ಬಿಸಿ ಬಿಸಿ ಸುದ್ದಿ

ವಚನೋತ್ಸವ ಪ್ರತಿಷ್ಠಾನ ಯುವ ಘಟಕದಿಂದ ನಾಸಾ ವಲ್ಡ್ ಕಂಟೆಸ್ಟ್ ಭಾರತಕ್ಕೆ ಕೀರ್ತಿ ತಂದ ಶಶಾಂಕಗೆ ಸನ್ಮಾನಿಸಲಾಯಿತು.

ಬೆಂಗಳೂರು: ಇತ್ತೀಚಿಗೆ ಮಾರ್ಚ-೨೦೧೯ ತಿಂಗಳಿನಲ್ಲಿ ಬೆಂಗಳೂರಿನ ನಾರಾಯಣ ಇ-ಟೆಕ್ನೋ ಇ-ಸಿಟಿ ಬ್ರಾಂಚನ್ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ ಶಶಾಂಕ ಜೆ.ಟಿ ಅವರು ನ್ಯಾಷನಲ್ ಅರೋನಿಟಿಕ್ & ಸ್ಪೇಸ್ ಅಡಮಿಸ್ಟ್ರೇಷನ್ ವಲ್ಡ್ ಕಾನಟೆಸ್ಟ್ ಮೊದಲನೆ ರ್ಯಾಂಕ್ ಗಳಿಸಿ ಕರ್ನಾಟಕ್ಕೆ ಕೀರ್ತಿಗೆ ಪಾತ್ರರಾದ ಶಶಾಂಕಗೆ ಕಲಬುರಗಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಶಾಹಾಬಾದನ ಜಗನ್ನಾಥ ದೇವಿಂದ್ರಪ್ಪ ತಿಪ್ಪಣ್ಣನವರ ಮಗನಾದ ಶಶಾಂಕ ಜೆ.ಟಿ ಅವರು ವಲ್ಡ್ ಕಾನಟೆಸ್ಟ್-೨೦೧೯ ಇದರಲ್ಲಿ ಜಗತ್ತಿನ ಒಟ್ಟು 189 ವಿವಿಧ ದೇಶಗಳು ಭಾಗವಹಿಸಿದವು. ಅದರಲ್ಲಿ ಶಶಾಂಕ ಜೆ.ಟಿ. ಅವನು Space Metron ಎಂಬ ಹೆಸರಿನ ಪ್ರೋಜೆಕ್ಟ್ ಮೂಲಕ ಭೂಮಿ ಬಿಟ್ಟು ಅಂತರಿಕ್ಷಯಾನದಲ್ಲಿ (ಗಾಳಿಯಲ್ಲಿ) ಜನ ಹೇಗೆ ವಾಸ ಮಾಡಿ ಬದುಕಬಹುದು ಎಂಬುವುದು ಪ್ರೋಜೆಕ್ಟ್ ಮೂಲಕ ಪ್ರತಿನಿಧಿಸಿ ಇಡೀ ಭಾರತ ದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಲಬುರಗಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಸದಸ್ಯ ಶಿವರಾಜ ಅಂಡಗಿ ತಿಳಿಸಿದರು.

ಸಾಮಾನ್ಯವಾಗಿ ನಾವು ಶಾಲೆಗೆ ಅಥವಾ ಜಿಲ್ಲೆಗೆ ಕೀರ್ತಿ ತಂದಿದ್ದು ನಮ್ಮ ಬಂಧು ಬಳಗದಲ್ಲಿ ಕೇಳಿದ್ದೇವೆ. ಆದರೆ ಇವನು ಇಡೀ ಭಾರತ ದೇಶಕ್ಕೆ ಮೊದಲನೆಯ ರ‍್ಯಾಂಕ್ ಪಡೆದು ಕೀರ್ತಿ ತಂದಿದ್ದು ನಮ್ಮ ಜಿಲ್ಲೆ ಮತ್ತು ರಾಜ್ಯಕ್ಕೆ ಅಷ್ಟೇ ಅಲ್ಲ ಇಡೀ ಭಾರತಕ್ಕೆ ಕೀರ್ತಿ ತಂದ ಕರ್ನಾಟಕದ ಕಲಬುರಗಿ ಕಂದ ಶಹಾಬಾದ ಶಶಾಂಕನ ಇದೊಂದು ಐತಿಹಾಸಿಕ ದಾಖಲೆ ಎಂದು ಕಲಬುರಗಿ ವಚನೋತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಸನ್ಮಾನಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ ಸಿ.ಎ.ವೀರಶೆಟ್ಟಿ ಪೊಲೀಸ್ ಪಾಟೀಲ ಸೇಡಂ, ಜಗನ್ನಾಥ ದೆ.ಟಿ. ಶಹಾಬಾದ, ಶೋಭಾ, ಅಂಬಿಕಾ, ನಾಗರಾಜ ನಿರಂಜಿ, ಅಚಲರಾಜ ಅಂಡಗಿ ಶ್ರೀಧರ ಶ್ರೀರಾಮ, ಬಿ.ಚಂದ್ರಶೇಖರ, ವೀಣಾ, ಸುನಿತಾ, ಕುಮಾರ ನಿಲ್ ಮತ್ತು ಕುಮಾರ ಆರ್ಯನ್ ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago