ಬಿಸಿ ಬಿಸಿ ಸುದ್ದಿ

ಕ.ಕ ಭಾಗದ ದಿವ್ಯಾಂಗರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ: ಬಸವರಾಜ ಹೆಳವರ

ಕಲಬುರಗಿ: ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕುಗಳ (ಆರ್.ಪಿ.ಡಬ್ಲ್ಯು.ಡಿ.) ಕಾಯ್ದೆ , 2016 ರ ಸೆಕ್ಷನ್ 30 ಅಂಗವೈಕಲ್ಯ ಇರುವ ವ್ಯಕ್ತಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಖಾತ್ರಿಪಡಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಧಿಸುತ್ತದೆ ಮತ್ತು ಅವರಿಗೆ ಕ್ರೀಡಾ ಚಟುವಟಿಕೆಗಾಗಿ ಮೂಲಸೌಕರ್ಯಗಳನ್ನು ಒದಗಿಸುವ ಪ್ರಸ್ತಾವನೆಯನ್ನೂ ಅದು ಒಳಗೊಂಡಿದೆ.

1984ರಿಂದ ಅಂಗವಿಕಲರ ಪ್ಯಾರಾಲಿಂಪಿಕ ಕ್ರೀಡಾಕೂಟ  ಆರಂಭವಾಗಿದೆ. ವಿಶೇಷಚೇತನರು ಆಗ ಪೆವಿಲಿಯನ್‌ನಲ್ಲಿ ಕುಳಿತು ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದರೆ ವಿನಃ ಮೈದಾನಕ್ಕೆ ಇಳಿಯುವ ಅವಕಾಶ ನಮಗೆ ಇರಲಿಲ್ಲ. ಕಳೆದ 35 ವರ್ಷಗಳಲ್ಲಿ ಅಂಗವಿಕಲರ ಕ್ರೀಡೆ ದೊಡ್ಡ ಪರಂಪರೆಯಾಗಿ ಬೆಳೆದಿದೆ. ಅವರ ಕ್ರೀಡಾ ಚಟುವಟಿಕೆಗಳು ಹೆಚ್ಚಾಗಿದ್ದು, ಸಂಭ್ರಮ ಎದ್ದು ಕಾಣುತ್ತಿದೆ. ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವ ಉಮೇದು ತುಂಬಿ ತುಳುಕುತ್ತಿದೆ.

ಕಲಬುರಗಿ, ಬಿದರ, ಯಾದಗಿರ, ರಾಯಚೂರ ಮತ್ತು ಕೊಪ್ಪಳ ಭಾಗದ ದಿವ್ಯಾಂಗರು ಕ್ರೀಡೆಯ ಕುರಿತು ಆಸಕ್ತಿ ಬೆಳೆಸಿಕೊಳ್ಳುವ ಅಗತ್ಯವಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದ ವಿಶೇಷಚೇತನರಲ್ಲಿ ಕ್ರೀಡೆಯ ಆಸಕ್ತಿ ಮತ್ತು ಮನೋಭಾವ ಕಡಿಮೆಯಾಗಿದೆ. ದೈಹಿಕ ಮತ್ತು ಆತ್ಮ ಬಲ ಬೆಳೆಸಿಕೊಳ್ಳಲು ಮುಂದಾಗುತ್ತಿಲ್ಲ ಮತ್ತು ದಿವ್ಯಾಂಗರಲ್ಲಿರುವ ಸೂಕ್ತ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ, ಅರಳಿಸುವುದು ಬಹಳ ಮುಖ್ಯವಾಗಿದೆ ಎಂದು ಡಿಸೆಬಲ್ಡ ಹೆಲ್ಪಲೈನ ಫೌಂಡೆಶನನ ರಾಜ್ಯ ಸಂಯೋಜಕರಾದಂತ ಬಸವರಾಜ ಹೆಳವರ ಯಾಳಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಗವಿಕಲರ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿಯೇ ಎಂ. ಮಹದೇವ್ ಮತ್ತು ಸಂಗಡಿಗರು 1992ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಅಂಗವಿಕಲರ ಕ್ರೀಡಾ ಒಕ್ಕೂಟವನ್ನು ಹುಟ್ಟು ಹಾಕಿದ್ದಾರೆ. ದಶಕಗಳ ಹಿಂದೆ ಈ ಕ್ರೀಡೆಗೆ ಹಾಗೆ ಬಿದ್ದಿರುವ ಗಟ್ಟಿಯಾದ ಬುನಾದಿಯೇ ಇದೀಗ ಫಲ ನೀಡುತ್ತಿದೆ. ಆದ್ದರಿಂದಲೇ ರಾಜ್ಯ ಅಂಗವಿಕಲರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಸುಗ್ಗಿ ಶುರುವಾಗಿದೆ. ಇತ್ತೀಚೆಗೆ ರಾಜ್ಯದ ಎಲ್ಲಾ ವಿಕಲಚೇತನ ಕ್ರೀಡಾಪಟುಗಳು ಕೂಡಿಕೊಂಡು ಕರ್ನಾಟಕ ರಾಜ್ಯ ವಿಕಲಚೇತನ ಕ್ರೀಡಾಪಟುಗಳ ಒಕ್ಕೂಟ (ರಿ) ಕೂಡ  ಮಾಡಿಕೊಂಡಿದ್ದಾರೆ.

ನಮ್ಮ ಹೆಮ್ಮೆಯ ಅಥ್ಲೀಟ್ ಎಚ್.ಎನ್. ಗಿರೀಶ್ ಅಂಗವಿಕಲರ ಪ್ಯಾರಾ ಒಲಿಂಪಿಕ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದ ಮೇಲಂತೂ ಸಂಭ್ರಮ ಇಮ್ಮಡಿಗೊಂಡಿದೆ. ಅಂತರಾಷ್ಟ್ರೀಯ ಕ್ರೀಡಾಪಟುಗಳಾದಂತ ಮಹೇಶ ಗೌಡ,  ಪೈಡಿ ರಾಮು, ಪ್ರಭುಸ್ವಾಮಿ, ಹುಬ್ಬಳ್ಳಿಯ ಮಹಿಳಾ ಪ್ಯಾರಾ ಶೂಟರ್ ಜ್ಯೋತಿ ಸನ್ನಕ್ಕಿ ಪ್ರಶಸ್ತಿಗೆ ಭಾಜನರಾಗುವ ಮೂಲಕ ಅಂಗವಿಕಲ ಕ್ರೀಡಾಕ್ಷೇತ್ರಕ್ಕೆ ಗೌರವ ತಂದ ನೆನಪು ಇನ್ನೂ ಹಸಿರಾಗಿದೆ.

ಬೆಳಗಾವಿಯ ಅಂತರಾಷ್ಟ್ರೀಯ ವ್ಹೀಲ ಚೆರ ಕ್ರಿಡಾಪಟು ಸುನಿಲ್ ಪಾಟೀಲ , ದೆವೆಂದ್ರ ಬಿ.ಕೆ, ಮಂಜು ಮರಾಠೆ, ಮಹೇಶ ಅಗಳಿ, ಕೇಶವ ಟಿ, ಮಹಾಂತೇಶ ಅವರಂತಹ ಅಂಗವಿಕಲ ಸಾಧಕರು ನಮ್ಮ ಹೆಮ್ಮೆಯ ಪ್ರತೀಕವಾಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಮಾತ್ರವಲ್ಲದೆ ಈಜು, ಟೆನಿಸ್, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್‌ನಲ್ಲೂ ಅಂಗವಿಕಲರ ಸಾಧನೆ ಬೆರಗುಗೊಳಿಸುವಂತಿದೆ.

ರೋಟರಿ ಮತ್ತು ಲಯನ್ಸ್‌ನಂತಹ ಸಂಸ್ಥೆಗಳು ಅಂಗವಿಕಲರ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಾಗ್ಯೂ ಸಂಭ್ರಮದ ಅಲೆ ಜೋರಾಗಿಯೇ ಕಾಣುತ್ತಿರುವುದು ಅಂಗವಿಕಲರ ಕ್ರೀಡಾ ಮನೋಭಾವ ಮತ್ತು ಸ್ಫೂರ್ತಿಗೆ ಹಿಡಿದ ಕನ್ನಡಿಯಾಗಿದೆ.

ಇತ್ತೀಚಿಗೆ ಅಂಗವೈಕಲ್ಯದ ಆಧಾರದ ಮೇಲೆ ವ್ಯವಸ್ಥಿತ ಕ್ರೀಡಾಕೂಟಗಳು ನಡೆಯಲು ಆರಂಭಿಸಿದ್ದು, ಅಂಗವಿಕಲರ ಕ್ರೀಡೆ ಒಂದು ಆಂದೋಲನವಾಗಿ ಬೆಳೆಯುವ ಲಕ್ಷಣ ಗೋಚರಿಸುತ್ತಿದೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago