ಬಿಸಿ ಬಿಸಿ ಸುದ್ದಿ

ಶಹಾಬಾದನ ಮುಖ್ಯರಸ್ತೆಯಲ್ಲಿ ಹೊಲಸು ನೀರು ಸಾರ್ವಜನಿಕರ ಆಕ್ರೋಶ

ಶಹಾಬಾದ: ಗಬ್ಬೆದ್ದು ನಾರುತ್ತಿರುವ ವಾತಾವರಣ, ಚರಂಡಿ ನೀರು, ಶೌಚಾಲಯದ ನೀರು ರಸ್ತೆಯ ಮೇಲೆ ಹರಿದು ಇಡೀ ನಗರದ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ. ಇದು ನಗರದ ಮುಖ್ಯ ರಸ್ತೆಯ ಮ್ಯಾಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ನೂತನ ಕಟ್ಟಡದ ಮುಂಭಾಗದ ದೃಶ್ಯ.

ಉತ್ತಮ ಕಟ್ಟಡದ ಮುಂದೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕೆಲಸ.ಆದರೆ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ನರಕ ಸೃಷ್ಠಿಯಾಗಿದೆ.ಸುಮಾರು ಒಂದೂವರೆ ವರ್ಷದಿಂದ ಅರ್ಧ ರಸ್ತೆ ಹೊಲಸು ರಾಡಿಯಿಂದ ತುಂಬಿ ತುಳುಕುತ್ತಿದ್ದರೂ, ಇಬ್ಬರು ಪೌರಾಯುಕ್ತರು ಬಂದು ಕಂಡು ಕಾಣದಂತೆ ನನಗೂ ಅದಕ್ಕೂ ಯಾವುದೇ ಸಬಂಧವಿಲ್ಲ ಎನ್ನುವಂತೆ ವರ್ತಿಸಿ ವರ್ಗಾವಣೆಯಾಗಿ ಹೋಗಿದ್ದಾರೆ. ಅಲ್ಲದೇ ಸುಮಾರು ಬಾರಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಗಮನಕ್ಕೂ ತರಲಾಗಿದೆ.ಅಲ್ಲದೇ ಅವರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರ ಆರೋಪವಾಗಿದೆ.

ನಗರದ ಮುಖ್ಯ ರಸ್ತೆಯಾಗಿದ್ದರಿಂದ ನಗರದೊಳಗೆ ಪ್ರವೇಶ ಮಾಡಬೇಕಾದರೂ, ನಗರದಿಂದ ಬೇರೆ ಊರಿಗೆ ಹೋಗಬೇಕಾದರೂ ಇದೇ ರಸ್ತೆಯ ಮೂಲಕವೇ ಹೋಗಬೇಕಾಗುತ್ತದೆ.ಮಳೆ ಬಂದಾಗಲೊಮ್ಮೆ ಈ ರಸ್ತೆ ನೋಡಿದರೇ ಎಲ್ಲಿಲ್ಲದ ಆಕ್ರೋಶ ಭಾವನೆ ಉಂಟಾಗದೇ ಇರುವುದಿಲ್ಲ. ಊರಿನ ಎಲ್ಲಾ ಹೊಲಸು ನೀರು, ಪ್ಲಾಸ್ಟಿಕ್ ತ್ಯಾಜ್ಯ ಎಲ್ಲಾ ಕೂಡ ರಸ್ತೆಯ ಆವರಿಸಿ ಗಬ್ಬೆದ್ದು ನಾರುತ್ತಿರುತ್ತದೆ. ಜನರು ಇದೇ ಕೊಳಕು ನೀರಿನಲ್ಲಿ ಐದಾರು ತಿಂಗಳಿನಿಂದ ದಾಟುವಂಥ ಪರಿಸ್ಥಿತಿ ಬಂದೊದಗಿದೆ. ಆ ಬಗ್ಗೆಯೂ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಪಕ್ಕದಲ್ಲಿಯೇ ಆಂಜನೇಯ ದೇವಸ್ಥಾನ ಇದೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ.ಅವರಿಗಾದರೂ ಉತ್ತಮ ವಾತಾವರಣ ಕಲ್ಪಿಸಬೇಕೆಂಬ ಪರಿಜ್ಞಾನ ಅಧಿಕಾರಿ ವರ್ಗದವರಿಗಿಲ್ಲ. ರಸ್ತೆಯ ಮಧ್ಯೆ ಕಳಪೆ ಮಟ್ಟದ ಡಿವೈಡರ್, ಅದರ ಒಂದು ಕಡೆ ಚರಂಡಿ ನಿರ್ಮಿಸಲಾಗಿದೆ ಅದು ಕೂಡ ಕಳಪೆ ಮಟ್ಟದ್ದು.ಅಲ್ಲದೇ ರಸ್ತೆಗಿಂತ ಎರಡು ಅಡಿ ಎತ್ತರ ನಿರ್ಮಿಸಿದಕ್ಕೆ ನೀರು ಹೋಗುವುದಕ್ಕೆ ದಾರಿ ಇಲ್ಲದೇ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ. ಕೇವಲ ಸಭೆ ಸಮಾರಂಭಗಳಿಗೆ ಬಂದು ಹೋಗುವ ಶಾಸಕರು ಸ್ವಲ್ಪ ಈ ಕಡೆ ಗಮನಹರಿಸಿ. ಇಲ್ಲಿನ ಗಂಭೀರ ಸಮಸ್ಯೆಯನ್ನು ಬಗೆಹರಿಸಿ ಜನರ ಸಮಸ್ಯೆಗೆ ಸ್ಪಂದಿಸಿ ಎಂಬುದು ಸಾರ್ವಜನಿಕರ ಅಂಬೋಣವಾಗಿದೆ.

emedia line

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago