ಸುರಪುರ: ಶೃಂಗೇರಿಯಲ್ಲಿ ಎರಡು ದಿನದ ಹಿಂದೆ ನಡೆದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಗೆ ಧಕ್ಕೆ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸುರಪುರ ವಿಪ್ರ ಸಮಾಜ ನಗರ ಘಟಕದಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕೇದಾರನಾಥ ಶಾಸ್ತ್ರಿ ಹಾಗು ಇತರರು ಮಾತನಾಡಿ,ಶೃಂಗೇರಿಯಲ್ಲಿರುವ ಸ್ವಾಗತ ಗೋಪುರದ ಮೇಲಿರುವ ಹಿಂದು ಸಮಾಜ ಸಂಸ್ಥಾಪಕ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮಿಯರ ಧ್ವಜವನ್ನು ಕಟ್ಟಿ ಪುತ್ಥಳಿಗೆ ಧಕ್ಕೆ ಮಾಡಲಾಗಿದೆ,ಇದನ್ನು ಇಡೀ ವಿಪ್ರ ಸಮಾಜ ಹಾಗು ಹಿಂದು ಸಮಾಜ ಉಗ್ರವಾಗಿ ಖಂಡಿಸುತ್ತದೆ.ಒಬ್ಬ ಹಿಂದು ಸಮಾಜದ ಜಗದ್ಗುರುವಿನ ಪುತ್ಥಳಿಗೆ ಹೀಗೆ ಅಪಮಾನಿಸಿರುವುದು ಶಂಕರಾಚಾರ್ಯರ ಅನುಯಾಯಿಗಳು ಮತ್ತು ಹಿಂದು ಸಮಾಜ ಬಾಂಧವರಿಗೆ ಬೇಸರವನ್ನುಂಟು ಮಾಡಿದೆ.ಕೂಡಲೆ ಸರಕಾರ ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಇಲ್ಲವಾದಲ್ಲಿ ವಿಪ್ರ ಸಮಾಜ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೇದಾರ ನಾಸಿರ್ ಅಹ್ಮದ್ ಅವರ ಮೂಲಕ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಶ್ರೀ ಮದಾದ್ಯ ಜಗದ್ಗುರು ಶಂಕರಭಗವತ್ಪಾದಾಚಾರ್ಯ ಸೇವಾ ಸಮಿತಿಯಿಂದಲೂ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭೀಮಸೇನಾಚಾರ್ಯ ಜೋಷಿ ಧೀರೆಂದ್ರ ಕುಲಕರ್ಣಿ ಗಣೇಶ ಜಹಾಗೀರದಾರ್ ವೆಂಕಟೇಶ ಎಂ.ಜೋಷಿ ಮಲ್ಹಾರಾವ್ ಪಟವಾರಿ ಪ್ರಕಾಶ ಲಾಯಗುಣಸಿ ಶ್ರೀಕರ ಭಟ್ ರಾಘವೇಂದರ ಕುಲಕರ್ಣಿ ಗೆದ್ದಲಮರಿ ಚಂದ್ರಕಾಂತ ನಾಡಗೌಡ ವೆಂಕಟೇಶ ರಾಯನಪಾಳ್ಯ ಗುರಾಚಾರ್ಯ ಪಾಲ್ಮೂರು ನಾಗೇಶ ಕುಲಕರ್ಣಿ ಶ್ರೀಕರ ಜೋಷಿ ನಾಗರಾಜ ಹಾಲಗೇರಿ ಉಮಾಶಂಕರ ದಿಕ್ಷೀತ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…