ಸಂಗಣ್ಣ ಹೊಸಮನಿ ಸಾಹಿತ್ಯದಲ್ಲಿ ದುಡಿವ ಜನರ ಕಂಬನಿ

ವಾಡಿ: ಬಂಡಾಯ ಕವಿ ಸಂಗಣ್ಣ ಹೊಸಮನಿ ಅವರ ಸಾಹಿತ್ಯದ ಪ್ರತಿಯೊಂದು ಸಾಲಿನಲ್ಲಿ ಕೆಂಬಾವುಟದ ಕನವರಿಕೆ ಎದ್ದುಕಾಣುತ್ತದೆ. ದುಡಿಯುವ ಜನಗಳ ಕಷ್ಟದ ಕಂಬನಿಯೇ ಅವರ ಸಾಹಿತ್ಯವಾಗಿತ್ತು ಎಂದು ಸ್ಥಳೀಯ ಬರಹಗಾರ, ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ ಹೇಳಿದರು.

ಸಂಚಲನ ಸಾಹಿತ್ಯ ವೇದಿಕೆ, ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕಗಳು ಜಂಟಿಯಾಗಿ ಪಟ್ಟಣದ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಗಲಿದ ಹಿರಿಯ ಬಂಡಾಯ ಕವಿ ಸಂಗಣ್ಣ ಹೊಸಮನಿ ಅವರ ನುಡಿ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಎಡವಾದಿ ಚಿಂತನೆಗಳ ಹೋರಾಟಗಳಿಗೆ ಧನಸಹಾಯ ನೀಡುತ್ತಿದ್ದರು. ಹೋರಾಟ ನಿಲ್ಲದಿರಲಿ ಎಂದು ಎಚ್ಚರಿಸುತ್ತಿದ್ದರು. ‘ಚೀಲ ಹೊತ್ತ ಕತ್ತೆ’ ಮತ್ತು ‘ಅನಕ್ಷರತೆ ಅಳಿಯಲಿ’ ಎಂಬ ಸಾಮಾಜಿಕ ನಾಟಕ ಕೃತಿಗಳನ್ನು ಪ್ರಕಟಿಸಿ ರಂಗದ ಮೇಲೆ ಪ್ರದರ್ಶನಗೊಳ್ಳಲು ಶ್ರಮಿಸಿದ್ದರು. ಕ್ರಾಂತಿಯ ಕಿಡಿ, ಕ್ರಾಂತಿಯ ಕಹಳೆ, ಕವನ ಸಂಕಲನಗಳನ್ನು ನಾಡಿಗೆ ಅರ್ಪಿಸಿದ್ದಾರೆ. ಜೀವನದುದ್ದಕ್ಕೂ ದುಡಿಯುವ ವರ್ಗಕ್ಕಾಗಿ ಮರುಗಿದ ಸಾಹಿತಿ ಸಂಗಣ್ಣ ಹೊಸಮನಿ ಅವರು ಮಾಕ್ರ್ಸ್, ಲೆನಿನ್ ಹಾಗೂ ಕಾಮ್ರೇಡ್ ಶ್ರೀನಿವಾಸ ಗುಡಿ ಅವರನ್ನು ಆದರ್ಶವಾಗಿ ಸ್ವೀಕರಿಸಿದ್ದರು. ಅವರ ಅಗಲಿಕೆಯಿಂದ ಬಂಡಾಯ ಸಾಹಿತ್ಯ ಮತ್ತಷ್ಟು ಬಡವಾಯಿತು ಎಂದು ದೇವಿಂದ್ರ ಕರದಳ್ಳಿ ಭಾವುಕರಾದರು.

ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಮಾತನಾಡಿ, ಪ್ರಗತಿಪರ ಸಾಹಿತ್ಯದ ಕೊಂಡಿಗಳು ಒಂದೊಂದೇ ಕಳಚುತ್ತಿರುವುದು ಪ್ರಜಾತಾಂತ್ರಿಕ ನೆಲೆಗಟ್ಟಿನ ಜನಪರ ಚಳುವಳಿಗಳಿಗೆ ಆಗುವ ನಷ್ಟವೇ ಸರಿ. ಸಮಾಜವಾದದ ಕನಸು ಹೊತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಸಾಹಿತಿ ಸಂಗಣ್ಣ ಹೊಸಮನಿ ಅವರು ಎಸ್‍ಯುಸಿಐ ಹೋರಾಟಗಳ ಬೆಂಬಲಿಗರಾಗಿದ್ದರು.

ದುಡಿಯುವ ಜನತೆ ಸಂಘಟಿತರಾಗಬೇಕು. ಮಾಲೀಕರ ಶೋಷಣೆ ಹಾಗೂ ದೌರ್ಜನ್ಯಗಳ ವಿರುದ್ಧ ಸಿಡಿದೇಳಬೇಕು ಎಂಬುದು ಅವರ ಹಂಬಲವಾಗಿತ್ತು ಎಂದು ಸ್ಮರಿಸಿದರು.
ಸಂಚಲನ ಸಾಹಿತ್ಯ ವೇದಿಗೆ ಅಧ್ಯಕ್ಷ ವಿಕ್ರಮ ನಿಂಬರ್ಗಾ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕøತಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಡಿವಾಳಪ್ಪ ಹೇರೂರ ಮಾತನಾಡಿದರು.

ಕಸಾಪ ಅಧ್ಯಕ್ಷ ಖೇಮಲಿಂಗ ಬೆಳಮಗಿ ಮತ್ತು ಹರಿಶ್ಚಂದ್ರ ಕರಣಿಕ ಅವರು ಕವಿ ಸಂಗಣ್ಣ ಹೊಸಮನಿ ಅವರ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಮಲ್ಲೇಶ ನಾಟೀಕಾರ, ಸಿದ್ದಯ್ಯಶಾಸ್ತ್ರೀ ನಂದೂರಮಠ, ದಯಾನಂದ ಖರ್ಜಗಿ, ವೀರಣ್ಣ ಯಾರಿ, ರವಿ ಕೋಳಕೂರ, ಬಸವರಾಜ ಜೋಗೂರ, ಮಹಾದೇವ ಕೌದಿ, ಶ್ರೀಕಂತ ಬಿರಾಳ, ಮಲಿಕಪಾಶಾ ಮೌಜನ್ ಪಾಲ್ಗೊಂಡಿದ್ದರು. ಶ್ರವಣಕುಮಾರ ಮೌಸಲಗಿ ನಿರೂಪಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

2 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

2 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

4 hours ago