ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ ೩೦ರ ಸತ್ಯಂಪೇಟೆಯಲ್ಲಿನ ಎಲ್ಲಾ ರಸ್ತೆಗಳು ಹದಗೆಟ್ಟಿದ್ದು ದುರಸ್ಥಿಗೊಳಿಸುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ್ ಸರಕಾರಕ್ಕೆ ಒತ್ತಾಯಿಸಿದರು.
ರಸ್ತೆಯಲ್ಲಿನ ತಗ್ಗು ಗುಂಡಿಗಳ ಬಳಿಯಿದ್ದು ಮಾತನಾಡಿದ ಅವರು,ನಮ್ಮ ಸತ್ಯಂಪೇಟೆಯಲ್ಲಿನ ಎಲ್ಲಾ ರಸ್ತೆಗಳು ಹಾಳಾಗಿವೆ.ಕಳೆದ ೫ ವರ್ಷಗಳ ಹಿಂದೆ ಯುಜಿಡಿ ಅಡಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು,ಆದರೆ ಅಂದು ನಿರ್ಮಿಸಿದ ರಸ್ತೆಗಳು ಇಂದು ಸಂಪೂರ್ಣ ಕಿತ್ತಿಹೋಗಿವೆ.ನಗರಸಭೆ ಗ್ರಾಮದತ್ತ ಸ್ವಲ್ಪವು ಗಮನಹರಿಸುತ್ತಿಲ್ಲ.ಕೇವಲ ಗ್ರಾಮದಲ್ಲಿನ ರಸ್ತೆಗಳು ಮಾತ್ರವಲ್ಲದೆ ಹಸನಾಪುರ ಪೆಟ್ರೋಲ್ ಬಂಕ್‌ನಿಂದ ರಾಯಚೂರು ಹೆದ್ದಾರಿಗೆ ತಲಪುವ ಕೊಳ್ಳೂರು ವರೆಗಿನ ರಸ್ತೆಯು ಹಾಳಾಗಿದೆ.ತಗ್ಗು ಗುಂಡಿಗಳಿಂದ ತುಂಬಿದ್ದರಿಂದ ಮಳೆಗಾಲವಾಗಿದ್ದರಿಂದ ರಸ್ತೆಯಲ್ಲಿ ಓಡಾಡಲಾಗದಂತಾಗಿದೆ.ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ಈ ರಸ್ತೆಯಲ್ಲಿ ಹೋಗುವಾದ ಅನೇಕಬಾರಿ ವಾಹನಗಳು ಅಪಘಾತಕ್ಕೀಡಾಗಿ ತೊಂದರೆ ಅನುಭವಿಸಿರುವ ಘಟನೆಗಳು ನಡೆದಿವೆ.
ಆದ್ದರಿಂದ ಇಂದು ಸತ್ಯಂಪೇಟೆಯ ಎಲ್ಲಾ ಗ್ರಾಮಸ್ಥರು ಆಗ್ರಹಿಸುತ್ತಿದ್ದು ನಗರಸಭೆ ಕೂಡಲೆ ರಸ್ತೆ ದುರಸ್ಥಿಗೊಳಿಸಬೇಕು ಮತ್ತು ಕೊಳ್ಳೂರಿಗೆ ತಲುಪುವ ರಸ್ತೆ ಕಾಮಗಾರಿ ಅರ್ಧಂಬರ್ಧ ಮಾಡಿ ನಿಲ್ಲಿಸಿರುವುದನ್ನು ಕೂಡಲೆ ಮುಗಿಸುವಂತೆ ಆಗ್ರಹಿಸಿದರು.ಒಂದು ವೇಳೆ ರಸ್ತೆ ದುರಸ್ಥಿಗೊಳಿಸದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…