ಕಲಬುರಗಿ: ಶ್ರೀ ಶರಣಬಸವೇಶ್ವರರ ಸಂಸ್ಥಾನ ಕಾಯಕ ದಾಸೋಹ ತತ್ವಗಳನ್ನು ಎತ್ತಿ ಹಿಡಿದ ಮಹಾನ್ ಸಂಸ್ಥಾನವಾಗಿದೆ. ಪೂಜ್ಯ ದೊಡ್ಡಪ್ಪ ಅಪ್ಪಾರವರು ಹಾಕಿಕೊಟ್ಟ ಮಾರ್ಗದಂತೆ, ಇಲ್ಲಿ ಅನ್ನ ಮತ್ತು ಅಕ್ಷರ ದಾಸೋಹ ನಿರಂತರವಾಗಿ ಸಾಗುತ್ತಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಸಾರೀಕಾದೇವಿ ಕಾಳಗಿ ಅಭಿಪ್ರಾಯ ಪಟ್ಟರು.
ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಪರಮ ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪಾ ಅವರ 37ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪ್ಪಾ ಅವರು 80 ವರ್ಷಗಳ ಕಾಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತಮ್ಮ ಬದುಕನ್ನು ಅರ್ಪಿಸಿಕೊಂಡರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದ ಅವರು, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದರು ಎಂದು ಹೇಳಿದರು.
ದಾಸೋಹ ಮಹಾಮನೆಯ ಮಹಾಮಾತೆಯರು ತಮ್ಮ ಜೀವನವನ್ನು ಕಾಯಕ ಮತ್ತು ದಾಸೋಹಕ್ಕಾಗಿ ಅರ್ಪಿಸಿಕೊಂಡವರು. ಈ ಮಹಾಮಾತೆಯರ ಜೀವನದ ಸಾರವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಈ ಮಾತೆಯರ ಜೀವನ ಆದರ್ಶಮಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್.ಪಾಟೀಲ ಮಾತನಾಡಿ, ದೊಡ್ಡಪ್ಪ ಅಪ್ಪಾ ಎಂಬುದು ಪಂಚಾಕ್ಷರಿ ಪದವಾಗಿದ್ದು, ಪಂಚಾಕ್ಷರಿಯ ಮಂತ್ರದಷ್ಟೆ ಅರ್ಥಗರ್ಭಿತವಾಗಿದೆ. ಶಿವಶರಣೆ ಅಕ್ಕಮಹಾದೇವಿ, ಶರಣಬಸವೇಶ್ವರರ ತಾಯಿ ಮಹಾದೇವಿ, ದೊಡ್ಡಪ್ಪ ಅಪ್ಪಾ ಅವರ ಮಗಳು ಮಹಾದೇವಿ ಹೀಗಾಗಿ ಈ ಮೂರು ತಾಯಂದಿರ ಹೆಸರಾರ್ಥ ಹೆಣ್ಣು ಮಕ್ಕಳಿಗಾಗಿ ಮಹಾದೇವಿ ಶಾಲೆ ಆರಂಭಿಸಿದರು. ಶಿಕ್ಷಣದ ಮೇಲಿನ ಅತಿಯಾದ ಪ್ರೀತಿಯ ಕಾರಣದಿಂದಲೆ, ಈ ಸಂಸ್ಥೆಯಲ್ಲಿ ಉದ್ಯೋಗ ಮಾಡುವರ ಶಿಕ್ಷಕರ ವೇತನಕ್ಕೆ ಇಲ್ಲಿವರೆಗೂ ಯಾವದೇ ರೀತಿಯ ತಡೆ ಬರದಂತೆ ನೋಡಿಕೊಂಡ ಮಹಾನ್ ಸಂಸ್ಥೆ ಇದಾಗಿದೆ ಎಂದರು.
ಕಾರ್ಯಕ್ರಮವನ್ನು ಡಾ. ನಾನಾಸಾಹೇಬ್ ಹಚಡದ್ ನಿರೂಪಿಸಿದರು. ಡಾ. ಚಿದಾನಂದ ಚಿಕ್ಕಮಠ ಸ್ವಾಗತಿಸಿದರು. ಪ್ರೊ. ನಿರ್ಮಲಾ ದೊರೆ ವಂದಿಸಿದರು. ಕನ್ನಡ ವಿಭಾಗ, ಪತ್ರಿಕೋದ್ಯಮ ವಿಭಾಗ ಹಾಗೂ ಆಂಗ್ಲ ವಿಭಾಗದ ಸಿಬಂದ್ದಿವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಸಾರೀಕಾದೇವಿ ಕಾಳಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದನ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್. ಪಾಟೀಲ, ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಎಲೆನೋರಾ ಗೀತಮಾಲಾ ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಹಿತಿ ಡಾ. ಈಶ್ವರಯ್ಯ ಮಠ ಅವರ ನಿಧನದ ನಿಮಿತ್ಯ ಮೌನಾಚರಣೆ ಮಾಡಲಾಯಿತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…