ಕಲಬುರಗಿ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಸದೆ ಅದರೊಂದಿಗೆ ಉತ್ತಮ ಜ್ಞಾನ ಸಂಪಾದನೆಯೊಂದಿಗೆ ಒಳ್ಳೆಯ ಸಮಾಜ ನಿರ್ಮಿಸುವುದು ಯುವಕರ ಜವಾಬ್ದಾರಿಯಾಗಿದೆ ಎಂದು ಪಾಳಾದ ಶ್ರೀ ಷ.ಬ್ರ. ಡಾ. ಗುರುಮೂರ್ತಿ ಶಿವಾಚಾರ್ಯರು ಹೇಳಿದರು.
ಪಾಳಾದ ಕಟ್ಟಿಮನಿ ಹಿರೇಮಠದಲ್ಲಿ ಇಂದು ಅಖಿಲ ಭಾರತ ಯುವಜನ ಒಕ್ಕೂಟ ಹಾಗೂ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ “ನಿರ್ಭಯ ಸಾಧಕ” ಪ್ರಶಸ್ತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ ಇಂದಿನ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳು ಅಂಕ ಹೆಚ್ಚು ಪಡೆದು ನೌಕರಿಗಿಟ್ಟಿಸಿ ಸುಖ ಜೀವನ ನಡೆಸುತ್ತಿದ್ದಾರೆ. ಆದರೆ ಉತ್ತಮ ಸಂಸ್ಕಾರದ ಕೊರತೆಯಿಂದ ಮಾನವೀಯ ಮೌಲ್ಯಗಳನ್ನು ಮರೆತು ಬದುಕುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸುತ್ತಾ ಹೆಚ್ಚು ಅಂಕದೊಂದಿಗೆ ಭಾವಿ ಭವಿಷ್ಯ ರೂಪಿಸಿಕೊಂಡು ರಾಷ್ಟ್ರದ ಉತ್ತಮ ನಾಗರಿಕರಾಗಲಿ ಎಂದು ಹಾರೈಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯರಾದ ಅರವಿಂದ ಚವ್ಹಾಣ ಮಾತನಾಡುತ್ತಾ ಇಂದಿನ ದಿನಮಾನಗಳಲ್ಲಿ ಪ್ರತಿಫಲವಿಟ್ಟುಕೊಂಡು ಸಮಾಜ ಸೇವೆ ಮಾಡುವ ಜನರ ಮದ್ಯದಲ್ಲಿ ಯಾವುದೇ ಪ್ರತಿಫಲ ಅಪೇಕ್ಷಿಸದೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಮಕ್ಕಳ ಭವಿಷ್ಯ ನೀಡುವ ಕಾರ್ಯ ಸ್ನೇಹ ಸಂಗಮದ ಕಾರ್ಯ ಶ್ಲಾಘನೀಯ. ಮಾತುಗಳು ಮುಳ್ಳಿನಂತಿದ್ದರು ಅವು ಮತ್ತೊಬ್ಬನನ್ನು ಎಚ್ಚರಿಸಿ ಸರಿ ದಾರಿಗೆ ತರುವ ಗಡಿಯಾರದ ಮುಳ್ಳಾಗಬೇಕೆ ವಿನಃ ಮನಸ್ಸನ್ನು ಚುಚ್ಚುವ ಮುಳ್ಳಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಪ್ರತಿವರ್ಷ ನಗರದಲ್ಲಿ ಮಾಡುವ ಸಮಾರಂಭ ಕೊರೊನಾ ಸೋಂಕಿನಿಂದ ಹಳ್ಳಿ-ಹಳ್ಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಾಳಾದ ಸರಕಾರಿ ಪ್ರೌಢಶಾಲೆ ಮುಖ್ಯಗುರುಗಳಾದ ಮಾರುತಿ ಹುಜರತಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗಲಾಂಬಿಕಾ ಮಾತನಾಡಿದರು.
ವೇದಿಕೆಯ ಮೇಲೆ ಸಂತೋಷ ಅಡೆ, ರಘುನಂದನ ಕುಲಕರ್ಣಿ, ಸಂಗಮೇಶ ಸಿ. ಪಾಟೀಲ ಇದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಕೀರ್ತಿ ಶಿವಪುತ್ರ, ಪೂಜಾ, ಅಂಕಿತಾ, ಪವಿತ್ರಾ, ಕೀರ್ತಿ, ಈಶ್ವರ ಮಾರುತಿ ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ಪೂಜಾ ಜಿ. ಕಲಶೆಟ್ಟಿ, ಅಂಕಿತಾ ಜಿ. ಪೊ. ಪಾಟೀಲ, ಶ್ವೇತಾ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಶಿವರುದ್ರ ಕರಿಕಲ, ಸಾಯಬಣ್ಣಾ ಬೆಳಮ್, ಮಲಕಾರಿ ಪೂಜಾರಿ, ರಾಜಶೇಖರ ಪಾಟೀಲ, ಕಲ್ಯಾಣರಾವ ಮುರುಡ, ರಾಜು ಹೆಬ್ಬಾಳ, ಮಧುಸೂಧನ ಕುಲಕರ್ಣಿ, ಕಿರಣ ಕುಲಕರ್ಣಿ, ಯಲ್ಲಾಲಿಂಗ ಪೂಜಾರಿ, ಸಂಗಣಗೌಡ ಸರಡಗಿ, ಶಿಕ್ಷಕರಾದ ಮಲ್ಲಮ್ಮ ಎಸ್. ಹಿರೇಮಠ, ಗೀತಾ ಭರಣಿ, ಮಲ್ಲಿಕಾರ್ಜುನ ಭಜಂತ್ರಿ, ರಾಜಶೇಖರ ದಬಾಡೆ, ವಿದ್ಯಾವತಿ, ಕಾವೇರಿ ಕಾಂಬಳೆ, ಸರಿತಾ ಯುವಮುಖಂಡರಾದ ಸಂತೋಷ ಸಾಹು, ಬಾಪುಗೌಡ, ಮಾಲಿಪಾಟೀಲ, ಪ್ರವೀಣ ಆಡೆ, ಶಾಂತಪ್ಪಾ ಬನ್ನೂರ, ನಾನಾಗೌಡ ಪೊಲೀಸ್ ಪಾಟೀಲ, ಕರಬಸಯ್ಯ ಮಠಪತಿ ಇತರರು ಭಾಗವಹಿಸಿದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…