ಸುರಪುರ: ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದ ಬಳಿಯಲ್ಲಿನ ರಸ್ತೆಯ ಪಕ್ಕದಲ್ಲಿರುವ ಗೌಂಠಾಣ ಜಾಗವನ್ನು ಕೆಲವರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ,ಇದಕ್ಕೆ ನಗರಸಭೆಯ ಅಧಿಕಾರಿಗಳು ನಿವೇಶನಕ್ಕೆ ನಂಬರ್ ನೀಡಿದ್ದು ಇದರಿಂದ ದಲಿತರು ಮತ್ತು ಭೂ ಮಾಫಿಯಾದವರ ಮದ್ಯೆ ಗಲಾಟೆಗಳಾಗುವ ಸಂಭವವಿದೆ.ಇದಕ್ಕೆ ನಗರಸಭೆಯ ಅಧಿಕಾರಿಗಳೆ ಹೊಣೆಯಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆರೋಪಿಸಿದರು.
ನಗರಸಭೆ ಕಚೇರಿ ಮುಂಭಾಗದಲ್ಲಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಸರ್ವೆನಂ:೨೩/೭ ಮತ್ತು ಬೆಂಗಳೂರು- ಕಲಬುರ್ಗಿರಸ್ತೆಯ ಹತ್ತಿರ ವಿರುವ ಗೌಠಾಣಾ ಸ್ಥಳವನ್ನು ನಗರದ ಕೆಲವು ವ್ಯಕ್ತಿಗಳು ಸೇರಿಕೊಂಡು ೫೦ ಮತ್ತು ೧೦೦ ರೂ ಛಾಪಾ ಕಾಗದದ ಮೇಲೆ ಬರೆದುಕೊಟ್ಟು ಸರಿಯಾದ ನಿವೇಶನವನ್ನು ಗುರುತಿಸದೆ ನೀಡಿದ್ದಾರೆ ಅಷ್ಟಕ್ಕು ಅಲ್ಲಿ ಯಾವುದೆ ತರೆನಾದ ಖಾಸಗಿ ನಿವೇಶನಗಳು ಆ ಸ್ಥಲದಲ್ಲಿ ಇರುವುದಿಲ್ಲಾ ಈ ಎಲ್ಲಾ ವಿಷಯಗಳು ಪೌರಾಯುಕ್ತರ ಗಮನಕ್ಕಿದ್ದರು ಯಾವುದೆ ಕ್ರಮ ಜರುಗಿಸದೆ ಇರುವುದು ದುರದೃಷ್ಟಕರವಾಗಿದೆ. ಎಂದು ಬೇಸರ ವ್ಯಕ್ತಪಡಿಸಿದರಿ ಆ ಸ್ಥಳಗಳಿಗೆ ಈಗಾಗಲೆ ನಗರಸಭೆವೆ ನಿವೇಶನ ಸಂಖ್ಯೆಯನ್ನು ನೀಡಿರುವುದನ್ನು ನೋಡಿದರೆ ಈ ಮೋಸದ ವ್ಯವಹಾರದಲ್ಲಿ ಅಧಿಕಾರಿಗಳಪಾಲು ಇರುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ತಕ್ಷಣವೆ ಪೌರಾಯುಕ್ತರು ಸದರಿ ಸ್ಥಳಕ್ಕೆ ಸಂಬಂಧಿಸಿ ನೀಡಿದ ನಿವೇಶನಗಳ ಸಂಖ್ಯೆಯನ್ನು ರದ್ದುಗೊಳಿಸಿ ತಪ್ಪಿತಸ್ಥ ಅಧಿಕಾರಿಗಳ ಮತ್ತು ವ್ಯಕ್ತಿಗಳಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ತಮ್ಮ ಮೇಲೆಯೆ ಅಟ್ರಾಸಿಟಿ ಮತ್ತು ೪೨೦ ಕೇಸು ದಾಖಲಿಸಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿ ನಂತರ ಮನವಿಯನ್ನು ಪೌರಾಯುಕ್ತ ಜೀವನ ಕುಮಾರ ಅವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾನಪ್ಪ ಕಟ್ಟಿಮನಿ, ಬೀಮರಾಯ ಸಿಂಧಗಿರಿ, ನಿಂಗಣ್ಣ ಮುಷ್ಠಳ್ಳಿ, ರಾಮಣ್ಣ ಶಳ್ಳಗಿ,ತಿಪ್ಪಣ್ಣ ಶೆಳ್ಳಿಗಿ,ಜೆಟ್ಟೆಪ್ಪ ನಾಗರಾಳ ಸೇರಿದಂತೆ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…