ಸುರಪುರ: ಇಂದು ಯುವಶಕ್ತಿಯ ಮೇಲೆ ನಾಡು ಮತ್ತು ದೇಶದ ಜವಬ್ದಾರಿ ಹೆಚ್ಚಿದೆ.ಅದ್ದರಿಂದ ಯುವಕರ ಬದುಕು ಸಬಲೀಕರಣಗೊಳ್ಳಲು ಸರಕಾರ ಕರ್ನಾಟಕ ಯುವ ಪ್ರಾಧಿಕಾರ ಆರಂಭಿಸುವಂತೆ ಕರ್ನಾಟಕ ರಾಜ್ಯ ಯುವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ:ಎಸ್.ಬಾಲಾಜಿ ಮಾತನಾಡಿದರು.
ನಗರದ ಎನ್.ಎಸ್.ಬೂದೆಪ್ಪ ಶೆಟ್ಟಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಯುವ ಸಂಘಟನೆಗಳ ಒಕ್ಕೂಟದ ಯಾದಗಿರಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗು ನೇಹರು ಯುವ ಕೇಂದ್ರಗಳು ತಮ್ಮ ಜವಬ್ದಾರಿಯನ್ನು ಮರೆತಿವೆ, ಇದರಿಂದ ಯುವಕರಲ್ಲಿನ ಪ್ರತಿಭೆಯ ಬೆಳವಣಿಗೆಗೆ ಸಹಕಾರವಿಲ್ಲದಂತಾಗಿದೆ. ಇದನ್ನು ಮನಗಂಡು ನಾಡಿನ ಕಲೆ ಸಂಸ್ಕೃತಿ ಮತ್ತು ಯುವ ಶಕ್ತಿಗಳ ಬೆಳೆಸಲೆಂದು ಯುವ ಸಂಘಟನೆಗಳ ಒಕ್ಕೂಟ ಆರಂಭಿಸಲಾಗಿದ್ದು, ಇದರಿಂದ ಯುವಕರಲ್ಲಿ ಜಾಗೃತಿ ಮೂಡಿಸಿ ವಿಪತ್ತು ನಿರ್ವಹಣೆ, ರಾಷ್ಟ್ರ ನಿರ್ಮಾಣ ಮತ್ತು ಗ್ರಾಮೀಣಾಭೀವೃಧ್ದಿಯಲ್ಲಿ ಯುವಕರನ್ನು ತೊಡಗಿಸಲು ಪ್ರೇರಣೆ ನೀಡಲಾಗುವುದು. ಸರಕಾರ ಪ್ರತಿ ಜಿಲ್ಲೆಯಲ್ಲಿ ಯುವಭವನ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಕರ್ನಾಟಕ ಜಾನಪದಾ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಶರಣಪ್ಪ ಗೋನಾಲ್ ಉಪನ್ಯಾಸ ನೀಡಿ ವಿದ್ಯಾರ್ಥಿಗಳು ಟಿ.ವಿ,ಮೊಬೈಲ್‌ಗಳಿಗೆ ದಾಸರಾಗದೆ ಕಲೆ ಸಾಹಿತ್ಯದ ಬಗ್ಗೆ ಆಸಕ್ತಿ ತೋರಬೇಕು ಮತ್ತು ಹೆಚ್ಚೆಚ್ಚು ಕೃತಿಗಳ ಓದುವುದು ಹಾಗು ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಲಕ್ಷ್ಮೀಪುರ ಶ್ರೀಗಿರಿಮಠದ ಬಸವಲಿಂಗ ದೇವರು ಸಾನಿಧ್ಯವಹಿಸಿದ್ದರು,ಪ್ರಾಚಾರ್ಯ ಬೂದೆಪ್ಪ ಶೆಟ್ಟಿ,ಶರಣು ನಾಯಕ,ಮಹಾಂತೇಶ,ಶರಣು ಬಾದ್ಯಾಪೂರ,ಶ್ರಿಕಾಂತ್,ಪ್ರಕಾಶ,ಶಿವಕುಮಾರ,ಚಂದ್ರಶೇಖರ ಡೊಣೂರ ಇತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…