಧ್ಯಾನ, ಶಿವಯೋಗ, ಅಧ್ಯಾತ್ಮ ಸಾಧನೆ, ಕೀರ್ತಿಯ ಪ್ರಭಾವ ಹೆಚ್ಚುತ್ತಿರುವುದನ್ನು ನೋಡಿ ಬಸವಣ್ಣ ದಿಗ್ಭ್ರಾಂತನಾಗುತ್ತಾನೆ. ಹಗಲಿರುಳು ಅಕ್ಕ ಪರಿಶ್ರಮಪಡುವುದನ್ನು ಕಂಡು ಮನಸು ಮಮ್ಮಲ ಮರುಗುತ್ತಿತ್ತು. ಅಕ್ಕನಾಗಮ್ಮ ಕೇವಲ ತನ್ನ ಮಗ ಚೆನ್ನಬಸವನಿಗೆ ಮಾತ್ರ ತಾಯಿಯಾಗಿರಲಿಲ್ಲ. ‘ಹಡೆದ ತಾಯಿಗಿಂತಲು ಪಡೆದ ತಾಯಿಯೆ ಶ್ರೇಷ್ಠ ವೆಂಬಂತೆ’ ಒಡಹುಟ್ಟಿದ ತಮ್ಮನಿಗೆ ಪ್ರೀತಿ, ಮಮತೆ, ವಾತ್ಸಲ್ಯ ದಿಂದ ಕಂಡಡಳು.ಇದಕ್ಕೆ ಸಾಕ್ಷಿ ಅಕ್ಕನ ವಚನದಲ್ಲಿ ಕಾಣಬಹುದು.
“ಬಸವನೇ ಮುಖಸಜ್ಜೆ ಅಮಳೋಕ್ಯ
ಬಸವನ ನಾನೆತ್ತಿ ಮುದ್ದಾಡಿಸುವೆನು
ಬಸವ ಸಂಗನ ಬಸವಲಿಂಗಾ ಜಯತು
ಬಸವಗೂ ಎನಗೂ ಭಾವಭೇದವಿಲ್ಲ
ಬಸವಗೂ ಎನಗೂ ನುಂಟು ಬಸವಣ್ಣಪ್ರಿಯ ಚನ್ನಸಂಗಯ್ಯನಲ್ಲಿ
ಬಸವನ ಬೆಸಲಾದ ಬಾಣತಿ ನಾನಯ್ಯ ಬಸವಾ, ಬಸವಾ, ಬಸವಾ”
ಇಲ್ಲಿ ರಕ್ತ ಸಂಬಂಧಕ್ಕಿಂತಲೂ ಭಕ್ತಿ ಸಂಬಂಧ ಕಂಡು ಬರುತ್ತದೆ. ಆದರೆ ಲೋಕದ ರೂಢಿ ಪ್ರಕಾರ ಬಸವಣ್ಣ ಅಕ್ಕನಾಗಮ್ನಿಗೆ ತಮ್ಮ ಹೌದು. ಅದಕ್ಕಿಂತ ಮಿಗಿಲು ಗುರುವಿನ ಸ್ಥಾನ ಮಿಗಿಲಾದದ್ದು. ಬಸವಣ್ಣ ಗುರುವಿನ ಸನ್ನಿಧಿಯಲ್ಲಿ ಪಂಚಸೂತಕಗಳನ್ನು ಕಳೆದುಕೊಂಡೆ ಪರಿಶುದ್ಧಳಾದೆ ಎಂದು ಧನ್ಯತಾ ಭಾಬ ಅರ್ಪಿಸುತ್ತಾಳೆ.
ಎನ್ನ ಕುಲ ಸೂತಕ ಕಳೆದಾತ ಬಸವಣ್ಣ
ಎನ್ನ ಛಲ ಸೂತಕವ ಕಳೆದಾತ ಬಸವಣ್ಣ
ಎನ್ನ ತನು ಸೂತಕ ಕಳೆದಾತ ಬಸವಣ್ಣ
ಎನ್ನ ನೆನಹು ಸೂತಕ ಕಳೆದಾತ ಬಸವಣ್ಣ
ಎನ್ನ ಭಾವ ಸೂತಕ ಕಳೆದಾತ ಬಸವಣ್ಣ
ಎನ್ನ ಅರುಹು ಮರುಹಿನ ಸದುಸಂಶಯವ ಬಿಡಿಸಿದಾತ ಬಸವಣ್ಣ
ಎನ್ನತನ್ನೊಳಗೆ ಇಂಬಿಟ್ಟಕೊಂಡಾತ ಬಸವಣ್ಣ
ನಿಜದ ನರವಯ ಬಾಗಿಲ ನಿಜವ ತೋರಿದಾತ ಬಸವಣ್ಣ
ಬಸವಣ್ಣಪ್ರಿಯ ಚೆನ್ನಸಂಗನ ಹ್ರದಯದಲ್ಲಿ
ನಿಜ ನಿವಾಸಿಯಾಗಿ ಇರಿಸಿದ ಎನ್ನ ತಂದೆ ಬಸವಣ್ಣ”
ತಂದೆ ಸಂಗನಬಸವಣ್ಣನ ಮಹಿಮೆಯಿಂದ ಚೆನ್ನಸಂಗನ ಹ್ರದಯದಲ್ಲಿ ನಿಜನಿವಾಸಿಯಾಗುವ ಸೌಭಾಗ್ಯ ದೊರಕಿತೆಂದು ಕೊಂಡಾಡುತ್ತಾಳೆ. ಮಾತ್ರಹೃದಯಿ ಅಕ್ಕನಾಗಮ್ಮ ಸಮಸ್ತ ಶರಣ ಸಂಕುಲಕ್ಕೆ ತಾಯಿಯ ಪ್ರೀತಿ ತೋರಿ ‘ಮಹಾಮನೆಯ ಮಹಾ ತಾಯಿ’ಯೆಂದು ಕರೆಸಿಕೊಂಡ ಹೆಮ್ಮೆಯ ಪ್ರತೀಕ ಅಕ್ಕನಿಗೆ ಸಲ್ಲುತ್ತದೆ. ಸತಿಯ ಅಧ್ಯಾತ್ಮೀಕ ಪ್ರಭಾವಕ್ಕೆ ಬೆರಗಾದ ಪತಿ ಶಿವಸ್ವಾಮಿಯು ಧಾರ್ಮಿಕ ಪಥ ಮ್ಯೆಗೂಡಿಸಕೊಂಡು. ‘ಸತಿಗೆ ತಕ್ಕ ಪತಿ’ಯಾಗಿ ಭಕ್ತಿಪಥದಲ್ಲಿ ಸಾಗಿದ.
ಅಕ್ಕ-ತಮ್ಮ ಕಟ್ಟು ಬಯಸಿದ ಮಾನವ ಕಲ್ಯಾಣ ಕೀರ್ತಿ ವಾರ್ತೆ ಕೇಳಿ ನಾನಾ ದೇಶದಿಂದ ಶರಣರು ಭಾಗಹಿಸುವರು. ಮಹಾನುಭಾವ ಸದನದಲ್ಲಿ ಸರ್ವರಿಗೂ ಸಮಾನ ಅವಕಾಶ ಗೌರವ ಕೊಡಲಾಗುತ್ತಿತ್ತು. ಕಲ್ಯಾಣ ಅನುಭವ ಮಂಟಪವೆಂದರೆ ಮೊದಲ ಸದನವಾಗಿ ಖ್ಯಾತಿ ಪಡೆಯಿತು. ಮಾನವಿಯ ಮೌಲ್ಯಗಳನ್ನು ಎತ್ತಿಹಿಡಿಯುವ ವಿಶ್ವನೂತನ ಸಂಸ್ಥೆಯಾಗಿ ಪರಿಣಮಿಸಿತು.’ಮಹಾಮನೆ ಹಸಿವಿನ ದಾಹ ನಿಗಿಸಿ ಹೊಟ್ಟೆಗೆ ತಂಪು ನೀಡಿದರೆ. ಅನುಭವ ಮಂಟಪ ನೆತ್ತಿಗೆ ಜ್ಞಾನ ಕೊಡುತ್ತಿತ್ತು’ ಕೇವಲ ಅಧ್ಯಾತ್ಮ ಗೋಷ್ಠಿ ಅಷ್ಟೇ ನಡೆಯದೆ ಆರೋಗ್ಯ, ಆತ್ಮಬಲ, ಆತ್ಮಾವಲೋಕನ ನಡೆಯುತಿದ್ದವು.
ಅಕ್ಕನಾಗಮ್ಮ ಹೇಳಿಕೊಟ್ಟ ಸಕಾರಾತ್ಮಕ ನಡೆ-ನುಡಿಗಳು ಅನುಭವಮಂಟಪದ ಶರಣೆಯರ ಮೇಲೆ ಪ್ರಭಾವಿಸುತ್ತದೆ, ಹಲವಾರು ಮಹಿಳೆಯರು ಅಕ್ಕಳಿಂದ ಸ್ಪೂರ್ತಿ ಪಡೆದು ತಮ್ಮ ಮನದಾಳದ ಅನುಭವವನ್ನು ವಚನ ಸ್ವರೂಪದಲ್ಲಿ ವ್ಯಕ್ತಪಡಿಸುವ ಮಟ್ಟಿಗೆ ಹೆಮ್ಮರವಾಗಿ ಬೆಳೆಯುತ್ತಾರೆ. ಬಸವಣ್ಣನವರ ವಿಚಾರ ಪತ್ನಿಯಾದ ನೀಲಾಂಬಿಕೆ ತನ್ನ ಮಗನನ್ನು ಕಳೆದುಕೊಂಡು ದುದುಃಖದಲ್ಲಿದ್ದ ಸಂದರ್ಭದಲ್ಲಿ ತಾಯಿಯ ಮಡಲಿಂತೆ ಮೆಚ್ಚುಗೆ ಅಪ್ಪುಗೆ ಕೊಟ್ಟ ಅಕ್ಕ ನಾಗಮ್ಮ ಸಾಂತ್ವನದ ಪ್ರಭಾವದಿಂದ ಸ್ಥಿತಿ ಪ್ರಜ್ಞಾಳಾಗಿದ್ದ ನೀಲಾಂಬಿಕೆ ‘ಎನಗೆ ‘ಹಾಲೂಟವನಿಕ್ಕುವ ಕಾಯ’ ಎಂದು ಬಣ್ಣಿಸುತ್ತಾಳೆ. ಆಯ್ದಕ್ಕಿ ಲಕ್ಕಮ್ಮನವರು ಅಕ್ಕನಾಗಮ್ಮನವರ ಪ್ರಸಾದ ಕೊಂಡು ಎನ್ನ ಅಂತರಂಗ ಶುದ್ಧವಾಯಿತು ಎಂದು ಕೊಂಡಾಡುತ್ತಾಳೆ. ಮರುಳ ಶಂಕರ ದೇವರು ಎನ್ನ ಅವ್ವೆ ನಾಗಾಯಿ ಎಂದು ಗೌರವಪೂರ್ವಕ ವಂದಿಸುತ್ತಾರೆ.ಶರಣ ಕೋಲಶಾಂತಯ್ಯನವರು ಬಸವಣ್ಣನವರ ಮಹಾಮನೆಯಲ್ಲಿದ್ದು ಅಕ್ಕನಾಗಮ್ಮನ ಮಾತ್ರ ಹೃದಯ ಕಂಡು ವ್ಯಕ್ತಪಡಿಸುತ್ತಾರೆ.
