ಸುರಪುರ: ತಾವೆಲ್ಲರು ಇಂದು ನನ್ನನ್ನು ಮನದುಂಬಿ ಹಾರೈಸುವ ಜೊತೆಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸೇವೆಗೆ ಬೀಳ್ಕೊಡುತ್ತಿರುವುದು ತುಂಬಾ ಸಂತೋಷ ಮೂಡಿಸಿದೆ ಎಂದು ಭಾರತೀಯ ಸೇನೆಯ ಯೋಧ ಶರಣು ಹೊಸ್ಮನಿ ಸತ್ಯಂಪೇಟೆ ಮಾತನಾಡಿದರು.
ನಗರದ ಸರದಾರ್ ವಲ್ಲಭಬಾಯಿ ಪಟೇಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸುರಪುರ ನಾಗರಿಕರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ನೀವು ಮಾಡಿದ ಈ ಸನ್ಮಾನ ಮತ್ತು ಹಾರೈಕೆ ನಾನು ಭಾರತೀಯ ಸೇನೆಯಲ್ಲಿ ಇನ್ನಷ್ಟು ವರ್ಷಗಳು ಸೇವೆ ಸಲ್ಲಿಸಲು ಶಕ್ತಿ ತುಂಬಿದೆ.ತಾವೆಲ್ಲರು ತೋರಿಸಿದ ಈ ಅಭಿಮಾನ ಮತ್ತು ಹಾರೈಕೆ ನನ್ನ ಸೇವೆಯ ಕುರಿತು ಹೆಮ್ಮೆಮೂಡಿಸಿದೆ ಎಂದರು.
ಯೋಧನನ್ನು ಸನ್ಮಾನಿಸಿದ ಮುಖಂಡ ರಾಜಾ ಪಿಡ್ಡನಾಯಕ ಮಾತನಾಡಿ,ಇಂದು ದೇಶದ ಜನರು ನೆಮ್ಮದಿಯಿಂದ ಇರಲು ನಮ್ಮ ನಗರದ ಹೆಮ್ಮೆಯ ಯೋಧ ಶರಣು ಹೊಸ್ಮನಿಯಂತಹ ಲಕ್ಷಾಂತರ ಜನ ಯೋಧರ ನಿತ್ಯದ ಸೇವೆಯ ದಯೆಯಿಂದ.ಗಡಿಯಲ್ಲಿ ಯೋಧರು ಹಗಲಿರುಳು ಜೀವದ ಹಂಗು ತೊರೆದು ಸೇವೆ ಮಾಡುತ್ತಿರುವುದರಿಂದ ದೇಶ ಸುಭದ್ರವಾಗಿದೆ.ನಾವೆಲ್ಲರು ದೇವರಂತೆ ನಿತ್ಯವು ಯೋಧರನ್ನು ಸ್ಮರಿಸಬೇಕೆಂದರು.
ಇದೇ ಸಂದರ್ಭದಲ್ಲಿ ಅನೇಕರು ಯೋಧನಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಸೇವೆ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಗುರುನಾಥ ರೆಡ್ಡಿ ಸಚಿನ್ ಕುಮಾರ ನಾಯಕ ಅನಿಲ ಬಿಲ್ಹಾಳ ಮಹೇಶ ಪಾಟೀಲ್ ಮಂಥನ ನಾಯಕ ಸುಣ್ಣದ ಮನಿ ಸಂತೋಷಗೌಡ ಪ್ರವೀಣ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…