ಬಿಸಿ ಬಿಸಿ ಸುದ್ದಿ

ನಡೆ-ನುಡಿಗಳು ಶರಣರ ಸಿದ್ಧಾಂತಗಳು

ಕಲಬುರಗಿ: ಚಿತ್ರಕಲೆಯಲ್ಲಿಕಾಯಕದ ಶರಣರನ್ನುಅವರ ವ್ಯಕ್ತಿತ್ವ, ಪ್ರತಿರೂಪ ಬಿತ್ತರಿಸದಿದ್ಧಲ್ಲಿಅವರ ಭೌತಿಕ ಪರಿಕಲ್ಪನೆ ನಮ್ಮಕಣ್ಣೆದುರಿಗೆ ಉಳಿಯುತ್ತಿರಲಿಲ್ಲ. ಬಸವಣ್ಣ ಮತ್ತುಅವರ ಸಮಕಾಲೀನ ಕಾಯಕ ಶರಣರು ವಚನಗಳ ಮೂಲಕ ಸಾರಸ್ವತ ಲೋಕಕ್ಕೆ ಪರಿಚಯವಾಗುವುದರಜೊತೆಅವರ ಭೌತಿಕ ವ್ಯಕ್ತಿತ್ವದ ಪರಿಚಯವನ್ನು ಕಲಾವಿದರು ತಮ್ಮ ಚಿತ್ರಕಲೆಯ ಮೂಲಕ ಕಟ್ಟಿಕೊಟ್ಟರು.

ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ಚೈತನ್ಯಮಯಿ ಆರ್ಟ್‌ಗ್ಯಾಲರಿ ಮತ್ತು ಚೈತನ್ಯಮಯಿ ಟ್ರಸ್ಟ್‌ನವರು ಶರಣರ ಸ್ಮರಣಾರ್ಥ ಹಮ್ಮಿಕೊಂಡಅರಿವಿನ ಮನೆ 596ನೆ ಯದತ್ತಿ ಕಾರ್ಯಕ್ರಮದಲ್ಲಿ ’ಚಿತ್ರಕಲೆಯಲ್ಲಿ ಕಾಯಕದ ಶರಣರು’ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದ ’ಶರಣಮಾರ್ಗ’ದ ಸಂಪಾದಕರಾದ ಶ್ರೀ ಶಿವರಂಜನ್ ಸತ್ಯಂಪೇಟೆಯವರು ಕರ್ನಾಟಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ಸುವರ್ಣಯುಗ.  ಕಾರಣ ಬಸವಣ್ಣಅಲ್ಲಮಪ್ರಭು, ಅಕ್ಕಮಹಾದೇವಿಯಂತಹವರು ಮಾತ್ರ ವಚನಗಳನ್ನು ರಚಿಸಿದ್ದಲ್ಲದೆ ಕಸಗುಡಿಸುವಂತ ಸತ್ಯಕ್ಕನಂತಹವರು ವಚನಗಳನ್ನು ರಚಿಸಿದ್ದು ಗಮನಿಸಬೇಕಾದ ಸಂಗತಿ. ಅನಕ್ಷರತೆಯೇದಟ್ಟವಾಗಿದ್ದ ಆಗಿನ ಕಾಲಕ್ಕೆ ಇದೊಂದು ಅಸಾಧಾರಣ ಪ್ರಕ್ರಿಯೆಯಾಗಿತ್ತು.

ವಚನಗಳನ್ನು ರಚಿಸುವುದರ ಮೂಲಕ ಶರಣರು ಬದುಕಿನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ನಡೆ-ನುಡಿಗಳನ್ನು ತಮ್ಮ ಸಿದ್ಧಾಂತವಾಗಿಸಿಕೊಂಡು ಏನನ್ನು ನಡೆದರೋಅದನ್ನೇ ನುಡಿದರು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಬರಿಯ ಮಾತುಗಳಿಲ್ಲ. ಅಲ್ಲಿಆಚಾರವಿದೆ, ವಿಚಾರವಿದೆ, ವಿಜ್ಞಾನವಿದೆ ನೀತಿಯಿದೆ, ಜೀವನದರ್ಶನವಿದೆ. ಭಾವಗಳ ಸಮ್ಮಿಲನವಿದೆ.  ಅಷ್ಟೇ ಅಲ್ಲದೆ ೨೧ನೆಯ ಶತಮಾನದಕನ್ನಡಿಗರ ಮಹುಮುಖ ಏಳ್ಗೆಗೆ ಕಾರಣವಾಗಬಹುದಾದ ಅನೇಕ ಮೌಲ್ಯಯುತ ಚಿಂತನೆಗಳಿವೆ. ಇಪ್ಪತ್ತೊಂದನೆಯ ಶತಮಾನದ ಅನೇಕ ವಿದ್ಯಾಮಾನಗಳಿಗೆ ೧೨ನೆಯ ಶತಮಾನದಲ್ಲಯೇ ಅವುಗಳ ಪರಿಹಾರಕುರಿತು ಶರಣರು ಚಿಂತಿಸಿದ್ದರು.  ಸದ್ಯದ ಸಂದರ್ಭದಲ್ಲಿ ವಚನ ಸಾಹಿತ್ಯಜನ ಮನವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಇದೊಂದು ಬಹು ಪ್ರಮುಖವಾದ ಬೆಳವಣಿಗೆ ಎನ್ನಬಹುದು ಎಂದರು.

ಅನೇಕ ಆಧುನಿಕಚಿತ್ರಕಲಾವಿದರು ವಚನಗಳನ್ನು ಆಧರಿಸಿ ಶರಣರ ಬದುಕನ್ನು ದರ್ಶನೀಕರಿಸಿರುವುದು ನಿಜಕ್ಕೂ ಮೆಚ್ಚುವಂತಹಕಾರ್ಯವೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ನಿಷ್ಠಿಯವರು ಶರಣರ ವ್ಯಕ್ತಿತ್ವಅಭೂತಪೂರ್ವವಾದುದುಒಬ್ಬರಿಗಿಂತ ಮತ್ತೊಬ್ಬರು ಮಿಗಿಲು ಎನ್ನುವಂತೆಅವರುತಮ್ಮ ಸಾಧನೆಗಳ ಮೂಲಕ ಬೆಳೆದು ನಿಂತಿದ್ದರು. ಇದರಿಂದಾಗಿಯೇ ಇಂದಿಗೂ ಅವರು ನಮಗೆ ಆದರ್ಶಪ್ರಾಯರುಎಂದರು.

ಇದೇ ಸಂದರ್ಭದಲ್ಲಿಚೈತನ್ಯಮಯಿಆರ್ಟ್‌ಗ್ಯಾಲರಿ ವತಿಯಿಂದ ಚೈತನ್ಯಶ್ರೀ ಕಲಾಪ್ರಶಸ್ತಿ-೨೦೧೯ನ್ನು ಲಿಂ.  ಬಸವರಾಜ ಮುಗಳಿ ಮುಕ್ಕಾಂ ಹುಡಗಿಇವರಿಗೆ  ಪ್ರದಾನ ಮಾಡಲಾಯಿತು.  ಅವರ ಪತ್ನಿ ಶ್ರೀಮತಿ ಸಾವಿತ್ರಿಬಾಯಿ ಮುಗಳಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ. ಬಿ. ಡಿ.  ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ,ದತ್ತಿ ದಾಸೋಹಿಗಳಾದ ಡಾ. ಎ. ಎಸ್.  ಪಾಟೀಲ, ಶ್ರೀಮತಿ ಕಾಂತಾಬಾಯಿ ಪಾಟೀಲ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಚ್. ಕೆ. ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 hour ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 hour ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 hour ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

18 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago