ಆಳಂದ: ನಿಂಬರ್ಗಾ ಗ್ರಾ.ಪಂ. ಮುಂದೆ ಕ.ರ.ವೇ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಿಂಬರ್ಗಾ ಗ್ರಾಮದಲ್ಲಿ ಗ್ರಾ.ಪಂ. ಇದ್ದರೂ, ಗ್ರಾಮ ಇನ್ನೂ ಅಭಿವೃದ್ಧಿ ಕಾಣದೆ ಇರೋದು ದುರ್ದೈವವಾಗಿದ್ದು, ವಾರ್ಡ್-2 (ಶರಣ ನಗರ)ದಲ್ಲಿ ಇದುವರೆಗೂ ಒಂದೇ ಒಂದು ಸಿ.ಸಿ. ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಸಾಕಷ್ಟು ಬೀದಿ ದೀಪಗಳಿಲ್ಲ,ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,ಬಚ್ಚಲ ನೀರು ರಸ್ತೆ ಮೇಲೆ ನಿಂತು ಅನೇಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದರು.
ರೈತಾಪಿ ವರ್ಗದ ಧನ-ಕರುಗಳು, ಆಕಳು, ಎಮ್ಮೆ ಕೇಸರಿನಲ್ಲೇ ನಿಂತಿ ರೋಗಕ್ಕೆ ತುತ್ತಾಗುತ್ತಿವೆ.ಸ್ವಲ್ಪ ಮಳೆ ಬಂದರೆ ಕೆಸರು ಗದ್ದೆಯಂತಾಗುವ ಶರಣ ನಗರದಲ್ಲಿನ ರಸ್ತೆಗಳು ಅನೇಕ ಮಕ್ಕಳು ಹಾಗೂ ವೃದ್ಧರು ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳು ನಡೆದಿವೆ. ಅನೇಕ ಭಾರಿ ಗ್ರಾ.ಪಂ. ಗೆ ವಿಷಯ ತಿಳಿಸಿದ್ದರು, ಮನವಿ ಪತ್ರ ಕೊಟ್ಟರು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಕೂಡಲೇ ಈ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ನಿಂಬರ್ಗಾ ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಸರಿಯಾಗಿ ರಸ್ತೆ,ನೀರು,ಚರಂಡಿ ವ್ಯವಸ್ಥೆ,ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ, ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ,ಯುವ ಘಟಕ ಅಧ್ಯಕ್ಷ ಪ್ರವೀಣ್ ಮಿಟೆಕಾರ, ರೈತ ಘಟಕ ಅಧ್ಯಕ್ಷ ಧರ್ಮರಾಯ ವಗ್ದರ್ಗಿ,ವಿಧ್ಯಾರ್ಥಿ ಘಟಕ ಅಧ್ಯಕ್ಷ ಈರಣ್ಣ ಶರಣ,ಕಾರ್ಮಿಕ ಘಟಕ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ,ಗ್ರಾ.ಘಟಕ ಉಪಾಧ್ಯಕ್ಷ ಮಹಾದೇವ ಮಿಟೆಕಾರ, ಕಾರ್ಯದರ್ಶಿಗಳಾದ ಸಚಿನಕುಮಾರ ಶೀಲವಂತ, ಶಿವಕುಮಾರ ಕುಂಭಾರ, ಕ್ಷೇಮಲಿಂಗ ಕಂಭಾರ, ಹಾಗೂ ಅನಿಲಕುಮಾರ ಮಠಪತಿ,ಶಿವಲಿಂಗ ನಾಗಶೆಟ್ಟಿ,ವೈಜನಾಥ ಮಾ.ಪಾಟೀಲ್ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…