ಕಲಬುರಗಿ: ಸ್ವಾತಂತ್ರ್ಯಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಮತ್ತು ಅವರ ಹಜರತ್ ಟಿಪ್ಪು ಸುಲ್ತಾನ್ ಅವರ ಇತಿಹಾಸ ಸಂವಿಧಾನಕ್ಕೆ ಸಂಬಂಧಿಸಿದ ಕೆಲ ಪಠ್ಯವನ್ನು ರಾಜ್ಯ ಸರಕಾರ ಕೈಬಿಟ್ಟಿದ್ದು, ರಾಣಿ ಅಬ್ಬಕ್ಕ ,ಜೀಸಸ್ , ಪ್ರವಾದಿ ಮೊಹಮ್ಮದ್, ಅವರ ಇತಿಹಾಸವನ್ನು ಪಠ್ಯದಿಂದ ಕೈಬಿಟ್ಟಿರುವುದನ್ನು ಖಂಡಿಸಿ, ಪಠ್ಯದಲ್ಲಿ ಸೇರಿಸಬೇಕೆಂದು ನಯಾ ಸವೇರಾ ಸಂಘಟನೆ ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೋವಿಡ್ 19 ಹಿನ್ನೆಲೆಯಲ್ಲಿ ಪಠ್ಯಗಳನ್ನು ಕಡಿತಗೊಳಿಸುವ ನೆಪದಲ್ಲಿ 6ರಿಂದ 10ನೇ ತರಗತಿವರೆಗೆ ಸಮಾಜ ವಿಜ್ಞಾನ ವಿಷಯದಲ್ಲಿ ಇದ್ದ ಸಂವಿಧಾನ, ಮಹಿಳಾ ದಲಿತ ಕಾರ್ಮಿಕರ ಚಳುವಳಿ, ಹಜರತ್ ಟಿಪ್ಪು ಸುಲ್ತಾನ್, ಸೇರಿದಂತೆ ಜನಪರ ಆಶಯಗಳನೊಳಗೊಂಡ ಪಾಠವನ್ನು ಕೈಬಿಡಲಾಗಿದೆ, ಎಂದು ಶಿಕ್ಷಣ ತಜ್ಞರು ,ಪ್ರಗತಿಪರ ಸಂಘಟನೆಗಳು, ನಾಯಕರು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋವಿಡ್ 19 ನೆಪದಲ್ಲಿ ಆಶಯಗಳನೋಳಗೊಂಡ ಪಠ್ಯಗಳನ್ನೇ ಕೈಬಿಡಲಾಗಿದೆ. ಸರ್ಕಾರ ಕೈ ಬಿಟ್ಟಿರುವ ಪಠ್ಯಗಳನ್ನು ಒಮ್ಮೆ ಅವಲೋಕಿಸಿದರೆ ದುರುದ್ದೇಶಪೂರ್ವಕವಾಗಿ ಸಂವಿಧಾನ ,ಚಳುವಳಿಗಳಿಗೆ, ಟಿಪ್ಪು ಸುಲ್ತಾನ್ ಗೆ ಸಂಬಂಧಿಸಿದ ಪಠ್ಯಗಳನ್ನು ಕೈಬಿಟ್ಟಿರುವುದು ಗೋಚರವಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್
6ನೇ ತರಗತಿಯಲ್ಲಿದ್ದ ಪಠ್ಯವನ್ನು ಬಿಡಲಾಗಿರುವ ಪ್ರಮುಖ ವಿಷಯಗಳು ಸಮಾಜ ,ವಿಜ್ಞಾನ, ವಿಷಯದಲ್ಲಿ ಇದ್ದ ಏಸುಕ್ರಿಸ್ತನ ಜೀವನ ಕ್ರೈಸ್ತ ಧರ್ಮ ಬೋಧನೆಗಳು ,ಪ್ರವಾದಿ ಮಹಮ್ಮದರ ಇಸ್ಲಾಂ ಧರ್ಮದ ಬೋಧನೆಗಳು , ಮೌರ್ಯರ ಆಡಳಿತ ಪದ್ಧತಿಯನ್ನು ಕೈಬಿಡಲಾಗಿದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿ ಕೈಬಿಡಲಾಗಿದೆ. ತುಳುನಾಡಿನ ಮತ್ತು ಧರ್ಮ ವಾಸ್ತುಶಿಲ್ಪ ಮತ್ತು ಜನಪರ ವಿಷಯಗಳನ್ನು ಕೈಬಿಡಲಾಗಿದೆ . 7ನೇ ತರಗತಿಯಲ್ಲಿ ಕೈ ಬಿಡಲಾಗಿರುವ ಪಠ್ಯಗಳು. ದಲಿತ ಮತ್ತು ಮಹಿಳಾ ಚಳುವಳಿಗಳನ್ನು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕೈಬಿಡಲಾಗಿದೆ. ರಾಣಿ ಅಬ್ಬಕ್ಕ ,ಬಳ್ಳಾರಿ ಸಿದ್ದಮ್ಮ, ಮತ್ತು ಉಮಾಬಾಯಿ ಕುಂದಾಪುರ, ಅವರ ಇತಿಹಾಸವನ್ನು ಕೈಬಿಡಲಾಗಿದೆ. ಕರ್ನಾಟಕ ಏಕೀಕರಣ ಆಂದೋಲನದಲ್ಲಿ ಪತ್ರಿಕೆ ಮತ್ತು ಸಾಹಿತ್ಯದ ಪಾತ್ರವನ್ನು ಕೈಬಿಡಲಾಗಿದೆ. ಸಂವಿಧಾನದ ಪ್ರಸ್ತಾವನೆ ಮತ್ತು ಜಾತ್ಯತೀತತೆ ಕೈಬಿಡಲಾಗಿದೆ. ಉತ್ತರ ಭಾರತದ ಭಕ್ತಿ ಪರಂಪರೆ ಕಬೀರದಾಸರು ,ತುಳಸಿದಾಸರು, ಸೂಫಿ ಪರಂಪರೆ ,ಮತ್ತು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಂಬಂಧಿಸಿದ ಪಠ್ಯಪುಸ್ತಕಗಳು ಕೈಬಿಡಲಾಗಿದೆ. ಮೊಘಲ್ ಸಂಸ್ಕೃತಿಕ ಕೊಡುಗೆಗಳು, ಮತ್ತು ರಾಜರಾಮ್ ಮೋಹನ್ ರಾಯರ ,ಜ್ಯೋತಿ ಬಾಪುಲೆ, ದಯಾನಂದ್ ಸರಸ್ವತಿ, ವಿವೇಕಾನಂದ, ನಾರಾಯಣ ಗುರು ,ಕುರಿತು ಕಲಿಕಾಂಶಗಳನ್ನು ಮಿತಿಗೊಳಿಸಲಾಗಿದೆ. ಪಠ್ಯಪುಸ್ತಕ ರಚನಾ ಸಮಿತಿ ರಚಿಸಿರುವ ಪುಸ್ತಕಗಳನ್ನು ಕೋವಿಡ್ 19 ನೆಪದಲ್ಲಿ ಏಕಾಏಕಿ ಕಡಿತಗೊಳಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಪ್ರತಿ ಪಠ್ಯಗಳ ಅಳವಡಿಕೆಯ ಹಿಂದೆ ಸಾಕಷ್ಟು ಚರ್ಚೆ ಚಿಂತನೆಗಳು ಇರುತ್ತವೆ ಹೀಗಾಗಿ ಯಾವುದೇ ಪಠ್ಯವನ್ನು ಕೈ ಬಿಡುವ ಮುನ್ನ ಶಿಕ್ಷಣತಜ್ಞರ ಮತ್ತು ಹಿಂದಿನ ಪಠ್ಯ ಪುಸ್ತಕ ರಚನಾ ಸಮಿತಿಯ ಅಭಿಪ್ರಾಯ ಸಲಹೆಗಳು ಪಡೆಯುವುದು ಅತಿ ಮುಖ್ಯವಾಗಿತ್ತು ಎಂದು ತಿಳಿಸಿದರು.
ಯಾವುದೇ ಚರ್ಚೆ ನಡೆಸಿದೇ ನೇರವಾಗಿ ಕೇಸರಿಕರಣ ಗೊಳಿಸುವ ಉದ್ದೇಶದಿಂದ ತಮ್ಮ ರಾಜಕೀಯ ಲಾಭಕ್ಕಾಗಿ ಈ ರೀತಿ ರಾಜ್ಯ ಸರ್ಕಾರ ಮಾಡುತ್ತಿದೆ .ಬಿಜೆಪಿ ಸರ್ಕಾರವು ಪಠ್ಯಪುಸ್ತಕದಿಂದ ಟಿಪ್ಪು ವಿಚಾರ ಮಾತ್ರವಲ್ಲ ಸಂವಿಧಾನ ಜಾತ್ಯತೀತತೆ ಪ್ರಜಾಪ್ರಭುತ್ವ ಮುಂತಾದ ವಿಷಯಗಳನ್ನೊಳಗೊಂಡ ಪಠ್ಯವನ್ನು ಕಡಿತ ಮಾಡುತ್ತಿದೆ. ಸಂವಿಧಾನ ರಚನೆಯಲ್ಲಿ ಪಾಲುದಾರರಲ್ಲದೇ ಬಿಜೆಪಿ ನಾಯಕರು ಇತಿಹಾಸವನ್ನು ಕೇಸರಿಕರಣ ಮಾಡುತ್ತಿದ್ದಾರೆಂದು ಪಾಟೀಲ್ ಕಿಡಿಕಾರಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಜನರಿಗೆ ಇತಿಹಾಸ ತಿಳಿಸುತ್ತಿಲ್ಲ ಸ್ವಾತಂತ್ರಕ್ಕಾಗಿ ಅವರು ಕಷ್ಟಪಟ್ಟು ಹೋರಾಟಗಳನ್ನು ನಾಶಪಡಿಸಿ ಯುವ ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ .ಎಂದು ಬಸವದಳ ಸಮಾಜದ ರಾಜ್ಯ ಕಾರ್ಯದರ್ಶಿ ಕಲ್ಯಾಣಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಪಠ್ಯವನ್ನು ಕೈಬಿಟ್ಟಿರುವುದು ದುರ್ದೈವ ಕೋವಿಡ್ 19 ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ದುರ್ಲಾಭ ಯೋಜನೆ ಮಾಡುತ್ತಿರುವುದು ನಿರ್ಧಾರ ಸರಿಯಲ್ಲ ಎಂದು ಎಸ್ಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ್ ನೀಲೂರ್ ಹೇಳಿದರು. ಸರಕಾರ ಕೋವಿಡ್ 19 ಕಡೆ ಸಂಕಷ್ಟದಲ್ಲಿರುವ ಜನರ ಪರಿಹರಿಸುವಲ್ಲಿ ಹೆಚ್ಚಿನ ಗಮನ ಕೊಡಲಿ ಎಂದು ಹಿಂದುಳಿದ ವರ್ಗದ ಸದಸ್ಯ ಧರ್ಮರಾಜ್ ಹೇಳಿದರು.
ಒಂದರಿಂದ 10ನೇ ತರಗತಿಯಲ್ಲಿ ಪಠ್ಯಕ್ರಮದಲ್ಲಿ ಶೇಕಡ 30ರಷ್ಟು ಕಡಿತಗೊಳಿಸುವ ಪಠ್ಯವನ್ನು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರಾಗಿ ಸುವ ನಿಟ್ಟಿನಲ್ಲಿ ಶಿಕ್ಷಣವನ್ನು ಮರು ವ್ಯಾಖ್ಯಾನಿಸುವ ಮರು ರೂಪಿಸುವ ಬಗ್ಗೆ ಮೌಲಿಕ ಚರ್ಚೆಗಳು ನಡೆಯುತ್ತಿರುವಾಗಲೇ ಪಠ್ಯಪುಸ್ತಕದಲ್ಲಿ ಕಡಿತಗೊಳಿಸಿ ರುವ ಪಾಠಗಳ ಪಟ್ಟಿ ನೋಡಿದರೆ ಆತಂಕ ವೆನಿಸುತ್ತದೆ. ಎಂದು ಪ್ರಿಯದರ್ಶಿನಿ ಜಿಲ್ಲಾಧ್ಯಕ್ಷೆ ಗೀತಾ ಮುದುಗಲ್ ಹೇಳಿದರು.
ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ ಹೋರಾಟದ ನೇತೃತ್ವ ವಹಿಸಿದವರು . ಈರಣ್ಣ ಗೌಡ ಮಲ್ಲಾಬಾದಿ, ಲಿಂಗಾಯಿತ ಬಸವದಳದ ರಾಷ್ಟ್ರೀಯ ಕಾರ್ಯದರ್ಶಿ ಕಲ್ಯಾಣ್ ಕುಮಾರ್, ಮಹಿಮೂದ ಪಟೇಲ್ ಸಾಸರ್ಗಾ0ವ್, ಸಲಿಮ ಅಹಮದ್ ಚಿತ್ತಾಪುರ್, ಸೈಯದ್ ಏಜಾಜ್ ಅಲಿ ಇನಮ್ದಾರ್, ಮಾಜಿ ಎಪಿಎಂಸಿ ಸದಸ್ಯ,ರು HKSJS ಅಧ್ಯಕ್ಷರಾದ ಸಜಿದ್ ಅಲಿ ರಂಜೋಳವಿ ಡಾ. ರಫೀಕ್ ಕಮಲಾಪುರ, ಹೈದರಲಿ ಇನಮ್ದಾರ್, ಮಕ್ಬುಲ್ ಅಹ್ಮದ್ ಸಗರಿ, ಖಾಲಿಕ್ ಅಹಮದ್, ಅಹ್ಮದಿ ಬೇಗಂ, ಸೈರಾ ಬಾನು ಅಬ್ದುಲ್ ವಾಹಿದ್, ರಾಬಿಯಾ ಶಿಕಾರಿ, ರಾಫಿಯ ಶೇರಿನ್, ರಾಹುಲ್ ಮುಂತಾದವರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…