ಬಿಸಿ ಬಿಸಿ ಸುದ್ದಿ

ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಪ್ರಕರಣ ವಾಪಸ್ ಪಡೆಯಲು ತಾಲೂಕು ಕಸಾಪ ಆಗ್ರಹ

ಶಹಾಪುರ: ಬಸವ ತತ್ವವನ್ನು ಜನ ಮಾನಸದಲ್ಲಿ ಬಿತ್ತಲು ಸದಾ ಕಾಲ ಸನ್ನದ್ಧವಾಗಿರುವ ಶರಣ ಸಾಹಿತಿ, ಪತ್ರಕರ್ತ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲಿನ ಕಾನೂನು ದಬ್ಬಾಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಶಹಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದವು.

ವಿಶ್ವಾರಾಧ್ಯ ಸತ್ಯಂಪೇಟೆ ಇಡೀ ನಾಡೆ ಬಲ್ಲಂತೆ ಒಬ್ಬ ದಿಟ್ಟ ವೈಚಾರಿಕ ಪತ್ರಕರ್ತ ಶರಣ ಸಾಹಿತಿ. ಇದ್ದದ್ದನ್ನು ಇದ್ದಂತೆ ಹೇಳಿ ಯುವಕರಲ್ಲಿ ವಿಜ್ಞಾನದ ದೀವಿಗೆ ಹಿಡಿದು ನಡೆದಿರುವ ಯುವ ಹೋರಾಟಗಾರ.

ದಾವಣಗೆರೆ ಜಿಲ್ಲೆಯ ರಾಂಪುರ ಮಠದ ಸ್ವಾಮಿ ಶ್ರೀ ವಿಶ್ವೇಶ್ವರ ಸ್ವಾಮಿ ಎಂಬುವವರ ಕುರಿತು ಆಡಿದ ಮಾತು, ಬರಹ ಚಿಂತನಾರ್ಹ. ವೈಜ್ಞಾನಿಕ ವೈಚಾರಿಕ ನಿಲುವಿನಿಂದ ನೋಡದೆ ದ್ವೇಷಪೂರಿತ ಭಾವನೆಯಿಂದ ನೋಡುವುದು ಸರಿಯಲ್ಲ.

ಒಬ್ಬ‌ಮಠಾಧೀಶ ಲಾಂಛನ ಧರಿಸಿ ಅದಕ್ಕೆ ತಕ್ಕುದಾದ ನಡೆಗಳು ಇರಬೇಕು. ಇದನ್ನೆಲ್ಲ ಮರೆತು ಬರೀ ಗಿಮಿಕ್ ಗಳಲ್ಲಿಯೇ ಭಕ್ತರನ್ನು  ಕತ್ತಲಲ್ಲಿ ಇಟ್ಟಿರುವುದು ಖಂಡನಾರ್ಹ.‌ ಇಷ್ಟಲಿಂಗ ಪೂಜೆಯ ವಿಧಾನ ಮರೆತು ನಾಟಕೀಯ ಅಂಶಗಳಿಂದ ಪೂಜೆ ನಿಜಕ್ಕೂ ಬಸವ ಭಕ್ತರಿಗೆ ನೋವುಂಟು ಮಾಡುವಂಥದ್ದು.

ಇಷ್ಟಕ್ಕೂ ಸತ್ಯಂಪೇಟೆ ವಿಷಾದ ವ್ಯಕ್ತ ಪಡಿಸಿರುವಾಗಲೂ ಕಾಲು ಕೆದರಿ ಅವರ ಮೇಲೆ ಕೇಸ್ ದಾಖಲಿಸಿ, ಮಾನಸಿಕವಾಗಿ ಅವರನ್ನು ಕುಗ್ಗಿಸಲು ಹೊರಟಿರುವುದುನ್ನು ಖಂಡನೀಯವಾಗಿದ್ದು, ವಿಶ್ವಾರಾಧ್ಯ ರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಜಾಪ್ರಭುತ್ವದ ಅಣಕ. ಇದನ್ನು ಇಲ್ಲಿಗೆ ನಿಲ್ಲಿಸದೆ ಸರಕಾರ ಸತ್ಯಂಪೇಟೆಯವರಿಗೆ ಕಿರುಕುಳ ನೀಡಿದರೆ ನಾಡಿನ ತುಂಬಾ ಇರುವ ಬಸವ ಅಭಿಮಾನಿಗಳು, ಪ್ರಗತಿ ಪರರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿತ್ತದೆ ಎಂದು ಸಂಘಟನೆಯ ಪ್ರಮುಖರು ಸದಸ್ಯರು ಮನವಿಯಲ್ಲಿ ವ್ಯಕ್ತ ಪಡಿಸಿದರು.

ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ ಅನೇಗುಂದಿ, ಕಾರ್ಯದರ್ಶಿ ಬಸವರಾಜ ಸಿಣ್ಣೂರ, ಪಂಚಾಕ್ಷರ್ಯ್ಯ ಹಿರೇಮಠ, ಬಸವರಾಜ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago