ವಾಡಿ: ಕಳೆದ ಐದಾರು ವರ್ಷಗಳಿಂದ ತುಕ್ಕು ಹಿಡಿದು ಮೂಲೆ ಸೇರಿದ್ದ ಯಂತ್ರಗಳ ನೆರಳಿನಲ್ಲೇ ಸಾಗಿದ್ದ ನೀರು ಶುದ್ಧೀಕರಣ ಘಟಕಕ್ಕೆ ಕೊನೆಗೂ ಹೊಸ ಯಂತ್ರಗಳ ಆಗಮನವಾಗಿದ್ದು, ಕಲುಷಿತ ನೀರು ಕುಡಿದು ಗೋಳಾಡುತ್ತಿದ್ದ ಜನರ ಒಡಲಿಗೆ ಶುದ್ಧ ನೀರು ಸೇರುವ ದಿನಗಳು ಹತ್ತಿರವಾಗಿವೆ.
ಸಿಮೆಂಟ್ ನಗರಿ ವಾಡಿ ಪಟ್ಟಣದ ಪುರಸಭೆಗೆ ಸೇರಿದ್ದ ಕುಂದನೂರು ಭೀಮಾನದಿ ದಂಡೆಯ ಜಲ ಶುದ್ಧೀಕರಣ ಘಟಕಕ್ಕೆ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನಾಯಕರ ದಿಢೀರ್ ಭೇಟಿಯಿಂದ ಬೃಹತ್ ಗಾತ್ರದ ಘಟಕದ ಕರ್ಮಕಾಂಡ ಬಯಲಾಗಿತ್ತು. ಕ್ಲೋರಿನ್ ಯಂತ್ರಗಳು ಕೆಟ್ಟು ಹೋಗಿದ್ದವು. ಆಲಂ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣದ ಆರು ಯಂತ್ರಗಳು ಹಾಲಾಗಿ ಎರಡು ವರ್ಷಗಳೇ ಉರುಳಿದ್ದವು. ಮರಳಿಲ್ಲದೆ ಕಲುಷಿತ ನೀರು ನದಿಯಿಂದ ನೇರವಾಗಿ ಬಡಾವಣೆಗಳತ್ತ ಓಡುತ್ತಿತ್ತು.
ಆಲಂ ಮಿಶ್ರಣ ಯಂತ್ರ ರಿಪೇರಿ ಮಾಡದ ಕಾರಣ ಆಲಂ ರಸಾಯನಿಕವನ್ನು ನೇರವಾಗಿ ನೀರಿಗೆ ಸುರಿಯಲಾಗುತ್ತಿತ್ತು. ನೀರು ಸಂಗ್ರಹಗಳ ಸ್ವಚ್ಚತೆ ಮರೀಚೆಕೆಯಾಗಿತ್ತು. ನಿರ್ವಹಣೆ ಹೆಸರಿನಲ್ಲಿ ವರ್ಷಕ್ಕೆ ಕೋಟಿಗಟ್ಟಲೇ ಹಣ ಖರ್ಚು ಮಾಡಲಾಗುತ್ತಿದ್ದ ಜಲ ಶುದ್ಧೀಕರಣ ಘಟಕ ಇದ್ದೂ ಇಲ್ಲದಂತಿತ್ತು. ಒಂದು ಹನಿ ಶುದ್ಧ ನೀರು ಜನರಿಗೆ ತಲುಪಿರಲಿಲ್ಲ. ಹೋರಾಗಾರರ ಒತ್ತಡದಿಂದ ಕೊನೆಗೂ ಎಚ್ಚೆತ್ತ ಪುರಸಭೆ ಅಧಿಕಾರಿಗಳು, ತರಾತುರಿಯಲ್ಲಿ ೨೦೨೦ನೇ ಸಾಲಿನ ೧೪ನೇ ಹಣಕಾಸು ಅನುದಾನದಡಿ ೧೧ ಲಕ್ಷ ರೂ. ಖರ್ಚು ಮಾಡಿ ಅಗತ್ಯ ರಸಾಯಿನಿಕ, ಮರಳು ಹಾಗೂ ಯಂತ್ರೋಪಕರಣಗಳನ್ನು ಖರೀದಿಸಿ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಅಧಿಕಾರಿಗಳ, ಗುತ್ತಿಗೆದಾರನ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸುಮಾರು ಐದು ವರ್ಷಗಳ ಕಾಲ ಸ್ಥಳೀಯರು ರಾಡಿ ನೀರು ಕುಡಿಯಬೇಕಾದ ದುಸ್ಥಿತಿ ಎದುರಾಗಿತ್ತು. ಉಳ್ಳವರು ಇಂದಿಗೂ ಖರೀದಿಸಿಯೇ ನೀರು ಕುಡಿಯುತ್ತಿದ್ದಾರೆ. ಎಸ್‌ಯುಸಿಐ ಪಕ್ಷದ ನಾಯಕರ ಪ್ರತಿರೋಧದಿಂದಾಗಿ ಜಲ ಶುದ್ಧೀಕರಣ ಘಟಕಕ್ಕೆ ಮರುಜೀವ ಬಂದಿದೆ ಎನ್ನಬಹುದು.
ಜಲ ಶುದ್ಧೀಕರಣ ಘಟಕದಲ್ಲಿ ಕೆಟ್ಟುಹೋಗಿದ್ದ ಎಲ್ಲಾ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳ ಅಳವಡಿಕೆ ಕಾರ್ಯ ನಡೆಯುತ್ತಿದೆ. ೨೦೨೦ನೇ ಸಾಲಿನ ೧೪ನೇ ಹಣಕಾಸು ಯೋಜನೆಯಡಿ ೩ ಲಕ್ಷ ರೂ. ಖರ್ಚಿನಲ್ಲಿ ಕ್ಲೋರಿನ್ ಯಂತ್ರಗಳು, ಆಲಂ ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣದ ಯಂತ್ರೋಪಕರಣ ಖರೀದಿಸಲಾಗಿದೆ. ಮೈಸೂರಿನಿಂದ ಮೂರು ಪದರಿನ ಮರಳು ತರಿಸಲಾಗುತ್ತಿದೆ. ಘಟಕದಲ್ಲಿ ಹೊಸ ಫಿಲ್ಟರ್ ಮೀಡಿಯಾ ಅಳವಡಿಕೆಗೆ ೮ ಲಕ್ಷ ರೂ. ಸೇರಿದಂತೆ ಒಟ್ಟು ೧೧ ಲಕ್ಷ ರೂ. ಭರಿಸಲಾಗಿದೆ. ಇನ್ನೂ ಹತ್ತು ದಿನಗಳಲ್ಲಿ ಜನರಿಗೆ ಸಂಪೂರ್ಣ ಶುದ್ಧ ನೀರು ಸರಬರಾಜು ಮಾಡುತ್ತೇವೆ. -ರಾಜಕುಮಾರ ಅಕ್ಕಿ. ಕಿರಿಯ ಅಭಿಯಂತರ. ವಾಡಿ ಪುರಸಭೆ.
-ವೀರಭದ್ರಪ್ಪ ಆರ್.ಕೆ. ಕಾರ್ಯದರ್ಶಿಗಳು, ಎಸ್‌ಯುಸಿಐ (ಸಿ)ಪಕ್ಷ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…