ಕಲಬುರಗಿ: ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ತಜ್ಞ ವೈದ್ಯರಿಂದ 2020ರ ಆಗಸ್ಟ್ 11 ರಿಂದ 21ರ ವರೆಗೆ ಕಲಬುರಗಿ ನಗರದ ವಿವಿಧ ನಗರ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೋವಿಡ್-19ನಿಂದ ಮರಣ ಪ್ರಮಾಣ ತಗ್ಗಿಸಲು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡವಿರುವ ವ್ಯಕ್ತಿಗಳನ್ನು ಈಗಾಗಲೆ ಮನೆ-ಮನೆ ಸರ್ವೆ ಮೂಲಕ ಗುರುತಿಸಲಾಗಿದೆ. ನಗರ ಸಾರ್ವಜನಿಕರು ಈ ಶಿಬಿರಕ್ಕೆ ಹಾಜರಾಗಿ ತಜ್ಞ ವೈದ್ಯರಿಂದ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆರೋಗ್ಯ ತಪಾಸಣೆ ನಡೆಯುವ ದಿನಾಂಕ ಮತ್ತು ಸ್ಥಳದ ವಿವರ ಇಂತಿದೆ.
ಆಗಸ್ಟ್ 11 ರಂದು ಮುಕ್ತಂಪೂರ ನಗರ ಆರೋಗ್ಯ ಕೇಂದ್ರದಿಂದ ಮೊಮಿನಪುರ ಅಂಗನವಾಡಿ-2 ಜಮಾತ ಖಾನಾದಲ್ಲಿ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಸಾಧಿಕ್ ಕಾಲೋನಿ ಅಂಗನವಾಡಿ ಕೇಂದ್ರ-1ರಲ್ಲಿ ಹಾಗೂ ಐಸಿಡಿಎಸ್ ಆರೋಗ್ಯ ಕೇಂದ್ರದಿಂದ ಸಮುದಾಯ ಭವನ ರಾಮನಗರದಲ್ಲಿ ಶಿಬಿರ ಆಯೋಜಿಸಲಾಗಿದೆ. ಆಗಸ್ಟ್ 12 ರಂದು ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ಇಸ್ಲಾಮಾಬಾದ್ ಕಾಲೋನಿ ಅಂಗನವಾಡಿ-2ರಲ್ಲಿ, ಯು.ಎಫ್.ಡಬ್ಲ್ಯೂ.ಸಿ. ನಗರ ಆರೋಗ್ಯ ಕೇಂದ್ರದಿಂದ ಈಶ್ವರ ಮಂದಿರ ಜಮಶೆಟ್ಟಿ ನಗರದಲ್ಲಿ ಹಾಗೂ ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಚೌಡೇಶ್ವರಿ ಕಾಲೋನಿ ಅಂಗನವಾಡಿ ಕೇಂದ್ರ-1ರಲ್ಲಿ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 13 ರಂದು ಎನ್.ಆರ್. ನಗರ ಆರೋಗ್ಯ ಕೇಂದ್ರದಿಂದ ರಾಮಜೀ ನಗರ ಅಂಗನವಾಡಿ ಕೇಂದ್ರ-1ರಲ್ಲಿ, ಶಹಾಬಜಾರ ನಗರ ಆರೋಗ್ಯ ಕೇಂದ್ರದಿಂದ ಕಾವೇರಿ ನಗರ ಅಂಗನವಾಡಿ ಕೇಂದ್ರ-1 ಹುನುಮಾನ ಮಂದಿರ ಹತ್ತಿರದಲ್ಲಿ ಹಾಗೂ ಶಿವಾಜಿನಗರ ನಗರ ಆರೋಗ್ಯ ಕೇಂದ್ರದಿಂದ ಅಂಭಾಭವಾನಿ ಮಂದಿರ ಶಿವಾಜಿನಗರದಲ್ಲಿ ಶಿಬಿರ ಆಯೋಜಿಸಲಾಗಿದೆ. ಆಗಸ್ಟ್ 14 ರಂದು ಸೆಂಟ್‍ಜಾನ್ ನಗರ ಆರೋಗ್ಯ ಕೇಂದ್ರದಿಂದ ಈಶ್ವರ ಮಂದಿರ ಪ್ರಶಾಂತ ನಗರದಲ್ಲಿ, ಮುಕ್ತಂಪುರ ನಗರ ಆರೋಗ್ಯ ಕೇಂದ್ರದಿಂದ ಸಂತ್ರಾಸವಾಡಿ ಅಂಗನವಾಡಿ ಕೇಂದ್ರ-1ರಲ್ಲಿ ಹಾಗೂ ಯು.ಎಫ್.ಡಬ್ಲ್ಯೂ.ಸಿ. ನಗರ ಆರೋಗ್ಯ ಕೇಂದ್ರದಿಂದ ಹುದಾ ಮಸೀದಿ ರಹೆಮತನಗರದಲ್ಲಿ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 17 ರಂದು ಅಶೋಕನಗರ ನಗರ ಆರೋಗ್ಯ ಕೇಂದ್ರದಿಂದ ವಿದ್ಯಾನಗರ ಹಳೆಯ ಆಲ್‍ಮೀನ್ ಶಾಲೆಯಲ್ಲಿ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಸಿಐಬಿ ಕಾಲೋನಿ ಬುದ್ಧ ಮಂದಿರದಲ್ಲಿ ಹಾಗೂ ಐಸಿಡಿಎಸ್ ನಗರ ಕೇಂದ್ರದಿಂದ ಹನುಮಾನ ಮಂದಿರ ಎನ್.ಜಿ.ಓ. ಕಾಲೋನಿಯಲ್ಲಿ ಶಿಬಿರ ಆಯೋಜಿಸಲಾಗಿದೆ. ಆಗಸ್ಟ್ 18 ರಂದು ಖಾನಾಪುರ ನಗರ ಆರೋಗ್ಯ ಕೇಂದ್ರದಿಂದ ಹಜ್ ಕಮೀಟಿ ಕಾರ್ಪೋರೇಶನ್ ಅಫೀಸ್ ಹತ್ತಿರ, ಮುಕ್ತಂಪುರ ನಗರ ಆರೋಗ್ಯ ಕೇಂದ್ರದಿಂದ ಭೋವಿಗಲ್ಲಿ ಅಂಗನವಾಡಿ ಕೇಂದ್ರ-1ರಲ್ಲಿ ಹಾಗೂ ಮಾಣಿಕೇಶ್ವರಿ ನಗರ ಆರೋಗ್ಯ ಕೇಂದ್ರದಿಂದ ಭವಾನಿ ಮಂದಿರ ಮಾಣಿಕೇಶ್ವರಿ ಕಾಲೋನಿಯಲ್ಲಿ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 19 ರಂದು ಎನ್.ಆರ್. ನಗರದ ನಗರ ಆರೋಗ್ಯ ಕೇಂದ್ರದಿಂದ ಖಾನಾ ಕಾಲೋನಿ ಅಂಗನವಾಡಿ ಕೇಂದ್ರ-1ರಲ್ಲಿ, ಶಹಾಬಜಾರದ ನಗರ ಆರೋಗ್ಯ ಕೇಂದ್ರದಿಂದ ಶಹಾಬಜಾರ ತಾಂಡಾದ ಅಂಗನವಾಡಿ ಕೇಂದ್ರ-1 ಹಾಗೂ ಶಿವಾಜಿನಗರದ ನಗರ ಆರೋಗ್ಯ ಕೇಂದ್ರದಿಂದ ನಂದೇಶ್ವರ ಮಂದಿರ ನಂದಿ ಕಾಲೋನಿಯಲ್ಲಿ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 20 ರಂದು ಮುಕ್ತಂಪುರ ನಗರ ಆರೋಗ್ಯ ಕೇಂದ್ರದಿಂದ ಭಾಗವಾನ ಗಲ್ಲಿ ಅಂಗನವಾಡಿ ಕೇಂದ್ರದಲ್ಲಿ, ಯು.ಎಫ್.ಡಬ್ಲ್ಯೂ.ಸಿ. ನಗರ ಆರೋಗ್ಯ ಕೇಂದ್ರದಿಂದ ಯು.ಎಫ್.ಡಬ್ಲ್ಯೂ.ಸಿ. ನಗರದ ಆರೋಗ್ಯ ಕೇಂದ್ರದಲ್ಲಿ ಹಾಗೂ ಐ.ಸಿ.ಡಿ.ಎಸ್. ನಗರ ಆರೋಗ್ಯ ಕೇಂದ್ರದಿಂದ ಸಂತೋಷ ಕಾಲೋನಿಯ ಹನುಮಾನ ಮಂದಿರದಲ್ಲಿ ಶಿಬಿರ ಆಯೋಜಿಸಲಾಗಿದೆ.
ಆಗಸ್ಟ್ 21 ರಂದು ಮುಕ್ತಂಪುರ ನಗರ ಆರೋಗ್ಯ ಕೇಂದ್ರದಿಂದ ನಂದೂರ ಪಟೇಲ್ ಗಲ್ಲಿ ಅಂಗನವಾಡಿ ಕೇಂದ್ರದಲ್ಲಿ, ಹೀರಾಪುರ ನಗರ ಆರೋಗ್ಯ ಕೇಂದ್ರದಿಂದ ಗಣೇಶ ಗಾರ್ಡನ್ ಟೆಂಪಲ್ ಘಾಟಗೆ ಲೇಔಟ್‍ದಲ್ಲಿ ಹಾಗೂ ಶಹಾಬಜಾರ ನಗರ ಆರೋಗ್ಯ ಕೇಂದ್ರದಿಂದ ಶಿವಶಕ್ತಿನಗರದ ಅಂಗನವಾಡಿ ಕೇಂದ್ರ-1ರಲ್ಲಿ ಶಿಬಿರ ಆಯೋಜಿಸಲಾಗಿದೆ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…