ಶಹಾಬಾದ:ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಅನಕ್ಷರಸ್ಥ ಜನತೆಯನ್ನು ಚೀನಾದಲ್ಲಿ ಸಮಾಜವಾದಿ ಕ್ರಾಂತಿ ಸ್ಥಾಪಿಸಿದ ಮಹಾನ್ ನಾಯಕ ಮಾವೋ ಜೆಡಾಂಗ್ ಎಂದು ಎಸಯುಸಿಐ ಕಮುನಿಷ್ಟ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ.ಎಸ್.ಇಬ್ರಾಹಿಂಪೂರ ಹೇಳಿದರು.
ಅವರು ಬುಧವಾರ ಎಸಯುಸಿಐ ಕಮುನಿಷ್ಟ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಮಾವೋ ಜೆಡಾಂಗ್ ಅವರ 44ನೇ ಸ್ಮಾರಕ ಸಭೆಯಲ್ಲಿ ಮಾತನಾಡಿದರು.
ಅವರು ಅನಕ್ಷರಸ್ಥ ಮತ್ತು ತೀವ್ರವಾಗಿ ಹಿಂದುಳಿದ ಚೀನಾದ ಜನತೆಯಲ್ಲಿ ಕಮ್ಯೂನಿಸ್ಟ ವಿಚಾರವನ್ನು ಬೆಳೆಸಿ ಮಹಾ ನಡಿಗೆ ಕರೆ ಒಟ್ಟು ಹತ್ತು ಸಾವಿರ ಕಿಮೀ. ದೂರದವರೆಗೂ ನಡೆದು ಸಮಾಜವಾದಿ ಕ್ರಾಂತಿಗೆ ಹೊಸ ಹೆಜ್ಜೆ ಇಟ್ಟರು.ಇಂತಹ ಸಮಾಜವಾದಿ ಕ್ರಾಮರಿಗೆ ನಾವೆಲ್ಲರೂ ಸಜ್ಜಾಗಬೇಕಿದೆ. ದೇಶದ ಯುವಜನರು ಇವರ ವಿಚಾರಗಳನ್ನು ತಿಳಿದುಕೊಂಡು ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ಕೋಮುವಾದ ವಿರುದ್ಧ ಹೋರಾಡಬೇಕಿದೆ. ರೈತರು ಹಾಗೂ ಕಾರ್ಮಿಕರನ್ನು ಸಂಘಟಿಸಿ ಭಾರತದಲ್ಲೂ ಭಗತ್ಸಿಂಗ, ನೇತಾಜಿಯವರ ಕನಸಿನ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಮಾಡಬೇಕಿದೆ ಎಂದು ಹೇಳಿದರು.
ಎಸಯುಸಿಐ ಸ್ಥಳೀಯ ಕಾರ್ಯದರ್ಶಿ ಗಣಪತರಾವ ಮಾನೆ ಮಾತನಾಡಿ, ಮಾವೋ ಜೆಡಾಂಗ್ ಅವರು ಶ್ರೀಮಂತ ಕುಟುಂಬದಿಂದ ಬಂದಿದ್ದರೂಇಡೀ ಕಾಮರ್ಿಕ ವರ್ಗದ ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.ಅವರ ಜೀವನಚರಿತ್ರೆಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇಂದು ನಮ್ಮ ಯುವಜನರಿಗಿದೆ ಎಂದು ಹೇಳಿದರು. ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ಎಸಯುಸಿಐ ಕಮುನಿಷ್ಟ ಪಕ್ಷದ ಸದಸ್ಯ ಜಗನ್ನಾಥ.ಎಸ್.ಹೆಚ್, ಗುಂಡಮ್ಮ ಮಡಿವಾಳ, ಶಿವುಕುಮಾರ ಇ.ಕೆ, ರಾಧಿಕ ಚೌಧರಿ, ಕಸ್ತೂರಿ ಕುಸಾಳೆ, ಪ್ರವೀಣ ಬಣಮೀಕರ್,ತುಳಜಾರಾಮ ಎನ್. ಕೆ, ರಮೇಶ ದೇವಕರ್ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…