ಕಲಬುರಗಿ: ಪ್ರವಾದಿ ಮಹಮ್ಮದ್ ಪೈಗಂಬರ್ (ಸ) ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮತ್ತು ಪೋಸ್ಟ್ ಹಾಕುವ ಮೂಲಕ ಸಮಾಜದಲ್ಲಿ ಕೋಮುಸೌಹರ್ದತೆಗೆ ಧಕ್ಕೆತರಲು ಯತ್ನಿಸಿದ ವ್ಯಕ್ತಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಎಂದು ನಯಾ ಸವೇರಾ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಒತ್ತಾಯಿಸಿದ್ದಾರೆ.
ಭಾರತೀಯ ಸಂಪ್ರದಾಯ ಸಂಸ್ಕೃತಿ ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರೂ ಒಂದೇ. ಕೆಲವು ಕಿಡಿಗೇಡಿಗಳು ಈ ರೀತಿ ಪೋಸ್ಟ್ ಹಾಕಿ ಸಂಸ್ಕೃತಿಯನ್ನು ಕೆಡಿಸುತ್ತಿದ್ದಾರೆ. ಕಿಡಿಗೇಡಿಗಳು ವಾತಾವರಣ ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ನಡೆಯಲು ಅವಕಾಶ ನೀಡಬಾರದೆಂದು ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಘಟನೆಯಲ್ಲಿ ಮೂರು ಅಮಾಯಕರು ಮೃತಪಟ್ಟಿದ್ದು, ಸರಕಾರದ ವತಿಯಿಂದ ಪರಿಹಾರ ಘೋಷಿಸಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಲೀಮ್ ಅಹಮದ್ ಚಿತಾಪುರ್, ಶೇಕ್ ಯುನುಸ್ ಅಲಿ, ಸೈಯದ್ ಏಜಾಜ್ ಅಲಿ ಇನಾಮ್ದಾರ್, ಸಾಜಿದ್ ಅಲಿ ರಂಜೋಳವಿ, ಶೇಕ್ ಸಿರಾಜ್ ಪಾಷಾ, ಹೈದರ್ ಅಲಿ ಇನಾಮ್ದಾರ್, ಕಾಲಿಕ್ ಅಹಮದ್, ಶೇಕ್ ಜಿಲಾನ್ ಪಷಾ, ಸೈರಾ ಬಾನು, ಗೀತಾ ಮುದ್ಗಲ್, ರಾಬಿಯಾ ಶಿಕಾರಿ, ರಾಫಿಯ ಸೀರಿನ್, ಸಾದಿಕ್ ಪಟೇಲ್, ಫಯಾಜ್ ಪಟೇಲ್, ಮಕ್ಬುಲ್ ಅಹ್ಮದ್ ಸಗರಿ, ಉಸ್ಮಾನ್ ಪಟೇಲ್, ಅಬ್ದುಲ್ ಜಾವಿದ್, ಸಿಂದಗಿ ಮಹಿಬೂಬ್ ಖಾನ್, ಬಾಬಾ ಫಕ್ರುದ್ದಿನ್ ಅನ್ಸಾರಿ, ಡಾಕ್ಟರ್ ರಫೀಕ್ ಕಮಲಪುರಿ, ಮೋಬಿನ್ ಅನ್ಸಾರಿ, ಯುನುಸ್ ಪಟೇಲ್ ಹಡಗಿಲ, ಮೈಬು ಪಟೇಲ್, ಮೌಲಾನಾ ಅಬ್ದುಲ್ ವಾಹಿದ್ ಸಾಬ್, ಅಕ್ರಮ್ ಖಾನ್ ಇತರರು ಇದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…