“ಎನಗುಣಲಿಕ್ಕಿದರಯ್ಯಾ ಸಿರಿಯಾಳ-ಚಂಗಳೆಯರು, ಎನ್ನಗುಡಕೊಟ್ಟರಯ್ಯಾ ದಾಸ-ದುಗ್ಗಳೆಯರು, ಎನ್ನ ಮುದ್ದಾಡಿದರಯ್ಯಾ ಅಕ್ಕನಾಗಮ್ಮನವರು ಎನ್ನ ಸಲಹಿದರಯ್ಯಾ ಅಮ್ಮವೆ ಕೊಡಗುಸು ಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಿಗಳು ಇಂತಿವರ ಒಕ್ಕು ಮಿಕ್ಕ ತಾಂಬೂಲ ಪ್ರಸಾದವ ಕೊಂಡು ಬದುಕಿದೆನಯ್ಯಾ ಪುಣ್ಯರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ” ಎಂದು ಗೌರವಿಸುತ್ತಾರೆ.
ಇಡಿ ಶರಣ ಸಮೂಹದಲ್ಲಿ ಕ್ಷಾತ್ರತೇಜ, ವಿಚಾರವಂತ ಶರಣರೆನಿಸಿಕೊಂಡ ಶರಣ ಸಿದ್ಧರಾನವರು. “ನೀವು ಮಹಿಮರು ನಿಮ್ಮ ಜ್ಞಾನವೇ ಪ್ರಭುದೇವರು, ನೋಡಯ್ಯಾ ಕಪಿಲಸಿದ್ಧಮಲ್ಲಿನಾಥಯ್ಯ” ಕಪಿಲಸಿದ್ಧರಾಣಿಯೆಂದು ಅಕ್ಕನಾಗಮ್ಮ ೆನ್ನ ಹೆತ್ತ ತಾಯಿ ನೀವೇ ಅವ್ವಾ ಎಂದು ಹ್ರದಯಪೂರ್ವಕ ವರ್ಣಿಸುತ್ತಾರೆ. ‘ಹೆತ್ತ ತಾಯಿ ನೀನೆ ಅವ್ವಾ, ನನ್ನ ಹತ್ತಿರ ಬಂದಾಕೆ ನೀನೇ ಅವ್ವಾ ಲಿಂಗದ ಮೊತ್ತವಾದಾಕಿ ನೀನೇ ಅವ್ವಾ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ರಾಣಿ ನೀನೇ ಅವ್ವಾ. ಇದರನುಭಾವವ ಜೇಳಿದಾತನೇ ಭಕ್ತ ನೋಡವ್ವಾ ಆತ ಪ್ರಾಣ ಲಿಂಗಿಯವ್ವಾ” ಎಂದು ಹೃದಯಪೂರ್ವಕ ವಂದಿಸುತ್ತಾರೆ.
ಇಲ್ಲಿ ಸಮಸ್ತ ಶರಣಗಣಂಗಳ ವಚನ ಸಾಲುಗಳು ಕಿಂಡರೆ ಇಡಿ ಶರಣಸಮೂಹದಲ್ಲೇ ವಯಸ್ಸಿನಲ್ಲಿ ಹಿರಿಯಕ್ಕಳಾದ ಅಕ್ಕನಾಗಮ್ಮಳು ಒಂದು ಅದ್ಭುತ ಚೇತನಳಾಗಿ ಬೆಳಗಿದ್ದಳು, ಅಂತೆಯೇ ಇಡಿ ಶರಣ ಸಮೂಹದಲ್ಲಿ ಅವಳನ್ನೊಂದು ಸಾಮಾನ್ಯ ಹೆಣ್ಣು ಎಂದು ನೋಡದೆ ‘ನಮ್ಮ ತಾಯಿ ಅಕ್ಕನಾಗಮ್ಮ ಒಂದು ಅದ್ಭುತ ಚೇತನದ ಮಹಾಶಕ್ತಿದಾಯಿನಿ’ ಎಂಬ ಭಾವ ದಿಂದ ಕೊಂಡಾಡುತ್ತಾರೆ.
ಅಕ್ಕ-ತಮ್ಮರು ಕಟ್ಟುಬಯಸಿದ ಕನಸು-ನನಸಾಯಿತು. ಕಲ್ಯಾಣ ನಾಡು ಪಾವನಾಯಿತು, ಜಡ್ಡುಗಟ್ಟಿದ ಸಮಾಜದಲ್ಲಿ ಹೊಸ ಮತ ಉದಯಿಸಿತು.ದೀನ-ದಲಿತ,.ನೊಂದು-ಬೆಂದು-ಹತಾಶಯಕ್ಕೆ ಒಳಗಾದ ಜೀವಿಗಳಿಗೆ ಹೊಸ ಬದುಕು ಕಲ್ಪಿಸಿ ಕೊಟ್ಟರು..ಅಕ್ಕನಾಗಮ್ಮ-ಬಸವಣ್ಣನವರ ನೇತ್ರತ್ವದಲ್ಲಿ ಸುಂದರ ಸಮಾಜ ನಿರ್ಮಾಣಗೊಂಡಿತು. ನಿಜಕ್ಕೂ ಎಂತಹ ಕಲ್ಯಾಣ ನಿರ್ಮಿತ ಗೊಂಡಿತು ಅಂದರೆ. ಕಲ್ಯಾಣ ವರ್ಣನೆ ಎಷ್ಟು ವರ್ಣಿಸಿದರು ಶಬ್ದಗಳು ಸಾಲದು. ಸ್ಮರಿಸುವ ಮನಕ್ಕೆ ಮನದುಂಬದು. ಅಂಥ ಪವಿತ್ರ ಕಲ್ಯಾಣದ ನೆಲೆಯೊಳಗೆ ಕಣ್ಣುಗಳ ಎದುರಿಗೆ ಏನೇನೋ ಆಗಿ ಹಲವು ವರ್ಷಗಳ ಕಾಲ ವ್ಯೆಭವದಿಂದ ಅಂಬಾರಿ ಮೇಲೆ ಕುಳಿತು ಮೆರೆದಂತೆ ಮರೆಯಿತು. ಇಡೀ ಕಲ್ಯಾಣ ಭೂಖಂಡದ ತುಂಬ ಕೀರ್ತಿಶಾಲಿಯಾಗಿ ದಿವ್ಯ ಬೆಳಕಾಗಿ ಕಂಗೊಳಿಸಿತ್ತು. ಅತ್ಯಂತ ವ್ಯೆಭವಪೂರ್ವಕ ದಿಂದ ತುಂಬಿ ತುಳುಕುವ ಕಲ್ಯಾಣ ಎನ್ನುವುದು ಕೇವಲ ಮಾನವ ಕಲ್ಯಾಣವಾಗಿರದೆ ಭೂಲೋಕದ ಕ್ಯೆಲಾಸವೆನಿಸಿತು. ಕಲ್ಯಾಣಕ್ಕೂ ಬಸವಾದಿ ಶಿವಶರಣರಿಗೂ ಅವಿನಾಭಾವ ಸಂಬಂಧವಾಗಿತ್ತು.
ಆದರೆ ವಿಷಾದನೀಯ ಸಂಗತಿ ಎಂದರೆ. ಪರಮಧರ್ಮಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.ದೇಹವೇ ದೇಗುಲ ಎಂದು ಸಾರಿದ ಸುಂದರ ಕಲ್ಲಾಣ ಪರಿಸರವನ್ನು ಹಾಳು ಮಾಡಬೇಕೆಂದು ಕುಹಕಿಗಳು ಸಂಚು ಹೂಡಿದರು. ಇಂಥ ಕಾಯ್ದುಕೊಂಡ ಸ್ಥಿತಿಯಲ್ಲಿ ಅವರಿಗೆ ನೆಪವೊಂದು ಸಿಕ್ಕಿತ್ತು. ಅದುವೆ ಮಧುವರಸ-ಹರಳಯ್ಯನವ ಮಕ್ಕಳ ಅಂತರ್ಜಾತಿ ವಿವಾಹ. ಇಡಿ ಶರಣ ಸಂಕುಲ ದ್ರಷ್ಟಿಯಲ್ಲಿ ಲಾವಣ್ಯ-ಶೀಲವಂತರ ಮದುವೆಗೆ ಒಪ್ಪಿಗೆ ಸೂಚಿಸಿತು. ಆದರೆ ಸಡವರ್ಣಿಯರಿಗೆ ಅಂತ್ರಜಾತಿ ಸಂಬಂಧ ಎಂದು ರಾಜಾರೋಷವಾಗಿ ತೇಜೋವಧೆಗೊಳಿಸಿದರು. ನಿರ್ದೋಶಿ ಮಧುವಯ್ಯ, ಹರಳಯ್ಯ, ಶೀಲವಂತ, ಮೂವರ ಶರಣರಿಗೆ ಆನೆಯ ಕಾಲಿಗೆ ಕಟ್ಟಿ ಎಳೆಹೂಟೆ ಶಿಕ್ಷೆ ಘೋಷಿಸಿ ಹತ್ಯೆಗೆ ಕಾರಣರಾದರು. ಅದೇ ಸರಿಯಾದ ಸಮಯಕ್ಕೆ ಬಸವಣ್ಣನವರಿಗೆ ಮುಂದಿನ ಮೂವತ್ತು ಮುಹೂರ್ತಗಳಲ್ಲಿ ಕಲ್ಯಾಣ ರಾಜ್ಯದ ಸೀಮೆ ದಾಟಿ ಹೊರಡಬೇಕು ಎಂಬ ರಾಜಾಜ್ಞೆ ಆದೇಶ ಹೊರತುಪಡಿಸಿದರು. ಮಧ್ಯರಾತ್ರಿಯಲ್ಲೇ ದೊರೆ ಬಿಜ್ಜಳನು ಹೆಣವಾಗಿ ಹೋದ. ಕಲ್ಯಾಣ ತುಂಬೆಲ್ಲ ದಂಗೆ ಪ್ರಾರಂಭಗೊಂಡರೆ. ಅತ್ತ ಬಸವಣ್ಣನವರು ಕೂಡಲಸಂಗಮಕ್ಕೆ ಹೊರಡುತ್ತಾರೆ. ಹಡೆದ ತಾಯಿಕ್ಕಿಂತಲು ಪಡೆದ ತಾಯೆ ಶ್ರೇಷ್ಠ ಎಂಬಂತೆ ಅಕ್ಕನಾಗಮ್ಮ ತನ್ನ ಬದುಕು ತಮ್ಮನಿಗಾಗಿ ಗಂಧದ ಕೊರಡಿನಂತೆ ತಮ್ಮನ ಭವಿಷ್ಯಕ್ಕಾಗಿ ಸವೆಸಿದಳು. ಆಕ್ಕ-ತಮ್ಮ ಒಂದು ಕ್ಷಣ ಬಿಟ್ಟಿರಲಾರದ ಎರಡು ಜೀವಗಳ ಸಂಬಂಧ ಶಾಶ್ವವತವಾಗಿ ಬೇರ್ಪಡಿಸಿತು. ಪ್ರಾಣ ಜೀವಾಳ ತಮ್ಮ ಬಸವಣ್ಣ ಕೂಡಲಸಂಗಮದಲ್ಲಿ ಬಯಲಲ್ಲಿ ಬಯಲಾದದ್ದನ್ನು ಸುದ್ದಿ ಕೇಳಿದ ಅಕ್ಕನಾಗಮ್ಮನಿಗೆ ಬರಸಿಡಿಲು ಬಡಿದಂತಾಗುತ್ತದೆ. ಆಕೆ ಅಳು ತಡೆಯಲಾಗದೆ ರೋದನ ವ್ಯಕ್ತಪಡಿಸಿದಳು.
“ಬಸವಣ್ಣಾ, ನೀವು ಮರ್ತಕ್ಕೆ ಬಂದು ನಿಂದರೆ ಭಕ್ತಿಯ ಬೆಳವಿಗೆ
ದೆಸೆದೆಸೆಗೆಲ್ಲಾ ಪಸರಿಸಿತಯ್ಯ, ಸ್ವರ್ಗ, ಮತ್ರ್ಯ, ಪಾತಾಳದೊಳಗೆಲ್ಲಾ ನಿಮ್ಮ
ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು? ಅಣ್ಣಾ ಶಶಿಧರನಟ್ಟದ ಮಣಿಹ
ಪೂರ್ಯೆಸಿತ್ತೆಂದು ನೀವು ಲಿಂಗ್ಯೆಕ್ವವಾದಿರೆ? ನಿಮ್ಮೊಡನೆ ಭಕ್ತಿ ಹೋಯಿತಯ್ಯ
ನಿಮ್ಮೊಡನೆ ಸದಾಚಾರ ಹೋಯಿತಯ್ಯ ನಿಮ್ಮೊಡನೆ ಅಸಂಖ್ಯಾತರು
ಹೋದರು ಅಣ್ಣಾ, ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತು
ಬಸವಣ್ಣಾ ಎನ್ನನೊಯ್ಯದೆ ಹೋದೆಯಲ್ಲಾ ಪಂಚ ಪುರುಷ ಮೂರುತಿ
ಬಸವಣ್ಣಾ! ಬಸವಣ್ಣ ಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ
ಹೋದೆಯಲ್ಲಿ ಸಂಗನ ಬಸವಣ್ಣಾ”
ಮಾಣಿಕ್ಯ ರತ್ನದಂತಿದ್ದ ನನ್ನ ಮುದ್ದಿನ ತಮ್ಮನಿಗೆ ಪ್ರಾಣಕ್ಕಿಂತ ಹೆಚ್ಚಾಗಿ ಕಾಪಾಡಿ ಪ್ರತಿ ಹಂತದಲ್ಲೂ ನಿನ್ನ ನೆರಳಿಗೆ ನೆರಳಾಗಿ ಆಶ್ರಯ ಕೊಟ್ಟ ಅಕ್ಕನಿಂದ ಶಾಶ್ವತವಾಗಿ ಅಗಲಲು ನಿನ್ನ ಮನಸ್ಸಾದರೂ ಹೇಗೆ ಆಯ್ತಪ್ಪ? ನನ್ನ ಸರ್ವಸ್ವವೇ ನೀನೇ ಆಗಿರುವಾಗ ನಿನ್ನ ಅಗಲಿ ಎಂತು ಸ್ಯೆರಿಸಲಿ ತಮ್ಮ? ನಿನ್ನ ಅಕ್ಕನಿಂದ ಅಗಲಿ ಹೋಗುವುದು ಯಾವ ನ್ಯಾಯವಪ್ಪ? ಒಂದು ಸುಳಿವಾದರೂ ತೋರಬಾರದೆ? ಎಲ್ಲಿ ಹುಡಕಲಿ ನಿನ್ನ? ಹೇಳು ಬಸವಣ್ಣ? ಒಂದು ನಾಣ್ಯ ಎರಡು ಮುಖವಿದ್ದಂತ ಅಕ್ಕ-ತಮ್ಮರ ಸಂಬಂಧ ಒಡೆದು ಚೂರಾಯಿತು.
ತಮ್ಮನಿಂದ ಅಗಲಿದ ಜೀವನವೇ ಸಾಕೆಂದು ಹತಾಶೆ ಗೊಂಡ ಅಕ್ಕನಾಗಮ್ಮನಿಗೆ ಮುದ್ದಿನ ಮಗ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನ ಲಿಂಗ್ಯೆಕ್ಯವಾದ ಸುದ್ದಿ ತಿಳಿದು ಅಘಾತ ಸಂಭವಿಸುತ್ತದೆ. ಕೊನೆಗೂ ಹತಾಶೆ ಗೊಳ್ಳದ ನಾಗಲಾಂಬಿಕೆ ಬಸವಾದಿ ಶಿವಶರಣರ ಪ್ರಾಣ ಜೀವಾಳ ವಚನ ಸಾಹಿತ್ಯ ರಕ್ಷಣೆಗೋಸ್ಕರ ಟೊಂಕಕಟ್ಟಿ ನಿಲ್ಲುತ್ತಾಳೆ. ನೂತನ ಲಿಂಗಾಯತ ಧರ್ಮ ಪ್ರಸಾರ ಗ್ಯೆಯುತ್ತ. ವಚನ ತತ್ವಾನುಭವ ಭಕ್ತರಿಗೆ ಉಣಬಡಿಸುತ್ತ ಉಳುವಿ ಕ್ಷೇತ್ರದಿಂದ ಎಣ್ಣೆ ಐಹೊಳೆಯಲ್ಲಿ ನೆಲೆ ನಿಲ್ಲುತ್ತಾಳೆ. ಅಕ್ಕನ ಅಕ್ಕನಾಗಾಮ್ಮನ ಅನುಭಾವ ಆಲಿಸಲು ನಾಡಿನ ಮೂಲೆ ಮೂಲೆಗಳಿಂದ ಜನ ಸಾಗರ ಬರಲಾರಂಭಿಸಿತು. ಹಾಗಾಗಿ ಎಣ್ಣೆ ಐಹೊಳೆ ಕ್ಷೇತ್ರ ಅದೊಂದು ಸುಂದರ ಪ್ರಸಿಸಿದ್ಧ ಧಾರ್ಮಿಕ ಕೇಂದ್ರವಾಗಿ ಪರಿಣಮಿಸುತ್ತದೆ.
ಆದರೆ ಅಕ್ಕನಾಗಮ್ಮನಿಗೆ ಲಿಂಗ ಪೂಜೆಗ್ಯೆಯಲು ಯಾವ ಸೌಕರ್ಯಗಳು ಹೆಚ್ಚಾಗಿ ಲಭಿಸುವುದಿಲ್ಲ. ಕಳವಳ ಗೊಂಡ ಭಕ್ತರು. ‘ತಾವು ಮಹಾಮನೆಯಲ್ಲಿದ್ದವರು ಇಂಥ ನಿರ್ಗಮ ಪ್ರದೇಶದಲ್ಲಿ ಹೇಗೆ ಇರುವಿರಿ ತಾಯಿ? ಎಂದು ನುಡಿದಾಗ. ಲೌಕಿಕ ಜಗತ್ತನಬ್ನೆ ತ್ಯಜ್ಜಿಸಿದ ಅಕ್ಕನಾಗಮ್ಮ. ಎದುರಿಗೆ ಹರೆಯುವ ಎಣ್ಣೆ ತೊರೆಯ ಬೊಗಸೆ ನೀರು ಕ್ಯೆಯಲ್ಲಿ ಹಿಡಿದು. ‘ಈ ತಿಳಿನೀರೇ ಲಿಂಗ ಮಜ್ಜನಕ್ಕೆ ಪರಮ ಪವಿತ್ರ ಅಗ್ಘವಣಿ, ಇಲ್ಲಿನ ಸುತ್ತಲಿನ ಹಸಿರು ತಾಣ. ಕುಸುಮ, ತರುಲತಗಳೇ ಮೂರದಳ ಬಿಲ್ವಪತ್ರೆ, ಈ ಪುಣ್ಯ ಭುವಿಯ ಮಣ್ಣೆ ವಿಭೂತಿ, ಇಲ್ಲಿಯ ಅಹ್ಲಾದಕರ ತಂಪು ಗಾಳಿಯೇ ಗಂಧಾಕ್ಷತೆಗಳು, ಹೊಳೆಯುವ ಸೂರ್ಯನ ಕಿರಣಗಳೇ ಧೂಪಾರತಿ, ಇಂಪಾದ ಪಕ್ಷಿಗಳ ಇಂಚರವೆ ಗಂಟೆಯನಾದ, ತಂಪು ಗಾಳಿಯೆ ಪ್ರಸಾಗ, ಸಕಲ ಚರಾಚರಗಳಲ್ಲಿ ಸ್ರಷ್ಟಿಕರ್ತ ಪರಮಾತ್ಮನಿರುವಾಗ ಇನ್ನೂ ಸಕಲ ಸಲಕರಣೆಗಳ ಹಂಗೇಕೆ?” ಅನುಭಾವ ತುಂಬಿ ತುಳುಕುವ ಅಕ್ಕನ ದಿವ್ಯ ವಾಣಿ ಕೇಳಿ ಭಕ್ತರು ದಂಗಾಗುತ್ತಾರೆ. ಈ ಮಧ್ಯೆ ಇಳೆವಯದ ಅಜ್ಜ. ‘ಅದೇನೋ ಸರಿ ತಾಯಿ, ಆದರೆ ಜ್ಯೋತಿ ಬೆಳಗಿಸಲು ಎಣ್ಣೆ ಬೇಕಲ್ಲವೆ? ದೀಪ ಬೆಳಗದೆ ಶಿವಯೋಗ ಪರಿಪೂರ್ಣ ಗೊಳ್ಳಲು ಸಾಧ್ಯವೆ? ಪ್ರಶ್ನೆಯ ಉತ್ತರ ಅಷ್ಟೇ ಅಚಲ ನಿರ್ಭಾವ ದಿಂದ ಉತ್ತರಿಸುತ್ತಾಳೆ. “ಕಲ್ಯಾಣವೆಂಬುದು ತ್ಯೆಲವಾಗಿತ್ತು, ನಾನು ಬತ್ತಿಯಾದೇನು, ಒಂದು ಲಕ್ಷ ತೊಂಬತ್ತಾರು ಸಾವಿರ ಶರಣರು. ಹಾಗೂ ಏಳ ನೂರಾ ಎಪ್ಪತ್ತು ಅಮರಗಣಂಗಳ ಚಿದಬೆಳಕು ನನ್ನ ಅಂತರಂಗದಲ್ಲಿ ದೀಪ್ತಿಯಂತೆ ಬೆಳಗುತ್ತಿರಬೇಕಾದರೆ ನನಗಾವ ದೀಪದ ಹಂಗಿಲ್ಲಪ್ಪ.
“ಆಚಾರವೆಂಬುದು ಅಗೋಚರ ನೋಡಯ್ಯ ಆರಿಗೆಯೂ ಸಾಧ್ಯವಿಲ್ಲ
ಮತ್ರ್ಯಲೋಕದಲ್ಲಿ ಸದಾಚಾರ ಬೆಳುಗೆಯ ಮಾಡಲೆಂದು ಬಸವಣ್ಣ
ಬಂದ ಭಕ್ತಿಸ್ಥಲವನರುಹಿದನು. ಗುರು ಲಿಂಗ ಜಂಗಮ ದಾಹೋಹ,
ಪಾದೋದಕ, ಪ್ರಸಾದದ ಹಾದಿಯನ್ನೆಲ್ಲರಿಗೂ ತೋರಿದ ಶಿವಾಚಾರ
ಬೆಳವಿಗೆಯನಹುದಲ್ಲವೆಂದು ಬಿಜ್ಜಳ ತರ್ಕಿಸಲು ಅನಂತಮುಖದಿಂದ
ಒಡಂಬಡಿಸಿ ಅಹುದೆನಿಸಿದ ಬಂದು ಪೂರ್ಯೆಸಿತ್ತೆಂದು ಲಿಂಗದೊಳಗೆ ಬಂದು
ಹೊಕ್ಕೊಡೆ ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟನು
ನಾನು ಹಿಂದುಳಿದವಳೆಂದು ಮುಂದಣ ಗತಿಯ ತೋರೆ ಬಸವಣ್ಣ ಪ್ರಿಯ
ಚೆನ್ನಸಂಗಯ್ಯನಲ್ಲಿ ತನ್ನ ಪ್ರಸಂಗದೊಳಗೆ ಇಂಬಿಟ್ಟುಕೊಂಡು ಎನ್ನ ಹೆತ್ತ
ತಂದೆ ಸಂಗನ ಬಸವಣ್ಣ”
ಸುಮಾರು ಹತ್ತು ವರ್ಷಗಳವರೆಗೆ ಎಣ್ಣೆ ಹೊಳೆ ನದಿಯ ನೆಲೆಸಿದ ಅಕ್ಕನಾಗಮ್ಮ. ಅಕ್ಕಳ ದಿವ್ಯ ಸನ್ನಿಧಿಯಲ್ಲಿ ಸಹಸ್ರಾರು ಭಕ್ತರು ಪರಿವರ್ತಿತರಾಗಿ ಲಿಂಗಾಯತ ಧರ್ಮ, ಶರಣರ ವಚನ ರಕ್ಸಿಸಿ ನಾಡಿನ ಮೂಲೆ ಮೂಲೆಗೆ ತಲುಪಿಸಿ. ಪ್ರಚಾರ ಮಾಡಲು ತಮ್ಮ ಬದುಕು ಅರ್ಪಿಸಿದರು. ಊರು ಊರುಗಳಿಂದ ಬಂದ ಸದ್ಭಕ್ತರು ಅಕ್ಕಳ ಹಸ್ತದಿಂದ ಲಿಂಗದೀಕ್ಷೆ ಪಡೆದು ಶಿವಯೋಗ ಸಾಧನೆ ಶರಣರ ವಚನ ಅಧ್ಯನ ಜೊತೆ ಅವರ ಜಿವ್ಹೆಯಲ್ಲಿ ಸದಾ ‘ಬಸವಾ, ಬಸವಾ, ಬಸವಾ’ ಎಂಬ ಮಂತ್ರ ಜಪಿಸುತ್ತ. ಮಾನವನಿಂದ ಮಹಾಮಾನವರಾಗಿಸಿದ ಶ್ರೇಯಸ್ಸು ಅಕನಾಗಮ್ಮನಿಗೆ ಸಲ್ಲುತ್ತದೆ. ಅಂದು ಬೆಳಗಿನ ಜಾವ. ಶಿವಯೋಗದಲ್ಲಿ ತಲ್ಲಿನಳಾದ ಕ್ಕನಾಗಮ್ಮನ ಿಷ್ಟಲಿಂಗದ ಮೇಲೆ ಸೂರ್ಯನ ಕಿರಣ ಕಂಗೊಳಿಸುತ್ತಿತ್ತು. ಆ ದಿವ್ಯ ಬೆಳಕಿನಲ್ಲಿ ಮಹಾ ಬೆಳಗು ಗೋಚರಿಸುತ್ತದೆ. ಕೊನೆಯ ಬಾರಿಗೆ ಅಕ್ಕನ ಮನಸು ಬಯಲಲ್ಲಿ ಬಯಲಾಗಬೇಕು ಎಂದು ಹಂಬಲಿಸುತ್ತದೆ.
“ಭಕ್ತಿಯೆಂಬ ಪೃಥ್ವಿಯಲ್ಲಿ ಮೇಲೆ 770 ಅಮರಗಣಂಗಳು ಅವತರಿಸಿ, ಗುರು-ಲಿಂಗ-ಜಂಗಮವನ್ನು ಸ್ತಿರಗೊಳಿಸಿ, ಪಂಚಾಚಾರ ಸ್ಥಾಪಿಸಿ ಷಟಸ್ಥಲ ಜ್ಞಾನ ಅಷ್ಟಾವರಣಗಳನ್ನಾಚರಿಸಿ ಒಂದು ಸ್ಪಷ್ಟ ಸರಳ ಎಲ್ಲರಿಗೂ ಒಪ್ಪುವಂತಹ, ಅನ್ಸುವಯಿಸುವಂತಹ ಸಿದ್ಧಾಂತಗಳನ್ನೇ ರೂಪಿಸಿದ ನಮ್ಮ ಬಸವಯ್ಯ ಬಯಲಲ್ಲಿ ಬಯಲಾದ. ಆ ಬಯಲಲ್ಲಿ ಬೆರೆತ ಆನು ಕೂಡಲಸಂಗಮದೇವನೆಂಬ ಮಹಾನೆಳಗಿನೊಳಗಿರ್ದು ಶಬ್ದ ಮುಗ್ದವ್ಯಾಪ್ತಿ ಹೇಳಿಕೊಟ್ಟ ನೀನು “ಬಯಲ ರೂಪ ಮಾಡಬಲ್ಲಾತನೇ ಶರಣ, ಆ ಬಯಲ ರೂಪ ಮಾಡಲರಿಯದಿರ್ದಡೆ ಎಂತು ಶರಣೆಂಬೆ? ಆ ರೂಪ ಬಯಲ ಮಾಡಲರಿಯದಿರ್ದಡೆ ಎಂತು ಲಿಂಗಾನುಭವಿಯೆಂಬೆ? ಈ ಉಭಯಐನೊಂದಾಗಿಯರಿಯದಿರ್ದಡೆ ನಿಮ್ಮಲ್ಲಿ ತೆರಹುಂಟೇ? ಬಯಲು ರೂಪವ ತೋರಿದ ಬಸವಯ್ಯ ನನ್ನನ್ನೇಕೆ ಅಡಗಿಸಿಕೊಳ್ಳಲ್ಲಯ್ಯ? ಎಂದು ತಮ್ಮ ಬಸವಯ್ಯನಲ್ಲಿ ಹಲಬುತ್ತಾಳೆ”
ನಿಜಕ್ಕೂ ಎಂಥ ಅದ್ಭುತ .ಚೇತನ ಅಕ್ಕನಾಗಮ್ಮ. ಹೆಣ್ಣಲ್ಲಯಿವಳು. ಧೀರ ಸ್ತ್ರೀ ಶಕ್ತಿ, ಇಡಿ ಸ್ತ್ರೀ ಸಮೂಹಕ್ಕೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟ ಕ್ರಾಂತಿ ಮಾತೆ”.
“ಕ್ರಾಂತಿ ಮಾತೆ ಅಕ್ಕನಾಗಮ್ಮನಿಗೆ ಶರಣು ಶರಣಾರ್ಥಿ”
ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…
ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…
ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…
View Comments
ಉತ್ತಮವಾಗಿ ಮೂಡಿಬಂದಿದೆ .