ಕಲಬುರಗಿ: ದಿನ ನಿತ್ಯ ಬಳಸುವ ಆಹಾರ ಸಾಮಗ್ರಿಗಳ ಬೆಲೆ ದುಬಾರಿ ಆದಕಾರಣ ಗ್ರಾಹಕರು ಕಂಗಾಲು ಬೆಲೆ ಕಡಿಮೆಗೆ ಒತ್ತಾಯಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಯಾ ಸವೇರಾ ಸಂಘಟನೆಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.
ಈ ವೇಳೆಯಲ್ಲಿ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ಮಾತನಾಡಿ, ಲಾಕ್ ಡೌನ್ ತೆರವು ಬಳಿಕ ದಿನಸಿ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂಬ ಜನರ ನಂಬಿಕೆ ಹುಸಿಯಾಗಿದೆ. ಆರ್ಥಿಕ ಸಮಸ್ಯೆಗಳ ನಡುವೆಯೂ ಬೆಲೆ ಏರಿಕೆ ಯಾಗುತ್ತಿರುವುದು ಕುಟುಂಬದ ಮೇಲೆ ಬರೆ ಹಾಕಿದಂತಾಗಿದೆ. ಮೂರು ತಿಂಗಳ ಬಳಿಕ ನಾನಾ ಕಡೆಗಳಲ್ಲಿ ಸಂಭವಿಸಿದ ಅತಿವೃಷ್ಟಿ-ಅನಾವೃಷ್ಟಿ ಎಫೆಕ್ಟ್ ನಿಂದಾಗಿ ಸಾಗಾಣಿಕೆಗೆ ಅಡೆತಡೆ ಉಂಟಾಯಿತು. ಮಾರುಕಟ್ಟೆಗೆ ಬರಬೇಕಿದ್ದ ದವಸಧಾನ್ಯಗಳು ಬಂದು ತಲುಪಲಿಲ್ಲ ಅದಕ್ಕಾಗಿ ಬೆಲೆ ಏರಿಕೆ ತುಂಬಾ ಜಾಸ್ತಿ ಆಯ್ತು ಕಳೆದ ಹದಿನೈದು ದಿನಗಳ ಹಿಂದೆ ಸಾಮಾನ್ಯ ಅಡುಗೆ ದರ 1ಕೆಜಿ ರೂ.20 ಹೆಚ್ಚಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಡೀಸೆಲ್ ದರ ದಿನನಿತ್ಯ ಏರುತ್ತಲೇ ಇದೆ. ಮಿಲ್ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸವಿಲ್ಲವೇ ಬೇರೆ ಕಡೆ ಹೋಗಿ ಜೀವನ ನಡೆಸುತ್ತಿದ್ದಾರೆ. ಇದರ ಪರಿಣಾಮ ದಿನಸಿ ಪದಾರ್ಥಗಳ ಮೇಲೆ ಬೀಳುತ್ತಿದೆ. ಉತ್ಪಾದನೆ ಕಂಪನಿಗಳ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಲಿವೆ. ಕಾರ್ಮಿಕರು ಕೋರೋನಾ ರೋಗಕ್ಕೆ ಭಯಗೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿದ್ದು, ಇದರಿಂದ ಕಂಪನಿಗಳಿಗೆ ಕಾರ್ಮಿಕರು ಕೊರತೆಯಾಗಿದೆ. ದಿನಸಿಗಳ ಪ್ಯಾಕಿಂಗ್ ಮಾಡುವುದು ಕಡಿಮೆಯಾಗಿದೆ. ತೊಗರಿ ಬೆಳೆ ದರದಲ್ಲಿ ಕನಿಷ್ಠ 10 ಪರ್ಸೆಂಟ್ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದರು.
ಜನರ ಕಷ್ಟವನ್ನು ಅರಿತು ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿತಗೊಳಿಸಿ ಸಂಘಟನೆ ಸದಸ್ಯರ ಸಮುಖದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಚಿತಾಪುರ್, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ರಾಬಿಯಾ ಶಿಕಾರಿ, ಬಾಬಾ ಫಕ್ರುದ್ದಿನ್ ಅನ್ಸಾರಿ, ಮುಬಿನ್ ಅನ್ಸಾರಿ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…