ಬಿಸಿ ಬಿಸಿ ಸುದ್ದಿ

ಉತ್ತಮ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ

ಕಲಬುರಗಿ: ಒಂದು ರಾಷ್ಟ್ರ ಭ್ರಷ್ಟಾಚಾರ ಹಾಗೂ ಸಮೃದ್ಧ ಸುಂದರ ದೇಶವಾಗಬೇಕಾದರೆ ಈ ಮೂವರ ಪಾತ್ರ ಅತ್ಯಂತ ಪ್ರಮುಖವಾಗಿದೆ ಅವರೇ ತಾಯಿ, ತಂದೆ ಹಾಗೂ ಶಿಕ್ಷಕ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ  ಶ್ರೀ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ನುಡಿದರು.

ನಿನ್ನೆ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘ ಹಾಗೂ ಶ್ರೀ ವೀರತಪಸ್ವಿ ಚನ್ನವೀರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಗಳಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಖಣದಾಳ ಪ್ರೌಢಶಾಲೆಯ ಮುಖ್ಯಗುರುಗಳಾದ ದಿನಕರ ಮೂಲಗೆ ಅವರಿಗೆ ನಗರದ ಜಗತ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಯ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಯಶಸ್ಸನ್ನು ತಲುಪಲು ಎಲ್ಲಿಯು ಸುಲಭದ ಲಿಫ್ಟ್ ವ್ಯವಸ್ಥೆ ಇಲ್ಲ. ಅದನ್ನು ತಲುಪಲು ಪ್ರತಿಯೊಬ್ಬರು ಶ್ರಮದ ಮೆಟ್ಟಿಲು ಹತ್ತಿ ಸುಂದರ ಬದುಕು ರೂಪಿಸಿಕೊಳ್ಳಬೇಕೆಂದು ಹೇಳಿದರು.

ಸ್ವಾರ್ಥವಿಟ್ಟುಕೊಂಡು ಕೆಲವರು ಸಾಮಾಜಿಕ ಕಾರ್ಯ ಮಾಡುವವರ ಮಧ್ಯದಲ್ಲಿ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವ ಸ್ನೇಹ ಸಂಗಮ ಸಂಘದ ಕಾರ್ಯ ಶ್ಲಾಘನೀಯ, ಇಂತಹ ಕಾರ್ಯದೊಂದಿಗೆ ಸಂಘವು ಇನ್ನಷ್ಟು ಮಾನವೀಯ ಮೌಲ್ಯ ಬಿತ್ತುವ ಕಾರ್ಯ ಮಾಡಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿದ ದಿನಕರ ಮೂಲಗೆ ಮಾತನಾಡುತ್ತಾ ಸನ್ಮಾನ, ಅಧಿಕಾರ, ಪ್ರಶಸ್ತಿ ಹಿಂದೆ ಹೋಗದೆ ನಾವು ಯಾವುದೇ ವೃತ್ತಿಯಲ್ಲಿ ಪೂಜ್ಯತೆ ಭಾವನೆಯಿಂದ ಪ್ರಾಮಾಣಿಕವಾಗಿ ಕಾಯಕ ಮಾಡುತ್ತಿದ್ದರೆ ತಾವಿದ್ದ ಸ್ಥಳದಲ್ಲಿಯೆ ಪ್ರಶಸ್ತಿ ಬರುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಹಾಗೂ ಮಾಜಿ ವಿದ್ಯಾರ್ಥಿಯಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ನಾವು ಕಲಿತಿರುವ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದಿಂದ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಮಾಡಿ ಸಮಾಜ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ  ವೀರತಪಸ್ವಿ ಚನ್ನವೀರ ಪ್ರೌಢಶಾಲೆಯ ಮುಖ್ಯಗುರುಗಳಾದ ಶಿವಾನಂದ ಬಿರಾದಾರ, ಶಿಕ್ಷಕರಾದ ಸಿದ್ದಣ್ಣ ಸಜ್ಜನ, ಚನ್ನಮಲ್ಲಯ್ಯ ಹಿರೇಮಠ, ಶಿವಾನಂದ ಸಾಗರ ಮಾಜಿ ವಿದ್ಯಾರ್ಥಿಗಳಾದ ಸಂಗಮೇಶ ನಾಗೂರ, ಸಿದ್ದಾರೂಢ ಖೇಳಗಿ, ಮಹಾದೇವ ನಾಗೂರ, ಗೌಡಪ್ಪಾ ಶೇರಿಕಾರ, ಶಿವಶರಣ ರಟಗಲ, ಸಿದ್ರಾಮೇಶ, ಸಂತೋಷ ಸಂಘಾ, ಚನ್ನವೀರಯ್ಯ ಸ್ವಾಮಿ ಹಾಗೂ ಶರಣರಾಜ ಛಪ್ಪರಬಂದಿ, ರವಿಕುಮಾರ ಶಹಾಪುರಕರ, ಭಾಗ್ಯ ಮೂಲಗೆ, ದಯಾನಂದ ಮೂಲಗೆ, ಬಸವರಾಜ ಪಾಟೀಲ, ಗುರುರಾಜ ಕುಲಕರ್ಣಿ, ಮಹಬೂಬ ಪಟೇಲ ಸರಡಗಿ, ಉಪನ್ಯಾಸಕ ಶಿವಯ್ಯ ಮಠಪತಿ, ಶರಣಬಸಪ್ಪ ಬಿರಾದಾರ ಇತರರು ಭಾಗವಹಿಸಿದ್ದರು.

ದಿನಕರ ಮೂಲಗೆಯವರ ಧರ್ಮಪತ್ನಿಯಾದ ಶ್ರೀಮತಿ ಸುರೇಖಾರವರಿಗೆ ವಿಶೇಷವಾಗಿ ಗೌರವಿಸಲಾಯಿತು. ಮಾಜಿ ವಿದ್ಯಾರ್ಥಿಯಾದ ಸಂಗೀತ ಶಿಕ್ಷಕ ವೀರೇಶ ಹಾಗೂ ಜಗದೀಶ ಹೂಗಾರ ಇವರಿಂದ ಸಂಗೀತ ಸುಧೆ ಏರ್ಪಡಿಸಲಾಗಿತ್ತು. ನಂತರ ಜನಪದ ಕಲಾವಿದ ರಾಜು ಹೆಬ್ಬಾಳ ಹಲವಾರು ಜನಪದ ಗೀತೆಗಳನ್ನು ಹಾಡುವ ಮೂಲಕ ಸಭಿಕರ ಮನರಂಜಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago