ಬಿಸಿ ಬಿಸಿ ಸುದ್ದಿ

ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸುರಪುರ: ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟುವ ಕ್ವಾರಿ ಕಾರ್ಮಿಕ ಸಂಘದ ಸಭೆಯನ್ನು ನಡೆಸಿ ಸಂಘದ ಸುರಪುರ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಕಟ್ಟಡ ಕಾರ್ಮಿಕರ ಸಂಘದ ಕಲಬುರ್ಗಿ ಜಿಲ್ಲಾ ಅಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ,ಕಟ್ಟಡ ಕಾರ್ಮಿಕರು ಮತ್ತಿತರೆ ಕಾರ್ಮಿಕರು ಕಟ್ಟಿದ ತೆರಿಗೆ ಹಣವು ಕೇಂದ್ರ ಸರಕಾರದ ಬಳಿ ೮ ಸಾವಿರ ಕೋಟಿ ರೂಪಾಯಿಗಳಿವೆ.ಇದೇ ಹಣದಲ್ಲಿಯೆ ಕಾರ್ಮಿಕರ ಖಾತೆಗಳಿಗೆ ಪರಿಹಾರದ ಹಣ ಹಾಕಿದ್ಧಾರೆ.ಅಲ್ಲದೆ ಕಾರ್ಮಿಕರಿಗೆ ಕಿಟ್ ಕೊಡುತ್ತೇವೆ ಎಂದು ಹೇಳಿದ್ದ ಸರಕಾರ ಕೇವಲ ತಮ್ಮ ಪಕ್ಷದ ಹಿಂಬಾಲಕರಿಗೆ ಕಿಟ್ ನೀಡಿ ಕಾರ್ಮಿಕರಿಗೆ ವಂಚಿಸಿದ್ದಾರೆ.ಇವೆಲ್ಲವುಗಳನ್ನು ನಾವು ಹೊರಗೆಡವಲು ಕಾರ್ಮಿಕರು ಒಂದಾಗಬೇಕೆಂದು ಕರೆ ನೀಡಿದರು.

ನಂತರ ಭಾರತ ಕಮ್ಯೂನಿಷ್ಟ್ ಪಕ್ಷದ ಕಲಬುರ್ಗಿ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಹಾಳ್ ಮಾತನಾಡಿ,ಗ್ರಾಮೀಣ ಭಾಗದಲ್ಲಿರುವ ಕಟ್ಟಡ ಕಾರ್ಮಿಕರನ್ನು ಸಂಘಟಿಸುವ ಮೂಲಕ ಅವರಲ್ಲಿ ಒಗ್ಗಟ್ಟು ಮೂಡಿಸಬೇಕು ಹಾಗು ಸರಕಾರದಿಂದ ಕಾರ್ಮಿಕರಿಗೆ ದೊರೆಯುವ ಎಲ್ಲಾ ಸೌಲಬ್ಯಗಳನ್ನು ಕೊಡಿಸುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ನೂತನ ಪದಾಧಿಕಾರಿಗಳನ್ನು ಘೋಷಿಸಿ ಮಾತನಾಡಿ,ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳು ಚಾಕಚಕ್ಯತೆಯಿಂದ ಕೆಲಸ ಮಾಡಿ ತಾಲೂಕಿನ ಎಲ್ಲಾ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ಗುರುತಿನ ಚೀಟಿ ಕೊಡಿಸುವ ಮೂಲಕ ನೊಂದಣಿ ಮಾಡಿಸಬೇಕು.ಇಂದು ಕಾರ್ಮಿಕರ ಒಗ್ಗಟ್ಟು ತುಂಬಾ ಅವಶ್ಯವಾಗಿದ್ದು ಆಳುವ ಸರಕಾರಗಳು ಕಾರ್ಮಿಕರನ್ನು ತುಳಿಯುವ ಕೆಲಸಕ್ಕೆ ಮುಂದಾಗಿವೆ ನಾವು ಅದಕ್ಕೆ ಅವಕಾಶ ಕೊಡದೆ ನಮಗೆ ನ್ಯಾಯುತವಾಗಿ ದೊರೆಯುವ ಸೌಲಭ್ಯಗಳನ್ನು ಪಡೆಯುವಂತಾಗಬೇಕಿದೆ ಎಂದರು.

ತಾಲೂಕು ಘಟಕದ ಪದಾಧಿಕಾರಿಗಳು: ಹುಚ್ಚಪ್ಪ ಗೌಂಡಿ ಸುರಪುರ (ಗೌರವಾಧ್ಯಕ್ಷ) ದೇವಿಂದ್ರಪ್ಪ ನಗರಗುಂಡ (ಅಧ್ಯಕ್ಷ) ಪರಶುರಾಮ್ ಹುಲಕಲ್ ಹರಸಿಂಗ್ ಪವಾರ್ ಮೌನೋದ್ಧೀನ್ ರುಕ್ಮಾಪುರ ಮರೆಪ್ಪ ಸತ್ಯಂಪೇಟೆ (ಉಪಾಧ್ಯಕ್ಷರು) ತಿಮ್ಮಯ್ಯ ದೊರೆ (ಸಂಘಟನಾ ಕಾರ್ಯದರ್ಶಿ) ಹಣಮಂತ ಕುಂಬಾರಪೇಟೆ ಸೋಮಣ್ಣ ಕಕ್ಕೇರಿ ಭೀಮಣ್ಣ ಗುತ್ತೇದಾರ ಯಲ್ಲಪ್ಪ ಬಡಿಗೇರ ಹಣಮಂತ ಕವಡಿಮಟ್ಟಿ ಆನಂದ ಕಟ್ಟಿಮನಿ (ಕಾರ್ಯದರ್ಶಿ) ಮರೆಪ್ಪ ದೇಸಾಯಿ ಬಸವರಾಜ ಗುತ್ತೇದಾರ ಭೀಮಣ್ಣ ಡೊಣ್ಣಿಗೇರಾ ಹರಿಶ್ಚಂದ್ರ ಸುರಪುರ ಭೀಮಣ್ಣ ಸುರಪುರ (ಸಹ ಕಾರ್ಯದರ್ಶಿಗಳು) ಮತ್ತು ೨೧ ಜನ ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಯಿತು ಎಂದು ಸಂಘದ ತಾಲೂಕು ಕಾರ್ಯದರ್ಶಿ ತಿಮ್ಮಯ್ಯ ತಳವಾರ ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago