ಕಲಬುರಗಿ: ಸಂತೋಷ ಕಾಲೋನಿಯ ಕೆ.ಎಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯ ಮೂಲಭೂತ ಸೌಕರ್ಯ ಹಾಗೂ ಪಾಲಿಯಿಂದ ಸೇವೆ ಒದಗಿಸಲು ಒತ್ತಾಯಿಸಿ ಬಡಾವಣೆಯ ಮುಖಂಡರ ನೇತೃತ್ವದಲ್ಲಿ ಪಾಲಿಕೆಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಬಡಾವಣೆಯಲ್ಲಿ ಕಸ ವಿಲೇವಾರಿ, ಬೀದಿ ದೀಪ ಅಳವಡಿಸುವುದು, ಬಿದ್ದು ಹೋದ ಕಾಂಪೌಂಡ್ ಗೋಡೆ ನಿರ್ಮಿಸುವುದು ಹಾಗೂ ಅಚ್ಚುಕಟ್ಟಾಗಿ ಬಡಾವಣೆಯ ನಿರ್ವಹಣೆಗೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಆಯುಕ್ತರು ಮನವಿಗೆ ಸ್ಪಂದಿಸಿ ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆಸಿ ದಿನ ನಿತ್ಯ ಕಸ ವಿಲೇವಾರಿಗೆ ಸೂಚಿಸಿದರು.
ಕತ್ತಲಲ್ಲಿರುವ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಮೂರು ದಿನಗಳಲ್ಲಿ ಅಳವಡಿಸಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಈ ವೇಳೆಯಲ್ಲಿ ಬರವಸೆ ನೀಡಿದರು.
ಇತ್ತಿಚೆಗೆ ಬಾರಿ ಮಳೆಯಿಂದ ಕುಸಿದು ಬಿದ್ದ ಬಡಾವಣೆಯ ಕಾಂಪೌಂಡ್ ಗೋಡೆಯನ್ನು ಮುಖ್ಯ ಕಛೇರಿಯ ಅನುಮೋದನೆ ಸಿಕ್ಕ ಬಳಿಕ ಗೋಡೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಬಡಾವಣೆಯ ಮುಖಂಡರಾದ ಸಂಜೀವಕುಮಾರ ಶೆಟ್ಟಿ, ಸಂಗಮೇಶ ಸರಡಗಿ, ನಾಗೇಂದ್ರಪ್ಪ ದಂಡೋತಿಕರ, ಡಿ.ವಿ ಕುಲಕರ್ಣಿ, ರೇವಣಸಿದ್ದಪ್ಪ ರುದ್ರವಾಡಿ, ಹಣಮಂತ್ರಾಯ ಅಟ್ಟುರ, ಚಂದ್ರಕಾಂತ ತಳವಾರ, ರಾಜಶೇಖರ ಜಕ್ಕಾ, ಕೆ.ವಿ ಕುಲಕರ್ಣಿ, ಶ್ರೀನಿವಾಸ ಬುಜ್ಜಿ, ಬಾಲಕೃಷ್ಣ ಕುಲಕರ್ಣಿ, ಸಿದ್ದಾರೂಡ ಅಷ್ಟಗಾ, ವಿರೇಶ ಬೋಳಶೆಟ್ಟಿ, ಲೋಕಯ್ಯ ಸ್ವಾಮಿ, ಶಂಬುಲಿಂಗ ವಾಡಿ ಹಾಗೂ ಮುಂತಾದ ಮುಖಂಡರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…