ಆಗಷ್ಟ್ 29 ರವರೆಗೆ ಪ್ರತಿಭಟನಾ ಸಪ್ತಾಹ: ಸಿಪಿಐಎಂ ಕರೆ

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ದ ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸವಾದಿ ) ಪಕ್ಷ ಜಿಲ್ಲೆಯಾದ್ಯಂತ ಇಂದಿನಿಂದ ಆಗಷ್ಠ್ 24 ರಿಂದ 29ರ ವರೆಗೆ ಪ್ರತಿಭಟನಾ ಸಪ್ತಾಹ ನಡೆಸಲು ಕರೆ ನೀಡಿರುವ ಹಿನ್ನೆಯಲ್ಲಿ ಇಂದು ಜಿಲ್ಲೆಯ ಕಾಳಗಿ ತಹಶೀಲ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು..

ಕೋವಿಡ್ – 19 ವೈರಾಣುವನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ವಹಿಸದೇ ಜನತೆಯನ್ನು ಸಂಕಷ್ಟದಲ್ಲುಳಿಯಲು ಬಿಟ್ಟಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡೆ ಹಾಗೂ ದೇಶ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಬಿಕ್ಕಟ್ಟಿನಿಂದ ಇಡೀ ದೇಶವನ್ನು ಪಾರು ಮಾಡುವ ನೀತಿಗಳ ಬದಲು ಕೇವಲ ದೊಡ್ಡ ಬಂಡವಾಳದಾರರು ಹಾಗೂ ಕಾರ್ಪೋರೇಟ್ ಕಂಪನಿಗಳ ಹಿತಗಳನ್ನು ರಕ್ಷಿಸಲು ಕೇಂದ್ರ ಸರಕಾರ ಮುಂದಾಗುತ್ತಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಪ್ರತಿಭಟನೆಯಲ್ಲಿ ಆರೋಪಿಸಿದರು.

ಕೋಟಿ ರೂಗಳ ಸಾರ್ವಜನಿಕ ಬ್ಯಾಂಕುಗಳ ಸಾಲ ಮತ್ತು ತೆರಿಗೆ ಬಾಕಿ ಮನ್ನಾಮಾಡಲಾಗಿದೆ. ದೇಶಕ್ಕೆ ಭಾರಿ ಲಾಭ ನೀಡುವ ಬಿಎಸ್ ಎನ್ ಎಲ್, ಬ್ಯಾಂಕ್, ವಿಮೆ, ರೈಲ್ವೇ, ವಿಮಾನ ನಿಲ್ದಾಣಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸಂಸ್ಥೆಗಳನ್ನು ಅಕ್ರಮ ಬೆಲೆಗೆ ದಾನ ನೀಡುತ್ತಿದೆ. ಕೃಷಿಯನ್ನು ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುತ್ತಿದೆ ಎಂದು ದುರಿದರು.

ವ್ಯತಿರಿಕ್ತವಾಗಿ, ಒಟ್ಟು ಆರ್ಥಿಕ ಮತ್ತು ಕೈಗಾರಿಕಾ ಹಾಗೂ ಕೃಷಿ ಬಿಕ್ಕಟ್ಟಿನಿಂದ ಬಳಲುತ್ತಿರುವ ಒಟ್ಟು ದೇಶದ ರೈತರು, ಕೃಷಿಕೂಲಿಕಾರರು, ಕಾರ್ಮಿಕರು, ಮದ್ಯಮ ವರ್ಗದ ಜನತೆ, ಸಣ್ಣ ವ್ಯಾಪಾರಿಗಳನ್ನು ಅದರಿಂದ ಹೊರ ತರುವುದನ್ನು ಉಪೇಕ್ಷಿಸಲಾಗಿದೆ. ಮಾತ್ರವಲ್ಲಾ, ಒಟ್ಟು ಆರ್ಥಿಕ ಬಿಕ್ಕಟ್ಟು ಮತ್ತಷ್ಠು ಆಳಗೊಳ್ಳಲು ಬಿಡಲಾಗಿದೆ. ಇದರಿಂದ ನಿರುದ್ಯೋಗ, ಬಡತನ ಮತ್ತು ದಲಿತರು ಹಾಗೂ ಮಹಿಳೆಯರ ಮೇಲಿನ ಸಾಮಾಜಿಕ ದೌರ್ಜನ್ಯಗಳು, ಆತ್ಮಹತ್ಯೆಗಳು, ಹಸಿವಿನ ಸಾವುಗಳು ವ್ಯಾಪಕವಾಗುತ್ತಿವೆ ಎಂದು ತಿಳಿಸಿದರು.

ಇದೇ ಸಂಕಷ್ಠದ ಸಂದರ್ಭದಲ್ಲಿ ಜನತೆಯ ಒಡೆದಾಳುವ ನೀತಿಗಳನ್ನು ಆಳಗೊಳಿಸಲಾಗುತ್ತಿದೆ, ಹೇರಲಾಗುತ್ತಿದೆ. ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನಿಸಲಾಗುತ್ತಿದೆ. ರಾಜ್ಯ ಸರಕಾರಗಳ ಮತ್ತು ಸ್ವಾಯತ್ತ ಸಂವಿಧಾನಿಕ ಸಂಸ್ಥೆಗಳ ಹಕ್ಕುಗಳನ್ನು ದಮನ ಮಾಡಿ, ಸರ್ವಾಧಿಕಾರಗಳನ್ನು ಹೇರಲಾಗುತ್ತಿದೆ ಎಂದು ಹೇಳಿದರು.

ಜನ ವಿರೋಧಿ ನೀತಿಗಳನ್ನು ವಿರೋಧಿಸುವುದು ಮತ್ತು ಜನತೆಯ ತಲಾ ಆದಾಯವನ್ನು ಈ ಸಂದರ್ಭದಲ್ಲಿ ಹೆಚ್ಚಿಸಿಕೊಂಡು, ಆ ಮೂಲಕ ಕೋವಿಡ್ – 19 ರ ವಿರುದ್ದ ತಮ್ಮ ಆರೋಗ್ಯ ರಕ್ಷಿಸಿ ಕೊಳ್ಳಲು  ಮತ್ತು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅಗತ್ಯವಾದ ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಮಾಸಿಕ 7,500 ರೂಗಳ ಮಾಸಿಕ ಸಹಾಯಧನ ಮತ್ತು ತಲಾ ವ್ಯಕ್ತಿಗೆ 10 Kg ಸಮಗ್ರ ಪಡಿತರವೂ ಸೇರಿದಂತೆ 16, ಹಕ್ಕೊತ್ತಾಯಗಳಿಗಾಗಿ ಭಾರತ ಕಮ್ಯುನಿಷ್ಠ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯು ಪ್ರತಿಭಟನಾ ಸಪ್ತಾಹವನ್ನು ಸಂಘಟಿಸುತ್ತಿದೆ ಎಂದು ತಿಳಿಸಿದ ಅವರು ಜನರು ಬೆಂಬಲಿಸಿ ಸಪ್ತಾಹದಲ್ಲಿ ಗಿಯಾಗಲು ಮನವಿ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಸಿಪಿಐಎಂ ತಾಲೂಕು ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ರೈತರು ಇದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420