ಶಹಾಬಾದ:ಹಿಂದುಳಿದ ಸಮಾಜ ಮುನ್ನೆಲೆಗೆ ಬರಬೇಕಾದರೆ ಅದು ವಿದ್ಯೆಯಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ನೂರಾರು ವರ್ಷಗಳ ಹಿಂದೆ ಬ್ರಹ್ಮರ್ಷಿ ನಾರಾಯಣ ಗುರುಗಳು ನೀಡಿದ್ದಾರೆ ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.
ಅವರು ನಗರದ ಹಳೆಶಹಾಬಾದನಲ್ಲಿ ಆರ್ಯ ಈಡಿಗ ಸಮಾಜದ ವತಿಯಿಂದ ಬುಧವಾರ ಆಯೋಜಿಸಲಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಶಿಕ್ಷಣದ ಮಹತ್ವ ತಿಳಿಸುವ ಕೆಲಸ ಮಾಡಿದ್ದರು.ಅವರ ಒಂದು ಮಾರ್ಗದರ್ಶನದಿಂದ ಇಂದು ಅನೇಕ ಸಣ್ಣ ಪುಟ್ಟ ಸಮಾಜ ಅಕ್ಷರ ಕಲಿತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಮಾಜಿ ನಗರಸಭೆಯ ಸದಸ್ಯ ಶ್ರೀಶೈಲ ಬೆಳಮಗಿ ಪೂಜೆ ಸಲ್ಲಿಸಿದರು.ಆರ್ಯ ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ,ಆರ್ಯ ಈಡಿಗ ಸಮಾಜದ ಗೌರಾವಾಧ್ಯಕ್ಷ ಭಗವಾನ ಗುತ್ತೆದಾರ, ಉಪಾಧ್ಯಕ್ಷ ಅಶೋಕ ಗುತ್ತೆದಾರ,ಮಲ್ಲಿಕಾರ್ಜುನ ಪೂಜಾರಿ,ಶಿವಕುಮಾರ ನಾಟೀಕಾರ,ಶರಣಪ್ಪ ಕೊಡದೂರ,ಅಣವೀರದ್ಯಾಮಾ, ಬಾಲಾಜಿ ಗುತ್ತೆದಾರ,ವಾಜೀದ ಜಮಾದಾರ, ಸ್ನೇಹಲ್ ಜಾಯಿ, ಸುರೇಶ ಅಪಕಾರಿ, ಸಾಯಿಕುಮಾರ ಗುತ್ತೆದಾರ, ಕಾಶಿನಾಥ ಗುತ್ತೆದಾರ, ಶಂಕರ ಗುತ್ತೆದಾರ, ಮಲ್ಲಿಕಾರ್ಜುನ ಗುತ್ತೆದಾರ, ಮಲ್ಲಿಕಾಜರ್ುನ ಗುತ್ತೆದಾರ, ಯಂಕಯ್ಯ ಗುತ್ತೆದಾರ, ವಿಶ್ವರಾಧ್ಯ ಗುತ್ತೆದಾರ, ಸಾಬಯ್ಯ ಗುತ್ತೆದಾರ, ಉತ್ತಮ ಗುತ್ತೆದಾರ, ಭೀಮಾಶಂಕರ ಗುತ್ತೆದಾರ,ಮಲ್ಲಿಕಾಜರ್ುನ ಅಪಕಾರಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…