ಸುರಪುರ: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಹಾಗು ವೈಚಾರಿಕ ಚಿತಂಕ ಡಾ: ಈಶ್ವರಯ್ಯ ಮಠ ಅವರಿಗೆ ಹುಟ್ಟೂರು ದೇವರಗೋನಾಲದಲ್ಲಿ ದೇವರಗೋನಾಲ ಗೆಳೆಯರ ಬಳಗ ಹಾಗು ನೌಕರರ ಬಳಗದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.
ಸಭೆಯ ಆರಂಭದಲ್ಲಿ ಡಾ:ಈಶ್ವರಯ್ಯ ಮಠ ಮತ್ತು ಇತ್ತೀಚೆಗೆ ನಿಧನರಾದ ಇನ್ನಿಬ್ಬರು ಮಹನಿಯರುಗಳಾದ ಯಾದಗಿರಿ ಏಕದಂಡಗಿ ಮಠದ ಶ್ರೀ ಗುರುನಾಥೇಶ್ವರ ಸ್ವಾಮೀಜಿ ಹಾಗು ನಿವೃತ್ತ ಶಿಕ್ಷಕ ಲಿಂಗಣ್ಣ ಲಕಣಾಪುರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ನಂತರ ಸರಕಾರಿ ಜಿಲ್ಲಾ ಅಭಿಯೋಜಕರಾದ ಹೆಚ್.ಎನ್.ಬಳಬಟ್ಟಿ ಮಾತನಾಡಿ,ಈಶ್ವರಯ್ಯ ಹಿರೇಮಠ ಅವರು ನಮ್ಮೂರಿನ ಮಗ ಅಷ್ಟೆ ಅಲ್ಲದೆ ಇಡೀ ಸಗರನಾಡಿನ ಹೆಮ್ಮೆಯ ಮಗನಾಗಿದ್ದರು.ಅವರ ಸಾಹಿತ್ಯ ಓದು ಭಾಷಣ ಬರಹ ನಡೆಸಿದ ಗೋಷ್ಠಿಗಳು ಸಮಾರಂಭಗಳು ಎಲ್ಲವನ್ನೂ ನೆನೆದು ಅವರು ನಮ್ಮೂರಿನ ಆಲದ ಮರದಂತಿದ್ದರು ಎಂದು ಭಾವುಕರಾಗಿ ನುಡಿದರು.
ಅದೇರೀತಿಯಾಗಿ ಮೊನ್ನೆ ನಿಧನರಾದ ಏಕದಂಡಗಿ ಮಠದ ಶ್ರೀ ಗುರುನಾಥೇಶ್ವರ ಸ್ವಾಮೀಜಿ ಹಾಗು ನಿವೃತ್ತ ಶಿಕ್ಷಕರಾಗಿದ್ದ ಲಿಂಗಣ್ಣ ಲಕಣಾಪುgರ ಕುರಿತು ಮಾತನಾಡಿ,ಲಿಂಗಣ್ಣ ಲಕಣಾಪುರ ಅವರು ನೇರ ನುಡಿಯ ನೇರ ನಡೆಯ ವ್ಯಕ್ತಿಯಾಗಿದ್ದರು.ಸದಾಕಾಲ ಸತ್ಯವನ್ನೆ ನುಡಿದು ಎಲ್ಲರಿಗು ಮಾದರಿಯಾಗಿದ್ದರು.ಅವರು ನಮ್ಮೂರನ್ನು ತಿದ್ದಿದ ಮೊದಲ ಶಿಕ್ಷಕರು ಅಂತವರನ್ನು ಕಳೆದುಕೊಂಡ ದುಃಖ ನಮ್ಮನ್ನು ಬಾಧಿಸುತ್ತದೆ ಎಂದರು.
ನಂತರ ಸಭೆಯಲ್ಲಿದ್ದ ಮೋನಪ್ಪ ಕಳಸರ್ ಮಹಾಂತೇಶ ಗೋನಾಲ ಭೀಮರಾಯ ಮಲ್ಲಾಪುರ ನಿಂಗಣ್ಣ ಗೋನಾಲ ಕೆ.ಎಸ್.ಈಶ್ವರ ಕೆರಿಕೋಡಿ ಭೀಮಣ್ಣ ಕೂಡ್ಲೂರು ಶಾಂತಪ್ಪ ಕಳಸರ್ ಸುರೇಶ ಕಿರದಳ್ಳಿ ಮಾತನಾಡಿದರು.ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ನಿಂಗಣ್ಣ ಕಮತಗಿ ವಿನೋದ ಕೊಂಗಂಡಿಕರ್ ಮಲ್ಲು ಪಾಟೀಲ್ ಗುರು ಲಕಣಾಪುರ ಭೀಮು ಕೊಂಗಂಡಿಕರ್ ಅನಿಲ್ ಶಹಾಪುರಕರ್ ಸೋಮು ಮಾಲಿಂಗ ಗೋನಾಲ ಹಾಗು ದೇವರಗೋನಾಲ ಗೆಳೆಯರ ಬಳಗ ಮತ್ತು ನೌಕರರ ಬಳಗದ ಸದಸ್ಯರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…