ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಂದು ಕನ್ನಡ ಭವನದಲ್ಲಿ ಈ ಭಾಗದ ಹಿರಿಯ ಸಾಹಿತಿಗಳಾದ ದಿ.ಡಾ.ಚೆನ್ನಣ್ಣ ವಾಲಿಕಾರ, ದಿ.ಡಾ.ಗೀತಾ ನಾಗಭೂಷಣ,ದಿ. ಗವೀಶ ಹಿರೇಮಠ, ದಿ.ಡಾ. ಈಶ್ವರಯ್ಯ ಮಠ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿಯವರು ಮಾತನಾಡುತ್ತ ಈ ಭಾಗದ ನಾಲ್ಕು ಜನ ಹಿರಿಯ ಸಾಹಿತಿಗಳನ್ನು ಕಳೆದುಕೊಂಡ ನಾವು ಅನಾಥರಾಗಿದ್ದೆವೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ತಾಲೂಕು ಕಸಾಪ ಅಧ್ಯಕ್ಷರಾದ ಸಿ.ಎಸ್.ಮಾಲಿಪಾಟೀಲ ಮಾತನಾಡುತ್ತ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡು ಸಂತೋಷದಲ್ಲಿದ್ದ ನಾವುಗಳು ಮುಂದೆ ಕೊರೋನಾ ವೈರಸ್ ಸೋಂಕಿನಿಂದ ಇಡೀ ಪ್ರಪಂಚವು ತಲ್ಲಣಗೊಂಡಿದೆ.
ಸುಮಾರು ಮಾರ್ಚನಿಂದ ಒಬ್ಬರಿಗೊಬ್ಬರು ಯೋಗ ಕ್ಷೇಮದ ಬಗ್ಗೆ ಮೊಬೈಲನಲ್ಲಿಯೇ ವಿಚಾರಿಸುತ್ತಿದ್ದ ಈ ಸಂದರ್ಭದಲ್ಲಿ ನಮ್ಮ ಭಾಗದ ಹಿರಿಯ ಸಾಹಿತಿಗಳು ನಮ್ಮನ್ನಗಲಿ ಹೋಗಿರುವುದು ತುಂಬಲಾರದ ನಷ್ಟವಾಗಿದೆ. ಅದರಲ್ಲೂ ಕರ್ತವ್ಯದಲ್ಲಿದ್ದ ಡಾ.ಈಶ್ವರಯ್ಯ ಮಠರವರು ಅಗಲಿರುವ ಸುದ್ದಿ ಸಾಹಿತಿ ಲೇಖಕರಿಗೂ ಶಿಕ್ಷಣ ಪ್ರೇಮಿಗಳಿಗು ವಿಧ್ಯಾರ್ಥಿಗಳಿಗು ನೋವನ್ನುಂಟು ಮಾಡಿದೆ,ಆ ಕಾರಣಕ್ಕಾಗಿ ಆ ಎಲ್ಲ ಹಿರಿಯ ಸಾಹಿತಿ ದಿಗ್ಗಜರಿಗೆ ತಾಲೂಕು ಪರಿಷತ್ತಿನಿಂದ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಭಕರೆ, ದೌಲತರಾವ ಪಾಟೀಲ, ವೆಂಕಟೇಶ ನೀರಡಗಿ, ಅರುಣಾ ಹಳ್ಳಿಖೇಡ, ಭಾನುಕುಮಾರ ಗಿರೇಗೋಳ, ಎನ್.ಸಿ.ವಾರದ ಮಲ್ಲಿಕಾರ್ಜುನ ಸಂಗಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…