ಕಲಬುರಗಿ: ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಗೆ ಕಳೆದವರ್ಷ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿರುವಂತೆ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾರಣೆಗೆ “ಕಲ್ಯಾಣ ಕರ್ನಾಟಕ ಉತ್ಸವ” ಆಚರಿಸಲು ಆದೇಶ ಹೊರಡಿಸಿರುವುದು ಸಂತೋಷದ ವಿಷಯ, ಇದಕ್ಕೆ ಪೂರ್ವಕವಾಗಿ ಈ ಉತ್ಸವದ ರೂಪರೇಷಗಳನ್ನು ಹಮ್ಮಿಕೊಂಡು ಮುಂದಿನ ವರ್ಷದಿಂದ ವ್ಯಾಪಕ ಸ್ವರೂಪದಲ್ಲಿ ಕಲ್ಯಾನ ಕರ್ನಾಟಕ ಪ್ರದೇಶದ ಶ್ರೀಮಂತ ಇತಿಹಾಸ ಬಿಂಬಿಸುವ ರೀತಿಯಲ್ಲಿ ಆಚರಿಸಲು ಕ್ರಮಕೈಗೊಳ್ಳಲಾಗುವುದೆ೦ದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ ರವರು ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ನಿಯೋಗ ಕೆ.ಕೆ.ಆರ್.ಡಿ.ಬಿ.ಭವನದಲ್ಲಿ ಇಂದು ಮಂಡಳಿಯ ಅಧ್ಯಕ್ಷರಿಗೆ ಕಲ್ಯಾಣ ಕರ್ನಾಟಕ ಉತ್ಸವದ ಪರಿಕಲ್ಪನೆ ಮತ್ತು ಅದರ ರೂಪರೇಷಗಳನ್ನು ಸಿದ್ಧಪಡಿಸಲು ಅಧಿಕೃತವಾದ ಒಂದು ಸಮಿತಿಯನ್ನು ರಚಿಸಿ ಆದಷ್ಟು ಶೀಘ್ರ ಸರಕಾರಕ್ಕೆ ವರದಿಸಲ್ಲಿಸಿ ಸರ್ಕಾರದ ಅನುಮೊದನೆ ಪಡೆದು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ವ್ಯಾಪಕ ಸ್ವರೂಪ ನೀಡಲು, ಅದರಂತೆ, ಸ್ವಾತಂತ್ರ ಯೋದರ ಸ್ಮರಣಾರ್ಥ, ವಿಮೋಚನಾ ಭವನ ನಿರ್ಮಿಸಲು, ಸರ್ದಾರ ವಲ್ಲಭಭಾಯಿ ಪಟೇಲ ವೃತ್ತವನ್ನು ಆ:ುನಿಕರಣ ಮತ್ತು ಸೌಂಧರಿಕರಣ ಗೋಳಿಸಲು ಸೇರಿದಂತೆ ವಿವಿದ ವಿಷಯದ ಮನವಿ ಪತ್ರವನ್ನು ಸಲ್ಲಿಸಿ ವಿಸ್ತ್ರೀತ ಸಭೆ ನಡಸಲಾಯಿತು. ಈ ಸಭೆಯಲ್ಲಿ ಮಂಡಳಿಯ ಅಧ್ಯಕ್ಷರು, ಮೇಲಿನಂತೆ ಭರವಸೆ ನೀಡಿರುವುದಲ್ಲದೆ. ತಾವ್ರ ಕಾಲ ಮಿತಿಯಲ್ಲಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಯ ಬಗ್ಗೆ ಧಿಟ್ಟ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭಗಲ್ಲಿ ಮಂಡಳಿಯ ಕಾರ್ಯದರ್ಶಿಗಳಾದ ಎನ್.ವಿ.ಪ್ರಸಾದ, ಸಮಿತಿಯ ಅಧ್ಯಕ್ಷರಾದ ಶಶೀಲ ಜಿ.ನಮೋಶಿ, ಸದಾಧಿಕಾರಿಗಳಾದ ಲಕ್ಷ್ಮಣ ದಸ್ತಿ, ಸುರೇಶ ನಂದಿಯಾಳ, ಅಣ್ಣಾರಾವ ಧುತ್ರಗಾಂವ, ಮನಿಷ್ ಜಾಜು, ಪ್ರೋ.ಶಿವರಾಜ ಪಾಟೀಲ, ಜ್ಹಾನಮಿತ್ರಾ ಶಾಮಿವೆಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…