ಕಲಬುರಗಿ: ೧೧ನೇ ಶತಮಾನದಿಂದ ಹರಿದು ಹಂಚಿ ಹೋದ ನೇಕಾರರ ಸಮಾಜವನ್ನು ನ್ಯೆಯಿದು ಒಗ್ಗೂಡಿಸಿದ ಕೀರ್ತಿ ದೇವರ ದಾಸಿಮಾರ್ಯ ರವರಿಗೆ ಸಲ್ಲುತ್ತದೆ ಶತ ಶತಮಾನದಿಂದಲು ಸಮಾಜದ ಮಾನ ಕಾಪಾಡಿದ ಶ್ರೇಯಸ್ಸು ನೇಕಾರರ ಸಮಾಜಕ್ಕೆ ಸಲ್ಲುತ್ತದೆ ಎಂದು ಅರಣ್ಯಾಧಿಕಾರಿಗಳಾದ ಡಾ. ರಮೇಶ ಮಾಳಾ ಹೇಳಿದರು.
ನಗರದ ಮಕ್ತಂಪೂರ ರಾಷ್ಟ್ರೀಯ ಕೈಮಗ್ಗ ನೇಕಾರರ ಕಛೇರಿಯಲ್ಲಿ 6ನೇ ರಾಷ್ಟ್ರೀಯ ಕೈಮಗ್ಗ ನೇಕಾರರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರೈತ ಮತ್ತು ನೇಕಾರ ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಹೇಳುತ್ತಿರುವ ಅನೇಕ ಸರ್ಕಾರಗಳು ಇಲ್ಲಿಯವರೆಗೆ ರೈತರು ಮತ್ತು ನೇಕಾರರಿಗೆ ಸಮಾನ ಅವಕಾಶ ನೀಡದೆ ಇರುವುದು ವಿಷಾದನಿಯ ಎನ್ನುತ್ತ ಒಬ್ಬ ರೈತ ಸತ್ತರೆ ಕನಿಷ್ಠ ೫ ಲಕ್ಷ ರೂಪಾಯಿ ಅನುದಾನ ನೀಡುವ ಸರ್ಕಾರ ಇವತ್ತು ಮಹಾಮಾರಿ ಕೋರೊನಾ ವೈರಸ್‌ನಿಂದ ಇಲ್ಲಿಯವರೆಗೆ ಸುಮಾರು ೧೦ ಜನ ನೇಕಾರರು ಸಾವಿಗಿಡಾಗಿದ್ದಾರೆ ಸರ್ಕಾರ ಆದಷ್ಟು ಬೇಗನೆ ಮುಂದಿನ ದಿನಗಳಲ್ಲಾದರೂ ಮೃತ ನೇಕಾರರ ಕುಟುಂಬಗಳಿಗೆ ೧೧ನೇ ಶತಮಾನದಿಂದ ಸಮಾಜದ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವಂತ ದೇವರ ದಾಸಿಮಾರ್ಯ ನವರು ಸಾಹಿತ್ಯ ಸಮಾಜಕ್ಕೆ ನೀಡಿರುವ ಕೊಡುಗೆ ನೆನಪಿಸುತ್ತ ಕನಿಷ್ಠ ೧೧ ಲಕ್ಷ ರೂ. ಆದರು ನೇಕಾರರ ಮೃತ ಕುಟುಂಬಕ್ಕೆ ನೀಡಬೇಕೆಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷರು ಹಾಗೂ ನ್ಯಾಯವಾದಿಗಳು ಶಿವರಾಜ ಅಂಡಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸರಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಚಂದ್ರಶೇಖರ ಸುಲ್ತಾನಪೂರ, ಉಪನ್ಯಾಸಕರಾದ ಹಣಮಂತರಾವ ಬಿ ಪಾಟೀಲ ಮಾತನಾಡಿದರು. ಬ್ರಹ್ಮನಠ ಮಕ್ತಂಪೂರ ಮ.ನಿ.ಪ್ರ ಶ್ರೀ ಶಿವಾನಂದ ಮಹಾಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಸಮಾಜದ ಅಧ್ಯಕ್ಷರಾದ ಅಣ್ಣಾರಾಯ ಕುಣಿಕೇರಿ ಪ್ರಸ್ತಾವಿಕವಾಗಿ ಮಾತನಾಡಿದರು ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ ಸ್ವಾಗತಿಸಿದರು, ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಜೆ. ವಿನೋದಕುಮಾರ ರವರು ನಿರೂಪಿಸಿದರು. ಕೊನೆಯಲ್ಲಿ ರೇವಣಸಿದ್ದಪ್ಪ ಗಡ್ಡದ ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ಭೀಮಾಶಂಕರ ರಾಜಗುಂಡೆ ಛಾಯಾಗ್ರಾಹಕ ರಾಜು ಕೋಷ್ಠಿ, ಶಂಕರ ನನ್ನಾ, ಚಂದ್ರಕಾಂತ ಇಂಗಳಿಗಿ, ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…