ಸುರಪುರ: ನಗರದ ತಹಸೀಲ್ದಾರ್ ಕಚೇರಿ ಮುಂದೆ ಸ್ವದೇಶೀ ಜಾಗರಣಾ ಮಂಚ್ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿ ವಿದೇಶಿ ವಸ್ತು ಮತ್ತು ಕಂಪನಿಗಳ ನಿಷೇಧಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ವದೇಶಿ ಜಾಗರಣ ಮಂಚ್ ಜಿಲ್ಲಾ ಸಂಯೋಜಕ ಶರಣಬಸವ ಚಟ್ಟಿ ಮಾತನಾಡಿ, ವಿದೇಶಿ ವಸ್ತು ಹಾಗೂ ಕಂಪನಿಗಳಿಗೆ ಕಡಿವಾಣ ಹಾಕಬೇಕ ದೇಶದಲ್ಲಿ ಸುಮಾರು ೪ ಸಾವಿರದಷ್ಟು ವಿದೇಶಿ ಕಂಪನಿಗಳು ಬೀಡು ಬಿಟ್ಟಿದ್ದು ಇದರಿಂದ ದೇಶದ ಕಂಪನಿಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ನಮ್ಮ ದೇಶದ ೭ ಕೋಟಿ ಕಂಪನಿಗಳಿದ್ದರು ವಿದೇಶಿ ಕಂಪನಿಗಳು ದೇಶದ ಹಣವನ್ನು ಕೊಳ್ಳೆ ಹೊಡೆಯುತ್ತಿವೆ.ಆದ್ದರಿಂದ ವಿದೇಶಿ ಕಂಪನಿಗಳಿಗೆ ಹೆಚ್ಚಿನ ತೆರಿಗೆ ಜೊತೆಗೆ ವಿದೇಶಿ ವಸ್ತುಗಳ ಆಮದಿಗೆ ಹೆಚ್ಚಿನ ತೆರಿಗೆ ವಿಧಿಸಬೇಕೆಂದು ಹಾಗೂ ವಿದೇಶಿ ಕಂಪನಿಗಳಲ್ಲಿನ ಉದ್ಯೋಗ ನೇಮಕಾತಿಯಲ್ಲಿ ಸ್ಥಳಿಯರಿಗೆ ಆದ್ಯತೆ ನೀಡುವಂತೆ ನಿಯಮ ರೂಪಿಸಬೇಕೆಂದು ಒತ್ತಾಯಿಸಿದರು.
ಇಂದಿನ ಯುಗದಲ್ಲಿ ಜಾಗತಿಕವಾಗಿ ನಮ್ಮ ದೇಶವನ್ನು ಬೇಳಸಲುಹೋಗಿ ಮತ್ತೆ ನಾವು ಇನ್ನೊಂದು ಕಂಪನಿಗೆ ಗುಲಾಮರಾಗುವ ಪರಿಸ್ಥಿತಿ ಎದುರಾಗುತ್ತಿದೆ ಇಂದು ದೇಶದಲ್ಲಿರುವ ಭಾರತೀಯರ ಒಡೆತನದ ಕಂಪನಿಗಳಿಗಿಂತ ಹೊರದೇಶದ ಕಂಪನಿಗಳು ಹೆಚ್ಚಾಗುತ್ತಿವೆ ಇದು ನಮ್ಮ ದೇಶದ ಸಂಪನ್ಮೂಲ ಮತ್ತು ನಮ್ಮ ದೇಶಹಣವನ್ನು ವಿದೇಶಗಳಿಗೆ ನೀಡಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಹೀಗಾಗಿ ವಿದೇಶಿಕಂಪನಿಗಳಿಗೆ ಕಡಿವಾಣಹಾಕುವುದು ಅವಶ್ಯಕವಾಗಿದೆ ಎಂದರು.
ನಂತರ ಪ್ರಧಾನ ಮಂತ್ರಿಯವರಿಗೆ ಬರೆದ ಮನವಿಯನ್ನು ಶಿರಸ್ತೆದಾರ ನಿಸಾರ ಅಹ್ಮದ್ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿವರಾಜ್ ಶೆಟ್ಟಿ, ಆನಂದ ದೇವರ್‌ಶೆಟ್ಟಿ, ಬಸವರಾಜ ಕೊಳೂರ, ಅವಿನಾಶ್ ಪತ್ತಾರ, ಭರತ್ ಚೆಟ್ಟಿ, ಗೋಪಾಲ ಕುಲಕರ್ಣಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…