ಸುರಪುರ: ದೇಶದ ಬೆನ್ನೆಲುಬಾಗಿರುವ ರೈತ ಇಂದು ತುಂಬಾ ಸಂಕಷ್ಟದಲ್ಲಿದ್ದು ತನ್ನೆಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ಮಾಡಿಬೇಕಿರುವುದು ಬೇಸರದ ಸಂಗತಿಯಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಲಕ್ಷ್ಮೀಪುರ ಶ್ರೀಗಿರಿ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ರೈತರು ಆತ್ಮಹತ್ಯೆಯ ಹಾದಿ ಹಿಡಿದಿರುವುದು ದುಃಖದ ಸಂಗತಿಯಾಗಿದೆ.ಸರಕಾರಗಳು ರೈತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುವಂತೆ ಒತ್ತಾಯಿಸಲು ನಾವು ಧ್ವನಿಗೂಡಿಸುವುದಾಗಿ ತಿಳಿಸಿದರು.ರಾಜ್ಯ ರೈತ ಸಂಘದ ಮೂಲಕ ಎಲ್ಲಾ ಬೇಡಿಕೆಗಳು ಈಡೇರಲಿ.ಅದರಂತೆ ಇಂದು ಸಂಘಟನೆಗೆ ಶೀವರಾಜ ಕಲಕೇರಿ ಸೇರ್ಪಡೆಯಾಗುವ ಮೂಲಕ ರೈತರ ಪರವಾಗಿ ಹೋರಾಟಕ್ಕೆ ಹೆಗಲು ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನಂತರ ಕನ್ನಡಪರ ಹೋರಾಟಗಾರ ಶಿವರಾಜ ಕಲಕೇರಿಯನ್ನು ರೈತ ಸಂಘಕ್ಕೆ ಸೇರ್ಪಡೆ ಸಮಾರಂಭ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಘದ ರಾಜ್ಯ ಮಹಿಳಾ ವಿಭಾಗದ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ,ಜಿಲ್ಲಾಧ್ಯಕ್ಷ ಗೌರವಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಅಧ್ಯಕ್ಷ ಮಹೇಶ ಸುಬೇದಾರ ಪ್ರಧಾನ ಕಾರ್ಯದರ್ಶಿ ಶಿವು ಸಾಹುಕಾರ ಶಿವು ಜಂಗಳಿ ಆಕಾಶ ಕಟ್ಟಿಮನಿ ಆನಂದ ಮಡ್ಡಿ ಕಲ್ಯಾಣರಾವ್ ಶಶಿಧರ ಹಿರೇಮಠ ಗುರು ಬಸನಗೌಡ ಬಿರನೂರು ಚೆನ್ನಾರಡ್ಡಿ ಬಿರನೂರು ಬಲಭೀಮ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…