ಊರುಕೆಟ್ಟು ಸೂರೆಯಾಡುವಲ್ಲಿ ಯಾರು
ಯರಿಗೂ ಇಲ್ಲವಯ್ಯ; ಬಸವಣ್ಣ ಸಂಗಮಕ್ಕೆ
ಚೆನ್ನಬಸವಣ್ಣ ಉಳವಿಗೆ, ಪ್ರಭು ಕದಳಿಗೆ
ಮಿಕ್ಕಿದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷ ಭಾವಕ್ಕೆ
ಮುಕ್ತಿಯನೈದಿಹರು. ನನಗೊಂದು ಬಟ್ಟೆಯ ಹೇಳಾ
ನಿಃಕಳಂಕ ಮಲ್ಲಿಕಾರ್ಜುನ
ಕಲ್ಯಾಣ ಕ್ರಾಂತಿಯ ನಂತರ ಶರಣರು ಯಾವ ಕಡೆ ತೆರಳಿದರು ಎಂಬುದನ್ನು ನಿರ್ದೇಶಿಸುವಂತಿರುವ ಮೋಳಿಗೆ ಮಾರಯ್ಯನ ಮೇಲಿನ ಈ ವಚನ ಸೇರಿದಂತೆ ಅನೇಕ ಶರಣರ ವಚನ, ಪುರಾಣ-ಕಾವ್ಯ ಕೃತಿಗಳು ಹಾಗೂ ವಿದ್ವಾಂಸರ ಅಭಿಪ್ರಾಯಗಳನ್ನು ಗಮನಿಸಿ ಬಸವಕಲ್ಯಾಣದಿಂದ ಉಳವಿಯವರೆಗೆ ಶರಣರು ನಡೆದ ಹಾದಿಯನ್ನು ಗುರುತಿಸಬಹುದು. ಈ ಹಿನ್ನೆಲೆಯಲ್ಲಿ ನಮಗೆ ಸಾಧ್ಯವಾದ ಊರುಗಳನ್ನು ಗಮನಿಸುತ್ತ ಉಳವಿಡೆಗೆ ಪ್ರಯಾಣ ಬೆಳೆಸಿ ಶರಣ ಮಾರ್ಗವನ್ನು ಇಲ್ಲಿ ದಾಖಲಿಸಲಾಗಿದೆ.
ಹರಳಯ್ಯನವರು ಬಸವಣ್ಣನವರಿಗೆ ಅರ್ಪಿಸಿದ ಪಾದುಕೆಗಳು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಸಮೀಪದ ಬಿಜನಳ್ಳಿಯಲ್ಲಿ ಸಿಗುವುದರಿಂದ ಇದರ ಜಾಡು ಹಿಡಿದು ಹೊರಟರೆ, ಈ ದಾರಿಗುಂಟ ಶರಣರ ಅನೇಕ ಸ್ಮಾರಕಗಳು ನಮಗೆ ಕಾಣಸಿಗುತ್ತವೆ. ಈ ಕಾಗಿಣಾ ನದಿ ದಾಟಿ ಬಿಜನಳ್ಳಿ ತಲುಪಿದ ಶರಣರ ಗುಂಪು, ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗಾಗಿ ಅರ್ಪಿಸಿದ ಪಾದುಕೆಗಳನ್ನು ಅಲ್ಲಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಒಕ್ಕಲಿಗನಿಗೆ (ಸೊಲಬಣ್ಣನವರ ಮನೆತನ) ಕೊಡುತ್ತಾರೆ. ಆಪವಿತ್ರ ಪಾದುಕೆಗಳನ್ನು ತಗಡಿನ ಡಬ್ಬಿಯಲ್ಲಿ ಹಾಕಿ ಜಂತಿಗೆ ಕಟ್ಟುವ ಮೂಲಕ ಅವುಗಳನ್ನು ಕಾಪಾಡಿಕೊಂಡು ಬಂದಿದ್ದರು. ಸಿರಿಗೆರೆ ಬೃಹನ್ಮಠದ ಡಾ. ಶಿವಕುಮಾರ ಸ್ವಾಮಿಗಳು ೧೯೭೨ರಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಗಂಧದ ಪೆಟ್ಟಿಗೆ ಹಾಗೂ ೨೦ ಸಾವಿರ ರೂ. ನೀಡಿದರು. ಆ ಪಾದುಕೆಗಳನ್ನು ರೇಷ್ಮೆ ಬಟ್ಟೆಗಳಲ್ಲಿ ಮುಚ್ಚಿಟ್ಟು ಈಗಲೂ ಸಂರಕ್ಷಿಸಿಕೊಂಡು ಬರಲಾಗಿದೆ.
ಜೇವರ್ಗಿ ತಾಲ್ಲೂಕಿನ ಜೇರಟಗಿ ಹಾಗೂ ಬಳ್ಳೂಂಡಗಿ ಗ್ರಾಮಗಳಲ್ಲಿ ನಡೆಯುವ ರೇವಣಸಿದ್ಧೇಶ್ವರ ಜಾತ್ರೆಯಲ್ಲಿ ಪಾದುಕೆಗಳನ್ನು ಅರ್ಪಿಸುವ ಪದ್ಧತಿ ಈಗಲೂ ಇರುವುದನ್ನು ಗಮನಿಸಿದರೆ, “ಶರಣು” ಎಂದು ಹೇಳಿದ ಹರಳಯ್ಯನಿಗೆ “ಶರಣು ಶರಣಾರ್ಥಿ” ಎಂದು ಹೇಳಿದ ಬಸವಣ್ಣನ ಮೇಲಿನ ಗೌರವ ಹಾಗೂ ಭಕ್ತಿಯಿಂದಾಗಿ ಬಸವಣ್ಣನಿಗೆ ಅರ್ಪಿಸಿದ ಪಾದುಕೆಗಳು ಹೊರತು, ಅವುಗಳನ್ನು ಧರಿಸಲು ಅಲ್ಲ ಎಂಬುದನ್ನು ನಾವು ತಿಳಿಯಬಹುದಾಗಿದೆ. ಇಂತಹ ಪವಿತ್ರ ಪಾದುಕೆಗಳನ್ನು ಬಿಜನಳ್ಳಿಯ ಒಕ್ಕಲಿಗನಿಗೆ ಕೊಟ್ಟ ಶರಣರು ಒಂದು ದಿನ ಮಳಖೇಡದಲ್ಲಿ ವಸತಿಯಿದ್ದು, ಮರುದಿನ ಬೆಳಗ್ಗೆ ಮುಂದೆ ಸಾಗುತ್ತಾರೆ ಎಂಬುದಕ್ಕೆ ಮಳಖೇಡನಲ್ಲಿರುವ ಪುರಾತನ ಕಾಲದ ಬಸವಣ್ಣನ ಗುಡಿ ಸಾಕ್ಷಿಯಾಗಿದೆ. ಅವರಲ್ಲಿ ಒಬ್ಬ ಶರಣ ಬಿಜನಳ್ಳಿ-ಬೀರನಳ್ಳಿಯಲ್ಲಿಯೇ ಉಳಿಯುತ್ತಾನೆ ಎಂಬುದಕ್ಕೆ ಮಡಿಬಸವಣ್ಣನ ಸ್ಮಾರಕ ಕಾಣಬಹುದು. ಮಡಿಬಸವಣ್ಣ ನಮ್ಮೂರಿಗೆ ಬಂದಾಗ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಎಂದು ಬೀರನಳ್ಳಿಯ ಗೌಸ್ ಪಟೇಲ್‌ರು ಬಹಳ ಅಭಿಮಾನದಿಂದ ಹೇಳುತ್ತಾರೆ. ಗೌಸ್ ಪಟೇಲ್‌ರಿಗೆ ಆಮಂತ್ರಣವಿಲ್ಲದೆ ಈಗಲೂ ಯಾವುದೇ ಧಾರ್ಮಿಕ ಅಲ್ಲಿ ನಡೆಯುವುದಿಲ್ಲ. ಶರಣರು ಬಿನಳ್ಳಿಗೆ ಬಂದಿರುವುದನ್ನು ನೋಡಿದರೆ ಇದೇ ಊರಿನಲ್ಲಿ ಒಬ್ಬ ಶರಣನಿದ್ದಿರಬೇಕು. ಅವರೆ ಶರಣರಿಗೆ ದಾರಿ ತೋರಿಸಿರಬೇಕು ಎನ್ನುವುದಕ್ಕೆ ಊರ ಪ್ರವೇಶಿಸುತ್ತಲೇ ಗವಿಸಿದ್ಧನ ಸಮಾದಿಯಿದೆ. ಈ ಸಮಾದಿ ಶರಣರು ಪಾದುಕೆಗಳನ್ನು ಕೊಟ್ಟ ಆ ಒಕ್ಕಲಿಗನಿಗೆ ಸಂಬಂಧಿಸಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
ಮಳಖೇಡದಲ್ಲಿ ರಾತ್ರಿ ತಂಗಿದ್ದ ಶರಣರು ಬೆಳಗಾದ ಕೂಡಲೇ ದಂಡೋತಿ ಮೂಲಕ ಹಾದು ಹೋದರು ಎನ್ನುವುದಕ್ಕೆ ಅಲ್ಲಿ ಬಸವಣ್ಣನ ದೇವಾಲಯ, ವೀರಭದ್ರ ದೇವಾಲಯ ಇರುವುದನ್ನು ಕಾಣಬಹುದು. (ಮಡಿವಾಳ ಮಾಚಿದೇವನ ಸಂಕೇತ) ಅಲ್ಲಿಂದ ದಂಡಗುಂಡದ ಕಡೆಗೆ ಹೊರಡುತ್ತಾರೆ. ಬಸವಣ್ಣನ ದೇವಸ್ಥಾನದ ಹೊರಗಿರುವ ವೀರಭದ್ರ ಮೂರ್ತಿಯ ಕೊರಳಲ್ಲಿ ಲಿಂಗ, ಗುಡ್ಡದ ಎದುರಿಗಿನ ಬೆಟ್ಟದ ಮೇಲೆ ಬಸವ ಮಂಟಪ ಇವೆಲ್ಲವು ಶರಣರ ಸ್ಮಾರಕಗಳಿರಬೇಕು. ಅಲ್ಲಿಂದ ೩ ಕಿ. ಮೀ. ದೂರದ ಭೀಮನಕೊಳ್ಳಕ್ಕೆ ಬಂದು ವಿಶ್ರಾಂತಿ ಪಡೆದರು ಎನ್ನುವುದಕ್ಕೆ ಅಲ್ಲೊಂದು ಶಿವಲಿಂಗವಿದ್ದು ಹಾಗೂ ಬಿಜ್ಜೇಶ್ವರ ಶರಣನ ಗುಡಿ ಇದೆ. ಅಲ್ಲಿಂದ ಅಳ್ಳೊಳ್ಳಿಗೆ ಬಂದು ಜೇವರ್ಗಿ ಮಾರ್ಗವಾಗಿ ತೆರಳುತ್ತಾರೆ. ಆ ಶರಣ ಗುಂಪಿನಲ್ಲಿರುವ ಯುವಕನನ್ನು ಶಹಾಪುರದ ಕಡೆ ಕಳಿಸುತ್ತಾರೆ. ಶಹಾಪುರದ ಗುಡ್ಡದ ಮೇಲೆ ಶೀಲವಂತೇಶ್ವರ ಬೆಟ್ಟದಲ್ಲಿ ಗವಿ ಇದೆ. ಕೆಳಗಡೆ ಫಕಿರೇಶ್ವರ ಮಠ (ಶೀಲವಂತೇಶ್ವರ ಮಠ) ಇದೆ. ಹರಳಯ್ಯನ ಮಗ ಶೀಲವಂತೇಶ್ವರ ಇಲ್ಲಿಯವರೆಗೆ ಬಂದಿರಬಹುದು. ಇವರು ಶಹಾಪುರ ಸುತ್ತಮುತ್ತಲಿನವರೇ ಆಗಿರಬಹುದು ಎಂದು ಸಂಶೊಧಕ ಡಾ. ಎಂ.ಎಂ. ಕಲ್ಬುರ್ಗಿ ಅಭಿಪ್ರಾಯಪಡುತ್ತಾರೆ.
ಬಿಜ್ಜಳನ ಕೊಲೆ ಹೇಗಾಯಿತು?: ಶರಣರ ಕೊನೆಗಾಲದ ಕೆಲವು ಸೂಚನೆಗಳನ್ನು ವಚನಕಾರರು ನೀಡಿದಂತೆ ಹೇಳುವುದಾದರೆ ಬಸವಣ್ಣನವರಿಗೆ “ತಾನು ಮಾಡಿದ್ದು ಒಂದು; ಇಲ್ಲಿ ಆಗುತ್ತಿರುವುದು ಬೇರೊಂದು” ಎಂದು ಕಲ್ಯಾಣ ತ್ಯೆಜಿಸಿ ಕೂಡಲಸಂಗಮಕ್ಕೆ ತೆರಳಿದರು. ಬಿಜ್ಜಳನ ನಂತರ ಅವರ ಮಗ ಸೋವಿದೇವ ಹತ್ತು ವರ್ಷ ಆಳ್ವಿಕೆ ನಡೆಸುತ್ತಾನೆ. ಬಿಜ್ಜಳನ ಕೊಲೆ ಹೇಗಾಯಿತು ಎಂಬುದರ ಬಗ್ಗೆ ಯವುದೇ ಶಿಲಾ ಶಾಸನಗಳಲ್ಲಿ ಉಲ್ಲೇಖವಿಲ್ಲ. ಬಿಜ್ಜಳನ ಮನೆಯಲ್ಲಿ ಅಧಿಕಾರಕ್ಕಾಗಿ (ಬಿಜ್ಜಳನ ಮಕ್ಕಳಾದ ಕೃಷ್ಣ, ಸೋವಿದೇವ, ಹಾಗೂ ಸಹೋದರ ಮೈಳುಗಿ) ಸಾಮರಸ್ಯ ಇರಲಿಲ್ಲ. ಸ್ಪರ್ಧೆ ಇತ್ತು. ಸಂಘರ್ಷ ನಡೆದಿತ್ತು ಎಂಬುದು ವಿದ್ವಾಂಸರ ಅಧ್ಯಯನದಿಂದ ತಿಳಿದು ಬರುತ್ತದೆ. ಈ ಕೌಟುಂಬಿಕ ಕಲಹವೂ ಬಿಜ್ಜಳನ ಕೊಲೆಗೆ ಕಾರಣವಾಗಿರಬೇಕು ಎಂಬ ಅನುಮಾನ ಬರುತ್ತದೆ. ಶರಣರಾದ ಜಗದೇವ/ ಮೊಲ್ಲೆಬೊಮ್ಮರು ಕೊಲೆ ಮಾಡಿದ್ದರೆ, ಮೊಲ್ಲಿಬೊಮ್ಮನನ್ನು ಸೋವಿದೇವ ಹೇಗೆ ಉಳಿಯಲು ಬಿಟ್ಟ ಎನ್ನುವ ಪ್ರಶ್ನೆ ಕಾಡುತ್ತದೆ. ಸೋವಿದೇವ ತನ್ನ ತಂದೆಯನ್ನೇ ಕೆಳಗಿಳಿಸಿ ತಾನು ಅಧಿಕಾರಕ್ಕೆ ಬಂದ ಬಲಶಾಲಿ ಆಡಳಿತಗಾರನಾಗಿದ್ದ. ಹೀಗಾಗಿ ಬಿಜ್ಜಳನ ಕೊಲೆಗೆ ಯಾರು ಕಾರಣ ಎಂಬುದುರ ಸ್ಪಷ್ಟವಾದ ಚಿತ್ರಣ ಸಿಗುವುದಿಲ್ಲ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…