ಬಿಸಿ ಬಿಸಿ ಸುದ್ದಿ

ವೀರಶೈವ ಲಿಂಗಾಯತ ಸಮಿತಿಯಿಂದ ಡಾ. ಈಶ್ವರಯ್ಯ ಮಠರಿಗೆ ನುಡಿ ನಮನ

ಸುರಪುರ: ಕಳೆದ ಕೆಲ ದಿನಗಳ ಹಿಂದೆ ನಿಧನರಾದ ಪ್ರಾಧ್ಯಾಪಕ ಡಾ: ಈಶ್ವರಯ್ಯ ಮಠ ಅವರಿಗೆ ಸುರಪುರ ತಾಲೂಕು ವೀರಶೈವ ಲಿಂಗಾಯತ ಸಮಿತಿ ಹಾಗು ಶ್ರೀ ಬಸವೇಶ್ವರ ಉಚಿತ ಪ್ರಸಾದ ನಿಲಯದ ಹಳೆ ವಿದ್ಯಾರ್ಥಿಗಳ ಬಳಗದ ವತಿಯಿಂದ ನುಡಿ ನಮನ ಅರ್ಪಿಸಲಾಯಿತು.ನಗರದ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಡಾ: ಈಶ್ವರಯ್ಯ ಮಠರ ಜೀವನ ಸಾಧನೆ ಕುರಿತು ಗುಣಗಾನ ಮಾಡಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ವೀರಶೈವ ಲಿಂಗಾಯತ ಸಮಿತಿ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ, ಡಾ: ಈಶ್ವರಯ್ಯ ಮಠ ಅವರು ನಮ್ಮ ಸಮಿತಿಯ ಶ್ರೀ ಬಸವೇಶ್ವರ ಉಚಿತ ಪ್ರಸಾದ ನಿಲಯದ ಮೊದಲ ವಿದ್ಯಾರ್ಥಿಗಳಾಗಿದ್ದರು.ಡಾ: ಈಶ್ವರಯ್ಯ ಮಠ ಅವರ ಜ್ಞಾನ ಸಾಹಿತ್ಯದ ಸೇವೆ,ಅವರ ಚಿಂತನೆ ಮತ್ತು ಅವರ ಸಿದ್ಧಾಂತ ಮೆಚ್ಚುವಂತದ್ದಾಗಿತ್ತು.ಇಂದು ಅವರನ್ನು ಕಳೆದುಕೊಂಡು ನಮಗೆಲ್ಲ ತುಂಬಾ ದುಃಖವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಶಿವುಕುಮಾರ ಹಿರೇಮಠ ಮಾತನಾಡಿ,ಡಾ: ಈಶ್ವರಯ್ಯ ಮಠ ಅವರು ಒಬ್ಬ ಸಾಹಿತ್ಯದ ಸೇವಕ,ವೈಚಾರಿಕ ವಾದಿ,ಸಾಂಸ್ಕೃತಿಕ ಸಾರಥಿ,ಚಿಂತಕ ಎಲ್ಲವನ್ನು ಅವರಲ್ಲಿ ಕಂಡಿದ್ದೇವೆ.ಅವರ ವಿಚಾರ ಸ್ಪಷ್ಟತೆ ಮತ್ತು ನೇರ ನುಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ಅವರು ಹೇಳುತ್ತಿದ್ದ ಅನುಭಾವ ಮತ್ತು ಆಧ್ಯಾತ್ಮವಿಲ್ಲದ ದೇಶ ಅಪಾಯಕ್ಕೆ ಸಿಲುಕುತ್ತದೆ ಎಂಬ ನಿಲುವು ಸತ್ಯವಾದುದಾಗಿದೆ ಎಂದರು.ಅವರು ಹೇಳಿದ ಮಾತು ಜಂಗಮ ಎನ್ನುವುದು ಸ್ಪಷ್ಟತೆಯಿತ್ತು ಆದರೆ ಅದನ್ನು ಜಂಗಮ ಎಂಬುದನ್ನು ನಾವು ಜಾತಿಯಾಗಿಸುತ್ತಿರುವುದಾಗಿ ಅವರ ವಿರೋಧವಿತ್ತು ಎಂಬ ನಿಲುವು ಚಿಂತನಾಅರ್ಹವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರೈತ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ,ಡಾ: ಈಶ್ವರಯ್ಯ ಮಠರ ಹಳೆಯ ವಿದ್ಯಾರ್ಥಿಗಳಾದ ಸುಭಾಸ ಪಾಟೀಲ ಬುದೂರು ಸೇರಿದಂತೆ ಅನೇಕರು ಮಾತನಾಡಿದರು.ಸಭೆಯ ಆರಂಭದಲ್ಲಿ ಡಾ: ಈಶ್ವರಯ್ಯ ಮಠದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ನಂತರ ಈಶ್ವರಯ್ಯ ಮಠ,ಬಸವರಾಜ ರುಮಾಲ,ಪತ್ರಕರ್ತ ಸೋಮಶೇಖರ ನರಬೋಳಿ,ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ಸಾಹಿತಿ ಎ.ಕೃಷ್ಣಾ,ದೇವೆಂದ್ರಪ್ಪ ನರಬೋಳಿ ಸೇರಿದಂತೆ ಇತ್ತೀಚೆಗೆ ಅಗಲಿದಿ ಎಲ್ಲರನ್ನು ನೆನೆದು ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಎಲ್ಲರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸಭೆಯ ವೇದಿಕೆ ಮೇಲೆ ಮುಖಂಡರಾದ ಬಸವಲಿಂಗಪ್ಪ ಪಾಟೀಲ ಜಿ.ಎಸ್.ಪಾಟೀಲ ಶಿವರಾಜಪ್ಪ ಗೋಲಗೇರಿ ಬಸವಲಿಂಗಪ್ಪ ಸಜ್ಜನ್ ಶಾಂತಪ್ಪ ಬೂದಿಹಾಳ ಎಮ್.ಎಸ್.ಹಿರೇಮಠ ವೀರಪ್ಪ ಆವಂಟಿ ಉಪಸ್ಥಿತರಿದ್ದು ಮಾತನಾಡಿದರು.

ಸೋಮಶೇಖರ ಶಾಬಾದಿ ನಬಿಲಾಲ ಮಕಾಂದಾರ ಶರಣಪ್ಪ ಕಲಕೇರಿ ಸಂಗಣ್ಣ ಎಕ್ಕೆಳ್ಳಿ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಚೆನ್ನಮಲ್ಲಿಕಾರ್ಜುನ ಗುಂಡಾನೂರ ಅಯ್ಯಪ್ಪ ಅಕ್ಕಿ ಶಾಂತರಾಜ ಬಾರಿ ವಿರೇಶ ನಿಷ್ಠಿ ದೇಶಮುಖ ಈರಣ್ಣ ಕುಂಬಾರ ಕನ್ನಳ್ಳಿ ಸಿದ್ದಯ್ಯ ಸ್ಥಾವರಮಠ ಚಂದ್ರಶೇಖರ ಡೊಣೂರ ಶಿವರಾಜ ಕಲಕೇರಿ ಮಲ್ಲಿಕಾರ್ಜುನ ಕಮತಗಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಕಾಳಗಿ; ರಟಕಲ್ ಗ್ರಾಮದಲ್ಲಿ ವಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 mins ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago