ಸುರಪುರ: ನಗರದ ಗೃಹ ರಕ್ಷಕ ದಳ ಕಚೇರಿ ಮತ್ತು ತಹಸೀಲ್ ರಸ್ತೆಯಲ್ಲಿನ ಶರಣಬಸವ ಕೆಂಗುರಿ ಪುತ್ಥಳಿ ಆವರಣದಲ್ಲಿ ಗೃಹ ರಕ್ಷಕ ದಳದಿಂದ ೭೪ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಗೃಹ ರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಕಲ್ ಧ್ವಜಾರೋಹಣ ನೆರವೇರಿಸಿದರು.
ನಂತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರ್ತುಜಾ ಖಾದರ್ ಅವರಿಗೆ ಪ್ಲಾಟೂನ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಿ ಪದವಿ ಪ್ರಧಾನ ಮಾಡಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಯಲ್ಲಪ್ಪ ಹುಲಕಲ್ ಮಾತನಾಡಿ,ನಮ್ಮ ದೇಶ ಸ್ವಾತಂತ್ರವಾಗಲು ಅನೇಕ ಜನ ಮಹನಿಯರ ತ್ಯಾಗ ಬಲಿದಾನದಿಂದ ನಾವೆಲ್ಲ ಸ್ವಾತಂತ್ರ್ಯರಾಗಿದ್ದೇವೆ.ಇದನ್ನು ನಾವು ಎಂದೂ ಮರೆಯಬಾರದು ಎಂದರು.ಅದೇರೀತಿಯಾಗಿ ಇಂದು ನಮ್ಮ ಗೃಹ ರಕ್ಷಕ ದಳದ ಮುರ್ತುಜಾ ಖಾದರ್ ಚಿಗರಿಹಾಳ ಅವರು ಪ್ಲಾಟೂನ್ ಕಮಾಂಡರ್ ಆಗಿ ಬಡ್ತಿ ಹೊಂದಿರುವುದು ಸಂತೋಷದ ಸಂಗತಿಯಾಗಿದೆ ಅದರಲ್ಲೂ ಇಂದು ಇಂತಹ ಅವಿಸ್ಮರಣಿಯ ದಿನದಂದು ಪದವಿ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.ಇನ್ನಮೇಲೆ ಮುರ್ತುಜಾ ಅವರ ಮೇಲೆ ಜವಬ್ದಾರಿ ಹೆಚ್ಚಿದೆ,ಕೆಂಭಾವಿ ಘಟಕವನ್ನು ಜಿಲ್ಲೆಯಲ್ಲಿಯೆ ಮಾದರಿ ಘಟಕವನ್ನಾಗಿ ಮಾಡುವಂತೆ ಕೊರಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಅಧಿಕಾರಿ ವೆಂಕಟೇಶ ಸುರಪುರ ರಮೇಶ ಅಂಬುರೆ ಮಾಜಿ ಗೃಹ ರಕ್ಷಕ ಅಧಿಕಾರಿ ಮಹೇಂದ್ರನಾಥ ಅಂಗಡಿ ಹಾಗು ಪದವಿ ಸ್ವೀಕರಿಸಿದ ಮುರ್ತುಜಾ ವೇದಿಕೆಯಲ್ಲಿದ್ದು ಮಾತನಾಡಿದರು.
ಮಲ್ಲಿಕಾರ್ಜುನ ಗುಡಗುಂಟಿ ಕೊಟ್ರಯ್ಯಸ್ವಾಮಿ ಬಸಣ್ಣ ಲಕ್ಷ್ಮೀಪುರ ಬಸಪ್ಪ ಬಿಜಾಸಪುರ ಅಮರಪ್ಪ ಅನಿಲಕುಮಾರ ಸೂರ್ಯಕಾಂತ ಪರಶುರಾಮ ಪೂಜಾರಿ ಆದಪ್ಪ ಕೆಂಗುರಿ ಸುರೇಶ ಗೋನಾಲ ಸುರೇಶ ಕವಡಿಮಟ್ಟಿ ಶರಣಪ್ಪ ಯಾದಗಿರಿ ಅಲ್ಲಾವುದ್ದೀನ್ ಕಾಶಿನಾಥ ಸೇರಿದಂತೆ ಅನೇಕರಿದ್ದರು.ಭೀಮರಾಯ ಹುಲಿಕಲ್ ಸ್ವಾಗತಿಸಿದರು,ಬುಡ್ಡಪ್ಪ ಚವಲ್ಕರ್ ನಿರೂಪಿಸಿದರು,ಬೀಮುಲು ರಾಠೋಡ ವಂದಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…