ಬಿಸಿ ಬಿಸಿ ಸುದ್ದಿ

ಅಶೋಕ ಗಸ್ತಿ ನಮ್ಮ ಸಮಾಜದ ಅಭಿವೃಧ್ಧಿಯ ಹರಿಕಾರರಾಗಿದ್ದರು: ಅಪ್ಪಣ್ಣ ಚಿನ್ನಾಕಾರ

ಸುರಪುರ: ಕೇವಲ ಎರಡೆ ತಿಂಗಳ ಹಿಂದೆ ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದ ಅಶೋಕ ಗಸ್ತಿಯವರು ನಮ್ಮ ಸವಿತಾ ಸಮಾಜದ ಅಭಿವೃಧ್ಧಿಯ ಹರಿಕಾರರಾಗಿದ್ದರು ಎಂದು ಸವಿತಾ ಸಮಾಜ ಸಂಘದ ಜಿಲ್ಲಾಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಮಾತನಾಡಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಅಶೋಕ ಗಸ್ತಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಗಸ್ತಿಯವರು ತುಂಬಾ ಕಷ್ಟದಲ್ಲಿಯೆ ಶಿಕ್ಷಣ ಪಡೆದು ವಕೀಲರಾಗಿ ಅನೇಕ ಜನರಿಗೆ ನ್ಯಾಯ ಕೊಡಿಸಿದ್ದಾರೆ.ಅವರ ಪಕ್ಷಕ್ಕಾಗಿ ದುಡಿದ ಶ್ರಮ ಮತ್ತು ಪ್ರತಿಭೆಯನ್ನು ನೋಡಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಗಿತ್ತು.ಆದರೆ ಇಂದು ಅವರು ನಮ್ಮನ್ನು ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ ಎಂದರು.

ರೈತ ಹೋರಾಟಗಾರ ಯಲ್ಲಪ್ಪ ಚಿನ್ನಾಕಾರ ಮಾತನಾಡಿ,ಅಶೋಕ ಗಸ್ತಿಯವರು ನಮ್ಮ ಸಮಾಜದ ಏಳಿಗೆಗಾಗಿ ತುಂಬಾ ಶ್ರಮ ಪಟ್ಟಿದ್ದರು.ಅವರನ್ನು ಕಳೆದುಕೊಂಡು ಸವಿತಾ ಸಮಾಜ ಬಡವಾಗಿದೆ.ಸರಕಾರ ಅಶೋಕ ಗಸ್ತಿಯವರ ನೆನಪಿಗಾಗಿ ಏನಾದರು ಯೋಜನೆಯನ್ನು ರೂಪಿಸಬೇಕು ಎಂದರು.ಅಲ್ಲದೆ ಭಗವಂತ ಗಸ್ತಿಯವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಹಾಗು ಅಶೋಕ ಗಸ್ತಿಯವರ ಆತ್ಮಕ್ಕೆ ಶಾಂತಿ ದೊರೆಯಲಿದೆ ಪ್ರಾರ್ಥಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗಸ್ತಿಯವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.

ಸಭೆಯಲ್ಲಿ ಸವಿತಾ ಸಮಾಜದ ರಾಜ್ಯ ಸಮಿತಿ ನಿರ್ದೇಶಕ ಸೂರ್ಯಕಾಂತ ಚಿನ್ನಾಕಾರ ಮುಖಂಡರ ರಮೇಶ ಚಿನ್ನಾಕಾರ ಮಂಜುನಾಥ ಚಿನ್ನಾಕಾರ ಮಂಜುನಾಥ ಅನವರ ತಿಪ್ಪಣ್ಣ ಉಟ್ಗೂರ ಬಾಲರಾಜ ಚಿನ್ನಾಕಾರ ಯಲ್ಲಪ್ಪ ದುಗನೂರ ದೇವಿಂದ್ರಪ್ಪ ಅಜ್ಜಕೊಲಿ,ನರಸಪ್ಪ ಚಿನ್ನಾಕಾರ ನರಸಪ್ಪ ಮುಂದಿನಮನಿ ಪರಶುರಾಮ ಚಿನ್ನಾಕಾರ ಬಸವರಾಜ ಗೌಡಗೇರಿ ವಿಶ್ವನಾಥ ನಸಲವಾಯಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

4 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

15 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

15 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

17 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

17 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

17 hours ago