ಬಿಸಿ ಬಿಸಿ ಸುದ್ದಿ

ಭೂ ಮಂಜೂರಾತಿ ಸಮಿತಿ ನೇಮಕ: ಬಡ ರೈತರಿಗೆ ನ್ಯಾಯಕ್ಕಾಗಿ ಪ್ರತಿಭಟನೆ

ಜೇವರ್ಗಿ: ಉಳುಮೆ ಮಾಡಲು ಸ್ವಂತ ಜಮೀನು ಇಲ್ಲದೆ ಸುಮಾರು 60 ವರ್ಷಗಳಿಂದ ಗೈರಾಣಿ ಜಮೀನನ್ನು ನಂಬಿಕೊಂಡು ತಮ್ಮ ಕುಟುಂಬವನ್ನು ಸಾಧಿಸುತ್ತಿರುವ ಬಡ ರೈತರಿಗೆ ಸರಕಾರವು ನ್ಯಾಯ ಒದಗಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕರಾದ ಸಿದ್ದರಾಮ ಕಟ್ಟಿ ಆಗ್ರಹಿಸಿದ್ದಾರೆ.

ತಾಲೂಕು ಆಡಳಿತ ಕಚೇರಿಯ ಮುಂದೆ ರೈತರ ಸಮುಖದಲ್ಲಿ ಪ್ರತಿಭಟನೆ ನಡೆಸಿದ ಸಮಿತಿ, ಅತಿವೃಷ್ಟಿಗೆ ರೈತರು ಮುಂಗಾರು ಬೆಳೆಗಳನ್ನು ಬೆಳೆದು ಕಂಗಾಲಾಗಿದ್ದಾರೆ. ಸರಕಾರ ಈ ಕುರಿತು ಪರಿಹಾರ ಯೋಜನೆಯನ್ನು ರೂಪಿಸಬೇಕು ಒತ್ತಾಯಿಸಿದರು.

ಸರಕಾರವು ಒಂದು ವರ್ಷ ಕಳೆದರು ಸಹ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಭೂಮಂಜೂರಾತಿ ಸಮಿತಿಯನ್ನು ರಚನೆ ಮಾಡಿರುವುದಿಲ್ಲ. ಸರಕಾರಿ ಜಮೀನಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ತಕ್ಷಣ ಸರ್ಕಾರದ ನಿಯಮಾನುಸಾರ ಸಾಗುವಳಿ ಚೀಟಿ ನೀಡಿ ಪಹಣಿ ಪತ್ರಿಕೆಯಲ್ಲಿ ಬರುವಂತೆ ಕ್ರಮವಹಿಸಬೇಕು. ಅಲ್ಲದೆ ಸಾಗುವಳಿ ಚೀಟಿ ಪಡೆದುಕೊಂಡ ರೈತರಿಗೆ ತಕ್ಷಣವೇ ಪಹಣಿ ನೀಡುವಂತೆ ತಶಿಲ್ದಾರ ರಿಗೆ ಸೂಚಿಸಬೇಕೆಂದು ಆಗ್ರಹಿಸಿದರು.

ಭೂ ಮಂಜೂರಾತಿ ಸಮಿತಿ ರಚನೆ ಮಾಡಲು ವಿಳಂಬವಾದರೆ ಅರ್ಜಿ ಸಲ್ಲಿಸಿದ ರೈತರಿಗೆ ತಸಿಲ್ದಾರ್ ಇವರ ಮೂಲಕವೇ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ಸರಕಾರ ಆಡಳಿತಕ್ಕೆ ಬರುವ ಮುಂಚೆ ರಾಜ್ಯದ ರೈತರ, ವಿದ್ಯಾರ್ಥಿಗಳ, ಕೂಲಿಕಾರ್ಮಿಕರ, ದಲಿತರ ಹಿಂದುಳಿದ ವರ್ಗದವರ ಹಾಗೂ ಅಲ್ಪಸಂಖ್ಯಾತರ ಶೋಷಿತರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಆಶ್ವಾಸನೆಯನ್ನು ನೀಡಿದ್ದು ಕೇವಲ ಗಗನ ಕುಸುಮವಾಗಿಯೇ ಉಳಿದಿದೆ.

ಸುಮಾರು ಅರವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದ ಭೂಹೀನ ಜನರಿಗೆ ಜಮೀನು ಹಕ್ಕುಪತ್ರಕ್ಕಾಗಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ ಆದರೆ ಹಿಂದಿ ಆಡಳಿತದಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರಗಳು ಸಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಹಕ್ಕುಪತ್ರಗಳನ್ನು ಕೊಡುತ್ತೇವೆ ಎನ್ನುವ ಸುಳ್ಳು ಭರವಸೆಗಳನ್ನು ಬಿಟ್ಟರೆ ಯಾವುದೇ ಕೆಲಸವನ್ನು ಮಾಡಿಲ್ಲ.
ಕೂಡಲೇ ಸರಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ರೂಪಿಸಲಾಗುತ್ತದೆ ಎಂದು ಸಂಘಟನೆ ವತಿಯಿಂದ ಎಚ್ಚರಿಸಲಾಯಿತು.

ಪ್ರತಿಭಟನೆಯಲ್ಲಿ ನೂರಾರು ಜನ ರೈತ ಕಾರ್ಮಿಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಸಿದ್ದರಾಮ ಕಟ್ಟಿ ಹಾಗೂ ಸಂಘಟನಾ ಸಂಚಾಲಕರಾದ ಶಿವ ಕುಮಾರ್ ಹೆಗಡೆ, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮರೆಪ್ಪ ಹೊತ್ತಿನ ಮಡು ದೇವರಾಜ್ ಬನಮಿ, ಮಹಾದೇವ ಕಟ್ಟಿಮನಿ, ಆನಂದ ಮಯೂರ, ಮಲಕಣ್ಣ ಗೌನಳ್ಳಿ, ಶಿವಲಿಂಗ ಬನಾಮಿ ವಿಶ್ವರಾಧ್ಯ ಚಿಕ್ಕ ಜೇವರ್ಗಿ, ಬಸವರಾಜ್ ಅಂಬರಖೇಡ, ಮಲ್ಲಿಕಾರ್ಜುನ್ ಬಿಲ್ಲಾರ್ ಎನ್ಎಸ್ಎಸ್ ರಾಜ್ಯಾಧ್ಯಕ್ಷರು, ಶಿವಶರಣಪ್ಪ ಆಂದೋಲ ಸೇರಿದಂತೆ ನಿಂಗಣ್ಣ ರದ್ದೇವಾಡಗಿ ಇತರ ಮುಖಂಡರು ಭಾಗವಹಿಸಿದ್ದರು. ಜೇವರ್ಗಿ ತಹಸೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಹಾಗೂ ಕಂದಾಯ ಸಚಿವರಾದ ಆರ್ ಅಶೋಕ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago