ಬಿಸಿ ಬಿಸಿ ಸುದ್ದಿ

ಡಾ. ಅಂಬೇಡ್ಕರ್‌ ಗೆ ಕ್ಷೌರ ಸೇವೆ ನಿರಾಕರಿಸಿ ಮೀಸಲಾತಿಯಿಂದ ವಂಚಿತರಾಗಿದ್ದೇವೆ ಎಂ.ಬಿ ಶಿವಕುಮಾರ್ ಬೇಸರ

ಬೆಂಗಳೂರು: ಕ್ಷೌರಿಕರು ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಕ್ಷೌರ ಸೇವೆ ನಿರಾಕರಿಸಿ ಮೀಸಲಾತಿಯಿಂದ ವಂಚಿತರಾಗಿದ್ದೇವೆ ಎಂದು ಕ್ಷೌರಿಕ ಮೀಸಲಾತಿ ಒಕ್ಕೂಟದ ರಾಜ್ಯಾಧ್ಯಕ್ಷರಾದ ಎಂ.ಬಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಕ್ಷೌರಿಕರು ಬಲಿಷ್ಠ ಜಾತಿಗಳಿಗೆ ಮುಕ್ತವಾಗಿ ಕ್ಷೌರ ಸೇವೆಯನ್ನು ನೀಡಿ, ಪರಿಶಿಷ್ಟರನ್ನು ಹಾಗೂ ವಿಶ್ವಮಾನವ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಕ್ಷೌರ ಸೇವೆ ಮಾಡದೆ ಕಡೆಗಣಿಸಿದ್ದಕಾಗಿ ಇವತ್ತು ನಾವು ಪರಿಶಿಷ್ಟ ಜಾತಿಗೆ ಸೇರಿಲ್ಲ. ಆ ಸಮಯದಲ್ಲಿ ಎಲ್ಲಾ ಸಮುದಾಯಕ್ಕೆ ಕ್ಷೌರ ಸೇವೆ ನೀಡಿದ್ದರೆ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರು ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಊರಿನ ಪ್ರಬಲ ಜಾತಿಗಳ ಮುಖಂಡರ ಹಾಗೂ ಬಲಿಷ್ಠ ಜಾತಿಗಳ ದೌರ್ಜನ್ಯಕ್ಕೆ ಮುಲಾಜಿಗೆ ಹೆದರಿ ಇವತ್ತು ಹಿಂದುಳಿದ ವರ್ಗದಲ್ಲಿ ಅಪಮಾನಕ್ಕೆ ಜಾತಿನಿಂದನೆ ಗೆ ಅಪಹಾಸ್ಯಕ್ಕೆ ಗುರಿಯಾಗಿ ಹಿಂದುಳಿದವರಲ್ಲಿ ಅತಿ ಹಿಂದುಳಿದವರ ಆಗಿ ಉಳಿದಿದ್ದೇವೆ. ಆದ್ದರಿಂದ ಈಗಲಾದರೂ ಎಲ್ಲಾ ದಲಿತ ಸಮುದಾಯಕ್ಕೆ ಕ್ಷೌರ ಸೇವೆಯನ್ನು ನೀಡಬೇಕಾಗಿ ರಾಜ್ಯದ ಎಲ್ಲಾ ಕ್ಷೌರಿಕರಲ್ಲೂ ಮನವಿ ಮಾಡಿದ್ದಾರೆ.

ಕ್ಷೌರಿಕರು ಪರಿಶಿಷ್ಟ ಜಾತಿಯ ಒಂದು ಭಾಗ ಅಂದರೆ ತಪ್ಪಾಗಲಾರದು ಆದ್ದರಿಂದ ಈಗಿನ ಭಾರತದ ಸರ್ವೋಚ್ಚ ನ್ಯಾಯಾಲಯ ರಾಜ್ಯಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ನಿರ್ದೇಶನವನ್ನು ನೀಡಿದ್ದು ಇದರ ಬಗ್ಗೆ ಪರಿಶಿಷ್ಟ ವರ್ಗದ ಸಂಘಟನೆಗಳು ಪರಿಶಿಷ್ಟ ವರ್ಗದ ಮಂತ್ರಿಗಳು ಮಾಜಿ ಮಂತ್ರಿಗಳು ಮಾಜಿ ಶಾಸಕರು ಒಗ್ಗೂಡಿ ಚರ್ಚೆ ನಡೆಸುತ್ತಿದ್ದಾರೆ. ಇದೇ ವೇಳೆ ಹಿಂದುಳಿದ ವರ್ಗಗಳ ಆಯೋಗದ ಈ ವರದಿಯನ್ನು ಸದನದಲ್ಲಿ ಮಂಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎನ್ನುವ ಮಾಜಿ ಸಚಿವ ಎಚ್‌. ಆಂಜನೇಯ ಅವರ ಮಾತುಗಳನ್ನು ರಾಜ್ಯಾಧ್ಯಕ್ಷರಾದ ಎಂ.ಬಿ ಶಿವಕುಮಾರ್‌ ಸ್ವಾಗತಿಸಿದ್ದಾರೆ.

ಆದರೆ ನಮ್ಮ ಕ್ಷೌರಿಕ ಸಮಾಜಕ್ಕೆ ಧ್ವನಿಯಿಲ್ಲದ ಜಾತಿಯ ಶಕ್ತಿಯಿಲ್ಲದೆ ಶಕ್ತಿ ಹೀನವಾದ ಈ ನಿರ್ಗತಿಕ ಕ್ಷೌರಿಕ ಸಮಾಜಕ್ಕೆ ಮಾನ್ಯ ಮುಖ್ಯಮಂತ್ರಿಗಳು. ಪರಿಶಿಷ್ಟ ವರ್ಗದ ಮಂತ್ರಿಗಳು. ಶಾಸಕರು. ಮಾಜಿ ಮಂತ್ರಿಗಳು ಸ್ವಯಂಪ್ರೇರಿತರಾಗಿ ನಮಗೆ ಶೈಕ್ಷಣಿಕವಾಗಿ. ರಾಜಕೀಯವಾಗಿ ಒಳಮೀಸಲಾತಿಯನ್ನು ಕೊಡಿಸಿ. ಸಾಮಾಜಿಕ ನ್ಯಾಯ ಕೊಡಬೇಕಾಗಿ ಇದೇ ಸಂಧರ್ಭದಲ್ಲಿ ಮನವಿ ಮಾಡಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

17 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago