ಹೈದರಾಬಾದ್ ಕರ್ನಾಟಕ

ಡಾ. ಪಿ ಎಂ ಬಿರಾದಾರಗೆ ಶ್ರೇಷ್ಟ ಶಿಕ್ಷಕ ಪ್ರಶಸ್ತಿ

ಕಲಬುರಗಿ: ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ 2020ನೇ ಸಾಲಿನ ಶ್ರೇಷ್ಟ ಶಿಕ್ಷಕ ಗೌರವ ಪ್ರಶಸ್ತಿಗೆ ಕಲಬುರಗಿ ನಗರದ ಖ್ಯಾತ ಚರ್ಮರೋಗ ತಜ್ಞ ಡಾ. ಪಿ ಎಂ ಬಿರಾದಾರ ಅವರು ಭಾಜನರಾಗಿದ್ದಾರೆ.

ಸೆ.5ರಂದು ಶನಿವಾರ ಮುಂಜಾನೆ 11 ಗಂಟೆಗೆ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ಜರುಗುವ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಡಾ. ಪಿ ಎಂ ಬಿರಾದಾರ ಅವರಿಗೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿನ ಅವರ ಮೂರುವರೆ ದಶಕಗಳ ಅನನ್ಯ ಸೇವೆಯನ್ನು ಗುರುತಿಸಿ ಶ್ರೇಷ್ಟ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಚರ್ಮರೋಗ ಅಧ್ಯಯನ ವಿಭಾಗದ ಸಂಸ್ಥಾಪಕ ಮುಖ್ಯಸ್ಥರಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ. ಪಿ ಎಂ ಬಿರಾದಾರ ಅವರು ಮೂಲತ: ಬೀದರ್ ಜಿಲ್ಲೆಯ ಔರಾದ ತಾಲೂಕಿನ ಹಕ್ಯಾಳ ಗ್ರಾಮದವರು.
77 ಸಾರ್ಥಕ ವಸಂತಗಳನ್ನು ಕಂಡಿರುವ ಡಾ. ಪಿ ಎಂ ಬಿರಾದಾರ ಅವರು ಕೇವಲ ಕಲ್ಯಾಣ ಕರ್ನಾಟಕ ಮಾತ್ರವಲ್ಲದೇ ನೆರೆಯ ತೆಲಾಂಗಾಣ, ಮಹಾರಾಷ್ಟ್ರದ ಸಹಸ್ರಾರು ಚರ್ಮರೋಗ, ಲೈಂಗಿಕ ವ್ಯಾಧಿ ಹಾಗೂ ಕುಷ್ಠ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ದಿ ಇಂಡಿಯನ್ ಅಸೋಶಿಯೇಶನ್ ಆಫ್ ಡೆರ್ಮಾಟಾಲಜಿಸ್ಟ್ಸ್ ವೇನೆÀರಾಲಜಿಸ್ಟ್ಸ್ ಮತ್ತು ಲೆಪ್ರಾಲಾಜಿಸ್ಟ್ಸ್ ಸಂಸ್ಥೆಯ ಕರ್ನಾಟಕ ಮತ್ತು ತಮಿಳನಾಡು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಡಾ. ಬಿರಾದಾರ ಅವರ ನೇರ ಮಾರ್ಗದರ್ಶನದಲ್ಲಿ 25ಕ್ಕೂ ಹೆಚ್ಚು ಚರ್ಮರೋಗ ತಜ್ಞರು ಪರಿಣಿತಿ ಸಾಧಿಸಿದ್ದಾರೆ.

ಪ್ರತಿಷ್ಠಿತ ಐಎಡಿವಿಎಲ್ ಸಂಸ್ಥೆಯ ಮಾಸ್ಟರ್ ಆಫ್ ಡೆರ್ಮಾಟಾಲಜಿ, ಹೈದ್ರಾಬಾದ್ ಕರ್ನಾಟಕ ಚೆಂಬರ್ ಆಫ್ ಕಾಮರ್ಸನ ಕಾಯಕರತ್ನ, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೇಷ್ಟ ಕಾಯಕ ಜೀವಿ, ಹೆಚ್‍ಕೆಇ ಸಂಸ್ಥೆಯ ಹಿರಿಯ ವೈದ್ಯ ಸದಸ್ಯ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಡಾ. ಪಿ ಎಂ ಬಿರಾದಾರ ಅವರು ಕಲಬುರಗಿ ಲಯನ್ ಕ್ಲಬ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೇಷ್ಟ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವ ಡಾ. ಪಿ ಎಂ ಬಿರಾದಾರ ಅವರನ್ನು ಹಿರಿಯ ವೈದ್ಯ ನಾಡೋಜ ಡಾ. ಪಿ ಎಸ್ ಶಂಕರ, ಡಾ. ಹೆಚ್ ವೀರಭದ್ರಪ್ಪ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ, ಹೆಚ್‍ಕೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಹಿರಿಯ ಪತ್ರಕರ್ತ ಟಿ ವಿ ಶಿವಾನಂದನ್, ಡಾ. ಎಸ್ ಬಿ ಕಾಮರೆಡ್ಡಿ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಸ್ ಎಸ್ ಗುಬ್ಬಿ, ಕಾರ್ಯದರ್ಶಿ ಎಸ್ ಎಸ್ ಹಿರೇಮಠ ಅಭಿನಂದನೆ ಸಲ್ಲಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

24 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

24 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

24 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago