ಕಲಬುರಗಿ: ಜಿಲ್ಲೆಯ ಕಲಬುರಗಿ ತಾಲೂಕಿನ ಸೈಯದ ಚಿಂಚೋಳಿ ಗ್ರಾಮದ ಪಕ್ಕದಲ್ಲಿರುವ ಕೆರಿಭೋಸಗಾದ ಕೆರೆಯು ಮತ್ತು ಸೈಯದ್ ಚಿಂಚೋಳಿ ಗ್ರಾಮದ ಕೆರೆಯು ಹೊಂದಿಕೊಂಡು ಇರುತ್ತದೆ. ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಎರಡು ಕೆರೆಗಳು ಸಂಪೂರ್ಣವಾಗಿ ತುಂಬಿ ಹರಿಯುತ್ತಿವೆ. ಇದರಿಂದ ಎರಡವು ಕೆರೆಗಳು ಒಡೆದು ಹೋಗುವ ಸಂಭವವಿದೆ ಆದ್ದರಿಂದ ತ್ವರಿತವಾಗಿ ಎರಡು ಕೆರೆಗಳನ್ನು ಒಡೆದು ಹೋಗದಂತೆ ದುರಸ್ತಿ ಕಾಮಗಾರಿಯನ್ನು ಮಾಡಿಸಬೇಕೆಂದು ಸೈಯದ್ ಚಿಂಚೋಳಿ ಗ್ರಾಮದ ಮುಖಂಡ ಅನೀಲಕುಮಾರ ಎನ್.ಡಾಂಗೆ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಸಲ್ಲಿಸಿ ಮಾತನಾಡುತ್ತಾ ಅವರು, ಸೈಯದ ಚಿಂಚೋಳಿ ಗ್ರಾಮವು ತಗ್ಗಿನಲ್ಲಿರುತ್ತದೆ. ಒಂದು ವೇಳೆ ಸದರಿ ಕೆರೆಗಳು ಒಡದು ಹೋದರೆ ಸೈಯದ ಚಿಂಚೋಳಿ ಗ್ರಾಮವು ಸಂಪೂರ್ಣವಾಗಿ ಮುಳುಗಿ ಹೋಗುತ್ತದೆ. ಇದ್ದರಿಂದ ಗ್ರಾಮಸ್ಥರೆಲ್ಲರು ಭಯದ ವಾತವರಣದಲ್ಲಿ ಜೀವನ ಮಾಡುವಂತಾಗಿದೆ ಎಂದರು.
ಸುಮಾರು ವರ್ಷಗಳ ಹಿಂದೆ ವೀರೆಂದ್ರ ಪಾಟೀಲ್ ಅವರ ನೇತೃತ್ವದಲ್ಲಿ ಸರ್ಕಾರವಿದ್ದಾಗ ಸೈಯದ ಚಿಂಚೋಳಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಗಂಜಿ ಕೇಂದ್ರಗಳನ್ನು ತೆಗೆದು ಉಪಚಾರ ಮಾಡಲಾಗಿತ್ತು. ಆ ಸಮಯಲ್ಲಿ ಕೂಡ ಗ್ರಾಮ ಸ್ಥಳಾಂತರಿಸುವ ಸಲುವಾಗಿ ಮನವಿ ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನೆಯಾಗಿರುವುದಿಲ್ಲ, ಆದಕಾರ ಗ್ರಾಮಸ್ಥರ ಮನವಿಯನ್ನು ಗಂಭಿರವಾಗಿ ಪರಿಗಣಿಸಿ ಕೂಡಲೇ ಸೈಯದ್ ಚಿಂಚೋಳಿ ಗ್ರಾಮಸ್ಥರನ್ನು ಸ್ಥಳಾಂತರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸೈಯದ ಪಟೇಲ್ ಎಮ್.ಮುಡ್ಡಿ, ಈರಣ್ಣಾ ಸಿ. ಅವರಾದ, ಚಂದ್ರಶೇಖರ ಕೆ. ಸಿರಸಗಿ, ಶರಣಬಸಪ್ಪಾ ಎ. ಸಂಗೋಳಗಿ, ಅಂಬಾರಾಯ ಕಾಂಬಳೆ, ಜಗನ್ನಾಥ ಎ. ಬಿಂಗೆ, ಲಕ್ಷ್ಮೀಕಾಂತ ಎಸ್.ಮೂಲಗೆ, ಶಂಕರಸಿಂಗ್ ಕೆ. ಠಾಕೂರ, ಶಬ್ಬೀರಖಾನ್ ಬಿ. ಪಠಾಣ, ಇಸ್ಮಾಯಿಲ್ ಪಟೇಲ್ ಕೆ. ಮುಡ್ಡಿ, ಜಾವಿದಖಾನ್ ಎಸ್.ಪಠಾಣ, ಮಹಾದೇವ ಎಂ.ಗೌಳಿ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…