ಬಿಸಿ ಬಿಸಿ ಸುದ್ದಿ

ಬೀದಿನಾಯಿ ದಾಳಿ: ಪಾದಚಾರಿಗೆ ಗಂಭೀರ ಗಾಯ

ಕಲಬುರಗಿ: ವಾಡಿ ಪಟ್ಟಣದಲ್ಲಿ ಹಿಂಡು ಹಿಂಡಾಗಿ ಓಡಾಡುತ್ತಿರುವ ಬೀದಿ ನಾಯಿಗಳೀಗ ಪಾದಚಾರಿಗಳ ಮೇಲೆ ದಾಳಿ ನಡೆಸಲು ಶುರುಮಾಡಿದ್ದು, ರಕ್ತದ ರುಚಿ ನೋಡುತ್ತಿವೆ. ಕ್ರೂರ ಸ್ವಾನಗಳ ಕಡಿತದಿಂದ ಗಂಭೀರವಾಗಿ ಗಾಯಗೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ದಿನಪತ್ರಿಕೆ ವಿತರಿಸುವ ಯುವಕನೋರ್ವ ಬೀದಿ ನಾಯಿ ಕಡಿತಕ್ಕೆ ಗಾಯಗೊಂಡು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜತೆಗೆ ಈಗಾಗಲೇ ಐದಾರು ಕುರಿಗಳು ರಕ್ತಪಿಪಾಸು ನಾಯಿಗಳ ಬಾಯಿಗೆ ಆಹಾರವಾಗಿವೆ. ಬುಧವಾರ ಮದ್ಯಾಹ್ನ ರೈಲ್ವೆ ಕಾಲೋನಿ ರಸ್ತೆಯ ಮೇಲೆ ನಡೆದುಕೊಂಡು ಮಾರುಕಟ್ಟೆಗೆ ಬರುತ್ತಿದ್ದ ವಿಜಯನಗರದ ನಿವಾಸಿ ಪರಶುರಾಮ ಜಾಲಹಳ್ಳಿ (೨೫) ಕೂಲಿ ಕಾರ್ಮಿಕನೋರ್ವನ ಮೇಲೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿದ್ದು, ರಕ್ಷಣೆಗಾಗಿ ಕೈಎತ್ತಿದ ಪಾದಚಾರಿಯ ಎರಡೂ ಕೈಗಳಿಗೆ ಬಾಯಿ ಹಾಕಿ ಮಾಂಸಕಂಡ ಹರಿದು ಭಾರಿ ರಕ್ತಗಾಯಗೊಳಿಸಿದ ಘಟನೆ ಸಂಭವಿಸಿದೆ. ಅಕ್ಕಪಕ್ಕದ ಜನ ಕೂಗಿದ ಕಾರಣಕ್ಕೆ ನಾಯಿ ಪಲಾಯನ ಮಾಡಿತು. ಗಾಯಳುವನ್ನು ತಕ್ಷಣ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಬೀದಿನಾಯಿಗಳ ಜತೆ ಹುಚ್ಚು ನಾಯಿಗಳ ಸಂಚಾರ: ಬೀದಿ ನಾಯಿಗಳ ಉಪಟಳ ಹೆಚ್ಚಾಗಿ ಎರಡು ತಿಂಗಳು ಕಳೆದಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಿರ್ಭಯವಾಗಿ ಸಂಚರಿಸುತ್ತಿವೆ. ಬಡಾವಣೆಗಳಲ್ಲೂ ಇವುಗಳ ಹಾವಳಿ ಮಿತಿಮೀರಿದೆ. ಗುಂಪುಗಟ್ಟಿ ಕಚ್ಚಾಡುತ್ತವೆ. ಮಕ್ಕಳನ್ನು ಕಂಡರೆ ದಾಳಿ ನಡೆಸುತ್ತವೆ. ಕ್ರೂರ ನಾಯಿಗಳ ಹೆದರಿಕೆಯಿಂದ ಜನರು ಬಲು ಎಚ್ಚರದಿಂದಿರಬೇಕಾದ ಸ್ಥಿತಿ ಬಂದಿದೆ. ಬಿಡಾಡಿ ದನಗಳು, ಕುರಿಗಳು, ಹಂದಿಗಳು ನಗರದ ವಾಹನ ಸಂಚಾರಿ ವ್ಯವಸ್ಥೆಗೆ ಅಡ್ಡಿಯುಂಟುಮಾಡುತ್ತಿವೆ. ನರನ ರಕ್ತದ ರುಚಿ ಕಂಡಿರುವ ಬೀದಿ ನಾಯಿಗಳಿಂದ ದಾಳಿಗಳು ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.

ಪುರಸಭೆ ಆಡಳಿತ ಮೌನ: ವಿವಿಧ ಬಡಾವಣೆಗಳಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚು ಬೀದಿನಾಯಿಗಳು ಕಂಡುಬರುತ್ತಿವೆ. ಜನರು ಪದೇಪದೆ ನಾಯಿಗಳ ಕಡಿತಕ್ಕೊಳಗಾಗುತ್ತಿದ್ದಾರೆ. ಗಾಯಗೊಂಡವರ ಪಟ್ಟಿ ಆಸ್ಪತ್ರೆಯಲ್ಲಿ ಸಿದ್ಧವಿದೆ. ಪುರಸಭೆ ಆಡಳಿತದ ವಿರುದ್ಧ ಸಾರ್ವಜನಿಕರು ಶಾಪ ಹಾಕುತ್ತಿದ್ದರೂ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಮಾತ್ರ ತಮಗೇನೂ ಸಭಂದವಿಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೆಷ್ಟು ಜನ ಪಾದಚಾರಿಗಳು ಬೀದಿನಾಯಿಗಳ ದಾಳಿಗೆ ಗಾಯಗೊಂಡು ನರಳಾಡಬೇಕೋ ಗೊತ್ತಿಲ್ಲ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago